ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ.
ಈ ಗೆಲುವು ರಾಜ್ಯದಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿದೆ. ಜಯ ಗಳಿಸುತ್ತಿದ್ದಂತೆ ಟ್ವೀಟ್ ಮಾಡಿದ ಆರ್ಸಿಬಿ ತಂಡ, “ಇದು ನಿಮ್ಮ ಗೆಲುವು, ಮನೆಯಲ್ಲಿಯೇ ಸುರಕ್ಷಿತವಾಗಿ ಸಂಭ್ರಮಿಸಿ” ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದೆ. ಆರ್ಸಿಬಿಯ ಈ ಸಾಧನೆಗೆ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ನಿಯೋಜಿತ ಸಿಎಂ ಡಿಕೆಶಿವಕುಮಾರ್, ಇದು ನಮ್ಮ ಆರ್ಸಿಬಿಯ ಸುವರ್ಣ ಅಧ್ಯಾಯ. ಸತತ ಎರಡನೇ ಬಾರಿ ಕಪ್ ಗೆಲ್ಲುವ ಮೂಲಕ ತಂಡ ಇತಿಹಾಸ ನಿರ್ಮಿಸಿದೆ. ಧೈರ್ಯ ಮತ್ತು ಸಂಯಮದಿಂದ ಆಟಗಾರರು ಬೆಂಗಳೂರಿಗೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಫೈನಲ್ ಪಂದ್ಯವನ್ನು ಬೆಂಗಳೂರಿನ ಬದಲು ಅಹ್ಮದಾಬಾದ್ನಲ್ಲಿ ಆಯೋಜಿಸಿದ್ದಕ್ಕೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.
Tonight, Bengaluru rises again as champions!
ಈ ಸಲವೂ ಕಪ್ ನಮ್ದೇ ⭐️⭐️
RCB has created history by clinching a second consecutive IPL title. With grit, composure, and the heart of true champions, the team has once again made Bengaluru proud.
Congratulations to the players,… pic.twitter.com/y2hgXT4m2l
— DK Shivakumar (@DKShivakumar) May 31, 2026
ಹಂಗಾಮಿ ಸಿಎಂ ಸಿದ್ದರಾಮಯ್ಯ, ಆರ್ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯೋತ್ಸವದ ಆಚರಣೆಗಳ ಕುರಿತು ರಾಜ್ಯ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿ ಹೊರಡಿಸಿದೆ. ಇದು ನಿಮ್ಮ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ. ಆದ್ದರಿಂದ ದಯವಿಟ್ಟು ಅವುಗಳನ್ನು ಅನುಸರಿಸಲು ಮರೆಯದಿರಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಆರ್ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯುದ್ದಕ್ಕೂ ಆರ್ಸಿಬಿ ಹುಡುಗರು ತೋರಿದ ಕೆಚ್ಚೆದೆಯ ಆಟಕ್ಕೆ ಎದುರಾಳಿ ತಂಡಗಳ ಬಳಿ ಉತ್ತರವೇ ಇಲ್ಲವೇನೋ ಎಂಬಂತಿತ್ತು. ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿರುವ ನಮ್ಮ ಆರ್ಸಿಬಿಗೆ ಅಭಿನಂದನೆಗಳು.
ಇಂದಿನ ಫೈನಲ್ ಪಂದ್ಯದಲ್ಲಿ ರಸಿಕ್ ಧಾರ್,… pic.twitter.com/zQ3PfHtBh5
— Siddaramaiah (@siddaramaiah) May 31, 2026
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ನಮ್ಮ ಹೆಮ್ಮೆಯ ಆರ್ಸಿಬಿ ಸುವರ್ಣ ಇತಿಹಾಸ ಬರೆದಿದೆ ಎಂದು ಶ್ಲಾಘಿಸಿ ಅಭಿನಂದಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರ್ಸಿಬಿ ಕ್ರಿಕೆಟ್ ಅಂಗಳದಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ ಎಂದು ಕೊಂಡಾಡಿದ್ದಾರೆ.


