Menu

ಮಳೆ ಬಂದರೆ ಅಂಡರ್‌ಪಾಸ್ ಬಂದ್ ಇದು “ಬ್ರಾಂಡ್ ಬೆಂಗಳೂರು”: ಆರ್‌ ಅಶೋಕ

ಉತ್ತರಹಳ್ಳಿ ನ್ಯಾಯಾಂಗ ಬಡಾವಣೆಯಲ್ಲಿ ನಿರ್ಮಾಣವಾದ ಅಂಡರ್‌ಪಾಸ್ ಸ್ವಲ್ಪ ಮಳೆಯಾದರೂ ನೀರಿನಿಂದ ತುಂಬಿ ವಾಹನ ಸಂಚಾರವೇ ಸ್ಥಗಿತಗೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯಿಲ್ಲದ ಯೋಜನೆಗಳಿಗೆ ಸ್ಪಷ್ಟ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕುಟುಕಿದ್ದಾರೆ.

“ನಾನು ಟನಲ್ ಮಾಡುತ್ತೇನೆ, ಬ್ರಾಂಡ್ ಬೆಂಗಳೂರು ನಿರ್ಮಿಸುತ್ತೇನೆ” ಎಂದು ಹೇಳುವ @DKShivakumar ಅವರೇ, ನಿಮ್ಮ ಟನಲ್ ಯೋಜನೆಗಳ ಭವಿಷ್ಯವೂ ಇದೇನಾ ಎಂದು ಜನತೆಗೆ ಸ್ಪಷ್ಟಪಡಿಸಿ. ಕಮಿಷನ್ ರಾಜಕಾರಣಕ್ಕೆ ಆದ್ಯತೆ ನೀಡಿ, ಜನರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಮರೆತ ಪರಿಣಾಮ ಇಂದು ಅಂಡರ್‌ಪಾಸ್‌ಗಳು ನೀರಿನಲ್ಲಿ ಮುಳುಗುತ್ತಿವೆ ಎಂದು  ಟೀಕಿಸಿದ್ದಾರೆ.

ಅಂಡರ್‌ಪಾಸ್‌ಗಳನ್ನು ಸರಿಯಾಗಿ ನಿರ್ವಹಿಸಲು ಆಗದ ಸರ್ಕಾರ, ಇಡೀ ಬೆಂಗಳೂರಿನ ಭವಿಷ್ಯವನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದೆ? “ಸ್ವಲ್ಪ ಮಳೆ ಬಂದರೂ ಮುಳುಗುವ ಅಭಿವೃದ್ಧಿ” ಕಾಂಗ್ರೆಸ್ ಆಡಳಿತದ ಅವ್ಯವಸ್ಥೆಯ ಸ್ಪಷ್ಟ ಸಾಕ್ಷಿ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಜಾನಪದ ವಿಶ್ವವಿದ್ಯಾಲಯದ ನೌಕರರಿಗೆ ಸಂಬಳವಿಲ್ಲ

11 ತಿಂಗಳಿಂದ ವೇತನವಿಲ್ಲದೇ ಜಾನಪದ ವಿಶ್ವವಿದ್ಯಾಲಯದ ನೌಕರರು ಸಂಕಷ್ಟದಲ್ಲಿದ್ದಾರೆ. ಇದು ಕೇವಲ ಒಂದು ವಿಶ್ವವಿದ್ಯಾಲಯದ ಸಮಸ್ಯೆಯಲ್ಲ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಪ್ರತಿಬಿಂಬ. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ, ಈಗ ಶಿಕ್ಷಣ, ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೂ ಅನುದಾನ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮತತೊಂದು ಎಕ್ಸ್‌ ಪೋಸ್ಟ್‌ನಲ್ಲಿ  ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅಭಿವೃದ್ಧಿ ಯೋಜನೆಗಳು ಸೊರಗುತ್ತಿವೆ, ಸರ್ಕಾರಿ ಇಲಾಖೆಗಳು ಅನುದಾನದ ಕೊರತೆಯಿಂದ ನರಳುತ್ತಿವೆ, ಈಗ ವಿಶ್ವವಿದ್ಯಾಲಯಗಳ ನೌಕರರಿಗೂ ವೇತನ ನೀಡಲು ಆಗದ ಸ್ಥಿತಿಗೆ @siddaramaiah ನೇತೃತ್ವದ ಸರ್ಕಾರ ರಾಜ್ಯವನ್ನು ತಳ್ಳಿದೆ. ದೀಪದ ಕೆಳಗೆ ಕತ್ತಲೆ” ಎನ್ನುವಂತಾಗಿದೆ ಕಾಂಗ್ರೆಸ್ ಆಡಳಿತದ ವಾಸ್ತವ ಸ್ಥಿತಿ — ಗ್ಯಾರಂಟಿಗಳ ಜಾಹೀರಾತಿಗೆ ಕೋಟಿ ಕೋಟಿ ಖರ್ಚು, ಆದರೆ ನೌಕರರ ವೇತನಕ್ಕೆ ಹಣವಿಲ್ಲ . ಜನರ ಬದುಕು, ನೌಕರರ ಭವಿಷ್ಯ, ಶಿಕ್ಷಣ ಸಂಸ್ಥೆಗಳ ಗೌರವ — ಇವೆಲ್ಲವೂ ಕಾಂಗ್ರೆಸ್ ಗ್ಯಾರಂಟಿ ರಾಜಕಾರಣಕ್ಕೆ ಬಲಿ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *