Menu

ತುಂಡು ಬಟ್ಟೆ ಹಾಕಿ ರೀಲ್ಸ್‌ ಮಾಡಬೇಡ ಅಂದಿದ್ದಕ್ಕೆ ಸೊಸೆಯಿಂದ ಕಿರುಕುಳ: ಅತ್ತೆ, ಮಾವ ಆತ್ಮಹತ್ಯೆ

ಸೊಸೆ ತುಂಡು ಬಟ್ಟೆ ಹಾಕಿ ರೀಲ್ಸ್ ಮಾಡುತ್ತಿದ್ದುದಕ್ಕೆ ಅತ್ತೆ-ಮಾವ ಅಕ್ಷೇಪ ವ್ಯಕ್ತಪಡಿಸಿದ್ದರಿಂದ ಆರಂಭಗೊಂಡ ಜಗಳ ಮುಂದುವರಿದು ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾಗಿದೆ.

ಹರಿಯಾಣದ ಪಾಣಿಪತ್‌ನಲ್ಲಿ ತುಂಡು ಬಟ್ಟೆ ಹಾಕಿ ರೀಲ್ಸ್ ಮಾಡುತ್ತಿದ್ದುದಕ್ಕೆ ಅತ್ತೆ-ಮಾವ ಅಕ್ಷೇಪಿಸುವುದನ್ನು ಸಹಿಸದ ಸೊಸೆ ಅವರಿಗೆ ಕಿರುಕುಳ ನೀಡಿ ಬೆದರಿಸಿ ಹಲ್ಲೆಗೂ ಯತ್ನಿಸಿದ್ದಳು. ಇದರಿಂದ ಉಂಟಾದ ಮಾನಸಿಕ ಒತ್ತಡದಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಾಜೇಶ್ ಮತ್ತು ಸುಮನ ದಂಪತಿಯ ಮಗನ ಪತ್ನಿ ಸ್ನೇಹಾ ಪ್ರತಿದಿನ ಸಣ್ಣ ಬಟ್ಟೆಗಳನ್ನು ಧರಿಸಿ ಮೈ ತೋರಿಸುತ್ತ ರೀಲ್ಸ್ ಮಾಡುತ್ತಿದ್ದಳು. ಅತ್ತೆ-ಮಾವ ಇದಕ್ಕೆ ಆಕ್ಷೇಪಿಸಿ ಸೊಸೆಗೆ ಹಾಗೆ ಮಾಡದಂತೆ ಸೂಚನೆ ನೀಡಿದ್ದರು.

ಇದರಿಂದ ಅಸಮಾಧಾನಗೊಂಡ ಸ್ನೇಹಾ ಮತ್ತು ಆಕೆಯ ಕುಟುಂಬಸ್ಥರು ಅತ್ತೆ-ಮಾವಗೆ ಕಿರುಕುಳ ನೀಡಿ ಬೆದರಿಸಿ ಹಲ್ಲೆಗೂ ಮುಂದಾದರು ಎಂಬ ಆರೋಪವಿದೆ. ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಜೇಶ್ ಮತ್ತು ಸುಮನ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ರಾಜೇಶ್ ಅವರ ಸಹೋದರರು ಮಡ್ಲೌಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಸ್ನೇಹಾ (ಸೊಸೆ), ಸ್ನೇಹಾಳ ತಾಯಿ, ತಂದೆ ಮತ್ತು ಸಹೋದರಿ ನಾಲ್ವರು ಆರೋಪಿಗಳುತಲೆಮರೆಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿ ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *