Menu

ಝಾಂಬಿ ಡ್ರಗ್‌ ವೀಡಿಯೊ: ದುನಿಯಾ ವಿಜಯ್‌, ಭಾಸ್ಕರ್ ರಾವ್‌ಗೆ ನೋಟಿಸ್‌?

ಬೆಂಗಳೂರಿನ ರಸ್ತೆಯೊಂದರಲ್ಲಿ ಝಾಂಬಿ ಡ್ರಗ್‌ ಸೇವನೆಗೆ ಸಂಬಂಧಿಸಿದಂತೆ ವ್ಯಕ್ತಿಯ ವೀಡಿಯೊವನ್ನು ವೈರಲ್‌ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ.

ನಟ ದುನಿಯಾ ವಿಜಯ್‌, ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಲವು ಮಂದಿ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ನಗರ ಪೊಲೀಸರು ಆರಂಭದಲ್ಲಿ 25 ಮಂದಿಗೆ ನೋಟಿಸ್‌ ನೀಡುವ ಸಾಧ್ಯತೆಯಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಸೀಮಂತ್‌ ಕುಮಾರ್‌ ಸಿಂಗ್‌, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಯುವಕನನ್ನು ಪರೀಕ್ಷೆ ಮಾಡಿದ್ದೇವೆ. ಆತ ಯಾವುದೇ ಝಾಂಬಿ ಡ್ರಗ್‌ ಸೇವಿಸಿಲ್ಲ. ಈ ವೀಡಿಯೊ ಶೇರ್‌ ಮಾಡಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಬಾಗಲೂರು ಪೊಲೀಸರು ವೀಡಿಯೊ ಅಪ್ಲೋಡ್ ಮಾಡಿದ್ದ ವ್ಯಕ್ತಿ ಬಂಧಿಸಿದ್ದು, ಆತ ಕ್ಷಮೆ ಕೇಳಿ ವೀಡಿಯೊ ಮಾಡಿದ್ದಾನೆ. ಆ ವೀಡಿಯೊ ಶೇರ್ ಮಾಡಿವರಿಗೆಲ್ಲ ನೋಟಿಸ್ ನೀಡುತ್ತೇವೆ. ಆಧಾರರಹಿತ ಮಾಹಿತಿ ಶೇರ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಹೇಳಿದ್ದಾರೆ.

ಮೆಡಿಕಲ್ ರಿಪೋರ್ಟ್ ಆಧಾರದ ಮೇಲೆ ಕಾಮೆಂಟ್ ಮಾಡಬೇಕು. ಅಪಪ್ರಚಾರ ಮಾಡುವ ಕೆಲಸ ಆಗಬಾರದು. ಊಹೆ ಮಾಡಿಕೊಂಡು ಈ ರೀತಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ವಿದೇಶದಲ್ಲಿ ಈ ರೀತಿ ಡ್ರಗ್ ಸೇವನೆ ಇದೆ ಎಂದು ಅವನು ವೀಡಿಯೊ ಅಪ್ಲೋಡ್ ಮಾಡಿದ್ದಾನೆ. ಆತನನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *