ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ತಾತ್ಕಾಲಿಕವಾಗಿ ವಿರಾಮ ಕಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬ್ಯಾರೆಲ್‌ಗೆ 100 ಡಾಲರ್ ಇಳಿಕೆಯಾಗಿದೆ.
ಯುದ್ಧದ ವೇಳೆ ಬ್ಯಾರೆಲ್‌ಗೆ 160 ಡಾಲರ್ ವರೆಗೂ ಏರಿಕೆಯಾಗಿತ್ತು. ಕದನ ವಿರಾಮದಿಂದ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 13 ರಿಂದ 14ರಷ್ಟು ಇಳಿಕೆಯಾಗಿದೆ. ಯುದ್ಧದ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಸಮಸ್ಯೆಯಾಗಿಲ್ಲ. ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯಗೊಂಡು ಸಮಸ್ಯೆ ಆಗಿತ್ತು. ಬೆಲೆ ಇಳಿಕೆ ಕಾರಣದಿಂದ ಭಾರತದಲ್ಲಿ ಸದ್ಯಕ್ಕೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ.
ಎರಡು ವಾರಗಳ ಬಳಿಕ ಯುದ್ಧ ಮತ್ತೆ ಶುರುವಾದರೆ ಸಮಸ್ಯೆ ಬಿಗಡಾಯಿಸಲಿದೆ. ಯುದ್ಧದ ಪರಿಸ್ಥಿತಿ ಎದುರಾದರೆ ಬೆಲೆ, ಹಣದುಬ್ಬರ ನಿಯಂತ್ರಿಸಲು ಶೇಖರಣೆಯ ಅಗತ್ಯವಿದೆ. ಹೀಗಾಗಿ ಸದ್ಯ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸದ ಸಾಧ್ಯತೆಗಳಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇದೀಗ 94 ರಿಂದ 96 ಡಾಲರ್ ಇಳಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಅತಿ ದೊಡ್ಡ ಕುಸಿತ. ಭಾರತ ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಕದನ ವಿರಾಮ ಮುಂದುವರಿದು ಶಾಶ್ವತ ಪರಿಹಾರ ಕಂಡುಕೊಂಡರೆ ಭಾರತದಲ್ಲಿ ತೈಲ ಬೆಲೆಯಲ್ಲಿ ವ್ಯತ್ಯಾಸ ಆಗಬಹುದು, ಆದರೆ ಭಾರಿ ಇಳಿಕೆ ಆಗದು. ಹಣದುಬ್ಬರ ನಿಯಂತ್ರಸಲು ಪೆಟ್ರೋಲ್ ಡೀಸೆಲ್ ಬೆಲೆ ಸುಸ್ಥಿರವಾಗಿಡುವ ಸಾಧ್ಯತೆ ಹೆಚ್ಚು.


