Menu

ಭಾರತದಲ್ಲಿ12 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಒರಾಕಲ್‌

ಅಮೆರಿಕದ ಐಟಿ ಕಂಪನಿ ಒರಾಕಲ್‌ ಭಾರತದಲ್ಲಿ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ, ಮುಂದಿನ ಒಂದು ತಿಂಗಳ ಒಳಗೆ ಮತ್ತೊಂದು ಸುತ್ತಿನಲ್ಲಿ ಉದ್ಯೋಗ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ಕಂಪನಿಯು ಜಾಗತಿಕವಾಗಿ 30,000 ಉದ್ಯೋಗಗಳನ್ನು ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಒರಾಕಲ್‌ ಕಂಪನಿಯು ಭಾರತದಲ್ಲಿ ಒಟ್ಟು 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಈಗಾಗಲೇ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇನ್ನಷ್ಟು ಕಡಿತ ಸಾಧ್ಯತೆಯಿದ್ದು, ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಒರಾಕಲ್‌ ಕಂಪನಿ ನಿರಾಕರಿಸಿದೆ.

12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವಮೊದಲು ಕಂಪೆನಿ ಯಾವುದೇ ಸೂಚನೆ ನೀಡದೆ ನೇರವಾಗಿ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ವಿಷಯ ತಿಳಿಸಿದೆ. ಸಂಸ್ಥೆಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಿಮ್ಮ ಪಾತ್ರವನ್ನು ತೆಗೆದುಹಾಕಲು ನಿರ್ಧಾರ ತೆಗೆದುಕೊಂಡಿದ್ದೇವೆ. ಇಂದು ನಿಮ್ಮ ಕೆಲಸದ ಕೊನೆಯ ದಿನವಾಗಿದೆ ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ.

Related Posts

Leave a Reply

Your email address will not be published. Required fields are marked *