Menu

ಬೆಸುಗೆಯ ಹೊಸ ಆರಂಭ ‘ಜೋಡಿ ನಂ.1’ ಇದೇ ಏಪ್ರಿಲ್ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ

ಜೀ ಕನ್ನಡ  ವೀಕೆಂಡ್ ಎಂಟರ್ಟೈನ್ಮೆಂಟ್ ಅನ್ನು ಇನ್ನಷ್ಟು ಬಲಪಡಿಸಲು ಸಜ್ಜಾಗಿದೆ. ಹೊಸ ನಾನ್-ಫಿಕ್ಷನ್ ಶೋ ಜೋಡಿ ನಂ.1 ಏಪ್ರಿಲ್ 4 ರಿಂದ ರಾತ್ರಿ 9 ಗಂಟೆಗೆ ಶುರುವಾಗಲಿದೆ. ಜನಪ್ರಿಯ ಹಿರಿತೆರೆ ಮತ್ತು ಕಿರುತೆರೆ ಜೋಡಿಗಳು ತೆರೆಯ ಹಿಂದೆ ಹೇಗೆ ಇರ್ತಾರೆ, ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಎಂಬುದನ್ನು  ಈ ರಿಯಾಲಿಟಿ ಶೋ ದ ಮೂಲಕ ಜನರ ಮುಂದಿಡಲಿದೆ. ಅನುಭವಸ್ಥ ಮತ್ತು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳನ್ನು ಒಳಗೊಂಡ ಈ ಶೋನಲ್ಲಿ, ಮನರಂಜನೆ, ಭಾವನೆಗಳು ಮತ್ತು ನಮ್ಮ ಜೀವನಕ್ಕೆ ಹತ್ತಿರವಾದ ಕ್ಷಣಗಳು ಕಾಣಸಿಗಳಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ.

ಅತ್ಯುತ್ತಮ ತೀರ್ಪುಗಾರರ ಬಳಗ ಈ ಶೋ ದ ಮತ್ತೊಂದು ಹೈಲೈಟ್. ಖ್ಯಾತ ನಟಿ, ನಿರೂಪಕಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ಕಿರುತೆರೆಯ ಎಲ್ಲರ ಅಚ್ಚುಮೆಚ್ಚಿನ ಜೋಡಿ ಅಮೃತಧಾರೆಯ ಭೂಮಿ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು ಸ್ಯಾಂಡಲ್‌ವುಡ್‌ನ ಚಾರ್ಮಿಂಗ್ ಹೀರೋ ನೆನಪಿರಲಿ ಪ್ರೇಮ್ ಈ ಶೋ ನ ತೀರ್ಪುಗಾರಾಗಿರಲಿದ್ದು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ತಮ್ಮ ಅಪಾರ ಅನುಭವ ಮತ್ತು ವಿಭಿನ್ನ ವ್ಯಕ್ತಿತ್ವಗಳೊಂದಿಗೆ, ತೀರ್ಪುಗಾರರು ಕೇವಲ ತೀರ್ಪು ನೀಡುವುದಷ್ಟೇ ಅಲ್ಲ, ಉಪಯುಕ್ತ ಸಲಹೆಗಳು, ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ಹಾಸ್ಯಭರಿತ ಕ್ಷಣಗಳನ್ನೂ ಹಂಚಿಕೊಳ್ಳುತ್ತಾರೆ, ಇದರಿಂದ ಶೋ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತದೆ. ಈ ಶೋವನ್ನು ಎಲ್ಲರ ಅಚ್ಚುಮೆಚ್ಚಿನ, ನಕ್ಕು ನಗಿಸುವುದಕ್ಕೆ ಮನೆಮಾತಾದ ಕುರಿ ಪ್ರತಾಪ್ ಮತ್ತು ಚೆಲುವೆ ಶ್ವೇತಾ ಚೆಂಗಪ್ಪ ಅವರು ನಿರೂಪಿಸಲಿದ್ದಾರೆ. ಇವರ ಕಾಮಿಡಿ ಟೈಮಿಂಗ್ ಮತ್ತು ಜೋಶ್‌ಭರಿತ ಮಾತುಗಳು ಪ್ರತಿ ಎಪಿಸೋಡ್‌ಗೂ ಇನ್ನಷ್ಟು ಎನರ್ಜಿ ಮತ್ತು ಮನರಂಜನೆಯನ್ನು ನೀಡುತ್ತವೆ.

ಇನ್ನು ಈ ಶೋನಲ್ಲಿ ತಮ್ಮದೇ ಆದ ವೃತ್ತಿರಂಗದಲ್ಲಿ ಹೆಸರು ಮಾಡಿದ ಹಿರಿಯ ಮತ್ತು ಇತ್ತೀಚಿಗೆ ಮದುವೆಯಾದ ಜೋಡಿಗಳು ಭಾಗವಹಿಸಲಿದ್ದಾರೆ. ರುದ್ರ ಮಾಸ್ಟರ್ – ನಿರೀಕ್ಷ, ರಜನಿ-ಅರುಣ್ ಗೌಡ, ಧನರಾಜ್ – ಪ್ರಜ್ಞಾ, ಬಾಳು ಬೆಳಗುಂದಿ – ಮಾಲಾಶ್ರೀ, ನಯನಾ ನಾಗರಾಜ್ – ಸುಹಾಸ್, ಮಿಮಿಕ್ರಿ ಗೋಪಿ – ಉಷಾರಾಣಿ, ಜಗ್ಗಪ್ಪ – ಸುಶ್ಮಿತಾ, ಕೋಟೆ ಪ್ರಭಾಕರ್ – ಮಾಲತಿ, ಗೀತಾ ಭಾರತೀ ಭಟ್ – ರಾಜಾರಾಮ್ ಭಟ್, ಹಾಗೂ ಅಭಿಲಾಷ್ – ಅಪೂರ್ವ ಅವರು ಜೋಡಿ.ನಂ.1 ನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಪ್ರತಿ ಜೋಡಿಯೂ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ, ಹೊಂದಾಣಿಕೆ ಮತ್ತು ಭಾವನಾತ್ಮಕ ಬಂಧವನ್ನು ಪರೀಕ್ಷಿಸುವ ವಿವಿಧ ಟಾಸ್ಕ್‌ಗಳಲ್ಲಿ ಭಾಗವಹಿಸುತ್ತಾರೆ. ಇದು ವೀಕ್ಷಕರಿಗೆ ಎಮೋಷನಲ್ ಆಗಿ ಹತ್ತಿರವಾಗಲಿದೆ.

ಅದ್ಭುತ ಪರ್ಫಾರ್ಮೆನ್ಸ್ ಗಳು, ಸಕ್ಕತ್ ಟಾಸ್ಕ್ ಗಳು ಮತ್ತು ಪ್ರೀತಿಯ ಕ್ಷಣಗಳ ಸಂಗಮವೇ ಈ ‘ಜೋಡಿ ನಂ.1’. ಇದರಲ್ಲಿ ದಂಪತಿಗಳ ನಡುವಿನ ಪ್ರೀತಿ, ನಂಬಿಕೆ ಮತ್ತು ಹೊಂದಾಣಿಕೆಯನ್ನು ಪರೀಕ್ಷಿಸುವ ಆಕರ್ಷಕ ಗೇಮ್ ಗಳ ಜೊತೆಗೆ ಅದ್ಭುತ ಡಾನ್ಸ್ ಮತ್ತು ಸ್ಕಿಟ್‌ಗಳೂ ಇರುತ್ತವೆ. ಜೋಡಿಗಳು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ತೋರಿಸುವ ರಾಪಿಡ್-ಫೈರ್ ಗೇಮ್ ಗಳು ಮತ್ತು ಸವಾಲುಗಳು ಈ ಶೋನ ಹೈಲೈಟ್. ಸಂಬಂಧಗಳನ್ನು ಸಂಭ್ರಮಿಸುವ ಈ ಕಾರ್ಯಕ್ರಮವು ಕರ್ನಾಟಕದ ಪ್ರತಿ ಮನೆಯೂ ಇಷ್ಟಪಡುವ ಒಂದು ಕಂಪ್ಲೀಟ್ ವೀಕೆಂಡ್ ಎಂಟರ್ಟೈನರ್ ಆಗಿರಲಿದೆ. ಜೋಡಿಗಳ ಪೈಪೋಟಿಯನ್ನು ನೋಡಿ ‘ಜೋಡಿ ನಂ.1’ ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಇದೆ ಏಪ್ರಿಲ್ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ.

Related Posts

Leave a Reply

Your email address will not be published. Required fields are marked *