Saturday, October 03, 2026
Menu

ಶೆಲ್‌ ಬಂಕ್‌ಗಳಲ್ಲಿ  ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದು, ಬುಧವಾರ ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದೆ. ಪ್ರೀಮಿಯಂ ಹಾಗೂ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದ್ದು, ಸಾಮಾನ್ಯ ಪೆಟ್ರೋಲ್ ದರ 106 ರೂ.ನಿಂದ 108.50 ರೂ.ಗೆ ಏರಿದೆ. ನಾಲ್ಕು ದಿನದ ಹಿಂದೆ 112 ರೂ.ಗೆ ಹೆಚ್ಚಳವಾಗಿತ್ತು. ಈಗ 119.8 ರೂ.ಗೆ ಏರಿದೆ.

ಸಾಮಾನ್ಯ ಪೆಟ್ರೋಲ್ ದರ ಲೀಟರ್‌ಗೆ 7 ರೂ. ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ 122.42 ರೂ.ನಿಂದ 129.8ಕ್ಕೆ ಏರಿಕೆಯಾಗಿದೆ. ಸಾಮಾನ್ಯ ಡೀಸೆಲ್ 91 ರೂ.ನಿಂದ 93.50 ರೂ.ಗೆ ಏರಿಕೆ ಆಗಿತ್ತು. ನಾಲ್ಕು ದಿನದ ಹಿಂದೆ ಲೀಟರ್ ಡಿಸೇಲ್ 98 ರೂ. ಇತ್ತು, ಇಂದು 123ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 25 ರೂ. ಹೆಚ್ಚಳವಾಗಿದೆ. ಪ್ರೀಮಿಯಂ ಡೀಸೆಲ್ ಪ್ರತಿ ಲೀಟರ್‌ಗೆ 108.50 ರಿಂದ 133ಕ್ಕೆ ಏರಿಕೆಯಾಗಿದೆ.

ಹೀಗೆ ಪೆಟ್ರೋಲ್‌ ಬೆಲೆ ಏರಿಕೆ  ದಿನ ಬಳಕೆಯ ಆಹಾರ ಸಾಮಗ್ರಿ, ವಿದ್ಯುತ್‌, ನೀರು, ಮನೆ ಬಾಡಿಗೆ ಏರಿದಂತೆ ಎಲ್ಲ ಸರಕು ಮತ್ತು ಸೇವೆಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದ್ದು, ಜನ ಸಾಮಾನ್ಯರ ಜೀವನಕ್ಕೆ ಬಹಳಷ್ಟು ಸಂಕಷ್ಟ ಎದುರಾಗಿದೆ.

Related Posts

Leave a Reply

Your email address will not be published. Required fields are marked *