ಬೆಂಗಳೂರು ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3 ರಷ್ಟು ಹೆಚ್ಚಿಸಲಿದೆ. ಪ್ರತಿ ವರ್ಷದಂತೆ ಆರ್ಥಿಕ ಸಮತೋಲನಸರಿದೂಗಿಸಲು ಶೇ.3ರಷ್ಟು ನೀರಿನ ಶುಲ್ಕ ಹೆಚ್ಚಿಸಿದೆ.
ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ 20 ರಿಂದ 30 ರೂ. ಹೆಚ್ಚುವರಿ ನೀರಿನ ಬಿಲ್ ಬರಲಿದೆ. ಗೃಹ ಬಳಕೆದಾರರಿಗೆ ಸ್ಲ್ಯಾಬ್ ಗಳ ಆಧಾರದಡಿ ಪ್ರತಿ ಲೀಟರ್ ಗೆ 0.15 ಪೈಸೆಯಿಂದ 1 ಪೈಸೆವರೆಗೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ಗೆ 1.90 ಪೈಸೆ ಏರಿಕೆ ಆಗಲಿದೆ.
ಟೋಲ್ ದರ ಏರಿಕೆ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ದರ ಏರಿಕೆಯಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಕಂಡ ಬಳಿಕ ಟೋಲ್ ದರ ಏರಿಕೆಯಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಹಾಗೂ ರಾಮನಗರದ ಗಣಮಿಣಕಿ ಬಳಿ ಸೇರಿ ಎರಡು ಟೋಲ್ ಪ್ಲಾಜಾಗಳಿದ್ದು ಎರಡೂ ಟೋಲ್‌ಗಳಲ್ಲೂ ದರವನ್ನು ಒಂದೇ ಮಾದರಿಯಲ್ಲಿ ಏರಿಕೆ ಮಾಡಲಾಗಿದೆ. ಪ್ರತಿ ಟೋಲ್‌ನಲ್ಲಿ 5 ರೂ. ನಿಂದ 25 ರೂ. ವರೆಗೆ ಹೆಚ್ಚಳ ಮಾಡಲಾಗಿದೆ. 118 ಕಿಮೀ ಇರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿನಲ್ಲಿ ಪ್ರಯಾಣ ಮಾಡಿದರೆ ಪ್ರತಿ ಟೋಲ್‌ನಲ್ಲಿ 5 ರೂ. ಎಂಬಂತೆ ಎರಡು ಟೋಲ್‌ಗಳಿಂದ 10 ರೂಪಾಯಿ ಏರಿಕೆಯಾಗಿದೆ. ಮೈಸೂರಿನಿಂದ ಬೆಂಗಳೂರಿಗೆ 345 ರೂಪಾಯಿ ಟೋಲ್ ಪಾವತಿಸಬೇಕಿತ್ತು. ಇಂದಿನಿಂದ 355 ರೂಪಾಯಿ ಟೋಲ್ ಪಾವತಿಸಬೇಕಿದೆ.


