ಹರ್ಮುಜ್ ಜಲಸಂಧಿ ಬಹುತೇಕ ಮುಚ್ಚಿದ್ದರೂ ಇರಾನ್ ವಿರುದ್ಧ ಯುದ್ಧ ಕೊನೆಗೊಳಿಸಲು ತಾವು ಸಿದ್ಧರಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಾಯಕರಿಗೆ ತಿಳಿಸಿದ್ದಾಗಿ ಅಮೆರಿಕದ ಅಧಿಕಾರಿಗಳು ದೃಢೀಕರಿಸಿದ್ದಾರೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯಲ್ಲಿ ತಿಳಿಸಿದೆ.
ಇಸ್ರೇಲ್ ಜೊತೆ ಸೇರಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಟ್ರಂಪ್, ಈಗ ಯುದ್ಧ ನಿಲ್ಲಿಸಲು ಹೆಣಗಾಡುತ್ತಿದ್ದಾರೆ ಎಂದರೆ ತಪ್ಪಾಗದು. ವರ್ಚಸ್ಸಿಗೆ ಧಕ್ಕೆಯಾಗದಂತೆ ಕದನ ವಿರಾಮ ಘೋಷಿಸಲು ಮುಂದಾಗಿದ್ದಾರೆ. ಬಂದ ಅಮೆರಿಕ-ಇಸ್ರೇಲ್‌ಗಳು ತನ್ನ ಮುಂದೆ ಮಂಡಿಯೂರದೆ ಈ ಯುದ್ಧ ಕೊನೆಗಾಣಿಸಲಾಗದು ಎಂದು ಇರಾನ್ ಪಟ್ಟು ಹಿಡಿದಿದೆ.
ಹರ್ಮುಜ್ ಜಲಸಂಧಿಯನ್ನು ಮುಕ್ತಸಂಚಾರಕ್ಕೆ ತೆರೆದರೆ, ಯುದ್ಧ ನಿಲ್ಲಿಸುವುದಾಗಿ ಟ್ರಂಪ್ ಹೇಳಿಕೊಂಡಿದ್ದರು. ಟ್ರಂಪ್ ಹರ್ಮುಜ್ ಜಲಸಂಧಿಯನ್ನು ಬಲವಂತವಾಗಿ ಮುಕ್ತಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದರೂ ಅದು ಫಲಿಸಿಲ್ಲ. ಈಗ ಜಲಸಂಧಿಯನ್ನು ತೆರೆಯದೆ ಇದ್ದರೂ ಯುದ್ಧ ಕೊನೆಗೊಳಿಸುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.
ಕೊನೆಯ ಪ್ರಯತ್ನವಾ, ಮುಕ್ತ ವ್ಯಾಪಾರವನ್ನು ಪುನರಾರಂಭಿಸಲು ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಟ್ರಂಪ್ ತೀರ್ಮಾನಿಸಿದ್ದಾರೆ. ಈ ರಾಜತಾಂತ್ರಿಕ ಪ್ರಯತ್ನ ವಿಫಲವಾದರೆ, ಜಲಸಂಧಿಯನ್ನು ಮುಕ್ತಗೊಳಿಸುವ ಹೊಣೆಯನ್ನು ಯುರೋಪ್ ಮತ್ತು ಗಲ್ಫ್ ಮಿತ್ರರಾಷ್ಟ್ರಗಳು ವಹಿಸಿಕೊಳ್ಳುವಂತೆ ಅಮೆರಿಕ ಒತ್ತಾಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಒಂದು ನಿರ್ದಿಷ್ಟ ದಿನಾಂಕದೊಳಗೆ ಜಲಮಾರ್ಗವನ್ನು ಪುನಃ ಮುಕ್ತಗೊಳಿಸದಿದ್ದರೆ ನಾಗರಿಕ ಇಂಧನ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ದ್ದಾರೆ. ಅಮೆರಿಕಕ್ಕೆ ಈ ಜಲಸಂಧಿಯ ಅಗತ್ಯ ಅಷ್ಟೇನೂ ಇಲ್ಲವೆಂದು ಬಿಂಬಿಸಲೂ ಯತ್ನಿಸಿದ್ದಾರೆ.
ಜಲಸಂಧಿಯು ಎಷ್ಟು ಹೆಚ್ಚು ಕಾಲ ಮುಚ್ಚಿರುತ್ತದೆಯೋ ಅಷ್ಟು ಹೆಚ್ಚು ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಇಂಧನ ಮತ್ತು ಅನಿಲ ದರಗಳೂ ಹೆಚ್ಚಾಗಲಿವೆ. ಇಂಧನ ಪೂರೈಕೆಯ ಕುಸಿತ ಕಂಡಿದ್ದು, ಅಮೆರಿಕದ ಮಿತ್ರರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು ಹೈರಾಣಾಗಿವೆ. ಆಹಾರ ಬೆಳೆಯಲು ಬೇಕಾದ ರಸಗೊಬ್ಬರ ಅಥವಾ ಕಂಪ್ಯೂಟರ್ ಚಿಪ್‌ಗಳನ್ನು ತಯಾರಿಸಲು ಅಗತ್ಯವಿರುವ ಹೀಲಿಯಂನಂತಹ ವಸ್ತು ಅವಲಂಬಿತ ಕೈಗಾರಿಕೆಗಳು ಬಳಲುತ್ತಿವೆ. ಸುರಕ್ಷಿತ ಸಂಚಾರ ಮಾರ್ಗಗಳು ಶೀಘ್ರವಾಗಿ ಪುನರಾರಂಭವಾಗದಿದ್ದರೆ ಅಮೆರಿಕ ಮತ್ತು ಪಾಲುದಾರರು ಮಾತುಕತೆಯ ಮೂಲಕ ಒಪ್ಪಂದ ಮಾಡಿಕೊಳ್ಳುವವರೆಗೆ ಬಿಕ್ಕಟ್ಟು ಮುಂದುವರಿಯಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.


