ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕಾ ಕೇಂದ್ರ ಸೇರಿದಂತೆ ವಾಯುಪಡೆಯು ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಸಾರ್ವಜನಿಕ ಶಾಂತಿ ಪ್ರಸ್ತಾಪ ಮಾಡಿದರೂ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮಾತ್ರ ಮುಂದುವರೆದಿದೆ. ಇರಾನ್ನ ಯಾಜ್ದ್ನಲ್ಲಿ ಕ್ಷಿಪಣಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.
ಜಲಾಂತರ್ಗಾಮಿ ನೌಕೆಗಳು ಮತ್ತು ಹೆಲಿಕಾಪ್ಟರ್ಗಳಿಂದ ಉಡಾವಣೆ ಮಾಡುವ ಉದ್ದೇಶದ ಸುಧಾರಿತ ಕ್ಷಿಪಣಿಗಳ ಯೋಜನೆ, ಅಭಿವೃದ್ಧಿ, ಜೋಡಣೆ ಮತ್ತು ಸಂಗ್ರಹಣೆಗಾಗಿ ಈ ಪ್ರದೇಶವನ್ನು ಬಳಸಲಾಗುತ್ತಿತ್ತು. ಪಶ್ಚಿಮ ಇರಾನ್ನಲ್ಲಿ ವಾಯುಪಡೆಯು ಭಯೋತ್ಪಾದಕ ಆಡಳಿತ ಕೇಂದ್ರದ ಮೇಲೆ ದಾಳಿ ನಡೆಸಿದೆ. ಇಸ್ರೇಲ್ಗೆ ಅಪಾಯವನ್ನುಂಟು ಮಾಡುವ ಲಾಂಚರ್ಗಳು ಮತ್ತು ಕ್ಷಿಪಣಿ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಪಶ್ಚಿಮ ಇರಾನ್ನಲ್ಲಿ 20 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಲಾಗಿದೆ.
ಕೆರ್ಮಾನ್ಶಾ ಮತ್ತು ಡೆಜ್ಫುಲ್ ನಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಂಗ್ರಹಿಸಲು ಮತ್ತು ಉಡಾವಣೆ ಮಾಡಲು ಬಳಸುತ್ತಿದ್ದ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಇಸ್ರೇಲ್ ನಲ್ಲಿ ನಾಗರಿಕರ ವಸತಿ ಪ್ರದೇಶಗಳಲ್ಲಿ ದಾಳಿ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಹೊಡೆದುರುಳಿಸಲು ವಿರಾಮವಿಲ್ಲದೆ ಕಾರ್ಯಾಚರಣೆಯನ್ನು ಮುಂದುವರಿಸಳಾಗುತ್ತಿದೆ ಎಂದು ಇಸ್ರೇಲ್ ವಾಯುಪಡೆ ಹೇಳಿದೆ.


