Menu

ಇರಾನ್‌-ಇಸ್ರೇಲ್‌ ಸಂಘರ್ಷ: ಮುಂದುವರಿದ ದಾಳಿ, ಪ್ರತಿದಾಳಿ

ಕದನ ವಿರಾಮ ಘೋಷಣೆ, ಶಾಂತಿ ಮಾತುಕತೆಯ ಪ್ರಸ್ತಾವಗಳ ಮಧ್ಯೆಯೂ ಇರಾನ್ ಇಸ್ರೇಲ್‌ ಯುದ್ಧ ಮುಂದುವರಿದಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ 28ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ನ ಕೋಮ್‌ ನಗರದಲ್ಲಿ ಇಸ್ರೇಲ್-ಅಮೆರಿಕ ಜಂಟಿಯಾಗಿ ದಾಳಿ ನಡೆಸಿವೆ.

ವಸತಿ ಪ್ರದೇಶದ ಮೇಲೆ ನಡೆಸಿದ ವಾಯುದಾಳಿಗೆ ಆರು ಮಂದಿ ಬಲಿಯಾಗಿದ್ದಾರೆ. ಹೆಜ್ಬೊಲ್ಲಾ ಮಟ್ಟ ಹಾಕಲು ಪಣತೊಟ್ಟಿರುವ ಇಸ್ರೇಲ್, ಲೆಬನಾನ್ ಮೇಲೆ ನಿರಂತರ ದಾಳಿ ನಡೆಸಿದೆ. ಈ ದಾಳಿಗೆ 13 ಮಂದಿ ಬಲಿಯಾಗಿದ್ದಾರೆ. ಇರಾನ್ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಿದ್ದು, ಟೆಲ್ ಅವಿವ್ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮಾಡಿದೆ. ಸುಧಾರಿತ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಧ್ಯಪ್ರಾಚ್ಯದ ಪ್ರಮುಖ ಅಮೆರಿಕನ್‌ ಮತ್ತು ಇಸ್ರೇಲಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿ ದಾಳಿ ಅಮೇರಿಕಾದ‌ ನೆಲೆಗಳು ಮತ್ತು ಇಸ್ರೇಲ್ ಮೇಲೆ ತೀವ್ರ ಸ್ವರೂಪದ ದಾಳಿ ನಡೆಸುತ್ತಿದೆ.

ಇನ್ನು 10 ದಿನ ಇಂಧನ ಸ್ಥಾವರಗಳ ಮೇಲೆ ದಾಳಿ ಮಾಡಲ್ಲ. ಇರಾನ್ ಮನವಿಯಂತೆ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ. ಈಗಿನ ಸನ್ನಿವೇಶ ಗಮನಿಸಿದರೆ ಮಧ್ಯಪ್ರಾಚ್ಯದ ಸಂಘರ್ಷ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಕದನ ವಿರಾಮದ ದಿನಾಂಕ ಮುಂದೂಡುತ್ತಿರುವ ಅಮೆರಿಕವು ಇರಾನ್ ಮುಂದೆ ಮಾತುಕತೆ ಪ್ರಸ್ತಾಪ ಇಡುತ್ತಿದೆ. ಸಂಪೂರ್ಣ ಶರಣಾಗತಿ ಸಾಧ್ಯವಿಲ್ಲ ಎಂದಿರುವ ಇರಾನ್ ಮಾತುಕತೆಯನ್ನು ಧಿಕ್ಕರಿಸಿ ದಾಳಿ ಮುಂದುವರಿಸಿದೆ. ಅಮೆರಿಕ ನೀಡಿದ ಪ್ರಸ್ತಾವನೆಗಳು ಏಕಪಕ್ಷೀಯವಾಗಿವೆ ಮತ್ತು ತಮ್ಮ ಹಿತಾಸಕ್ತಿಗಳಿಗೆ ಅನುಕೂಲಕರವಾಗಿಲ್ಲ ಎಂದು ಟೀಕಿಸಿದೆ.

Related Posts

Leave a Reply

Your email address will not be published. Required fields are marked *