Menu

ಹರ್ಮುಜ್‌ ಜಲಸಂಧಿ ಇರಾನ್‌ನ ಕಾನೂನುಬದ್ಧ ಹಕ್ಕು ಎಂದ ಸಚಿವ ಅರಘ್ಚಿ

ಹರ್ಮುಜ್‌ ಜಲಸಂಧಿಯನ್ನು ಶತ್ರು ರಾಷ್ಟ್ರಗಳಿಗೆ ಮುಚ್ಚುವುದು ಇರಾನ್‌ನ ಕಾನೂನುಬದ್ಧ ಹಕ್ಕು ಎಂದು ವಿಶ್ವಸಂಸ್ಥೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಘ್ಚಿ ಹೇಳಿದ್ದಾರೆ.

ಈ ಜಲಸಂಧಿಯಲ್ಲಿ ಅಭದ್ರತೆ ಕಾಡಲು ಅಮೆರಿಕ ಮತ್ತು ಇಸ್ರೇಲ್‌ನ ಕಾನೂನು ಉಲ್ಲಂಘನೆ ಮತ್ತು ಆಕ್ರಮಣಶೀಲತೆ ಕಾರಣ. ಹಾಗಾಗಿ ಇರಾನ್‌ ಅಧಿಕಾರಿಗಳು ಭದ್ರತೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಶತ್ರು ರಾಷ್ಟ್ರಗಳಿಗೆ ಜಲಮಾರ್ಗ ಮುಚ್ಚುವುದು ಮತ್ತು ಮಿತ್ರರಾಷ್ಟ್ರಗಳಿಗೆ ತೆರೆಯುವುದು ಇರಾನ್‌ನ ಕಾನೂನುಬದ್ಧ ಹಕು ಎಂದು ಅರಘ್ಚಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್‌ಗೆ ಮನವರಿಕೆ ಮಾಡಿದ್ದಾರೆ.

ಅಮೆರಿಕದ ಪಡೆಗಳು ಗಲ್ಫ್ ಸಹಕಾರ ಮಂಡಳಿ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿವೆ. ಇರಾನ್‌ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಆರಂಭಿಸುತ್ತಿದ್ದಂತೆ ಸೇನಾಧಿಕಾರಿಗಳು ಪಲಾಯನ ಮಾಡಿ ಹೋಟೆಲ್‌ಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸಂಬಂಧಿಸಿದ ಹೋಟೆಲ್‌ ಬುಕಿಂಗ್‌ ರಶೀದಿಗಳನ್ನೂ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೊಲ್ಲಿ ರಾಷ್ಟ್ರಗಳಲ್ಲಿರುವ ಹೋಟೆಲ್‌ಗಳು ಪಲಾಯನ ಮಾಡಿ ಬರುವ ಅಮೆರಿಕದ ಅಧಿಕಾರಿಗಳಿಗೆ ಹೋಟೆಲ್‌ ರೂಮ್‌ ನಿರಾಕರಿಸಬೇಕು. ಅವರ ಉಪಸ್ಥಿತಿಯು ಅಲ್ಲಿನ ನಾಗರಿಕರಿಗೆ ಅಪಾಯ ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.
ಇರಾನ್‌ ಸಂಸತ್ತು ಹರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಭದ್ರತೆ ಮತ್ತು ಮೇಲ್ವಿಚಾರಣೆಗಾಗಿ ಶುಲ್ಕ ವಿಧಿಸುವ ಮಸೂದೆ ರಚಿಸಲಿದೆ. ಕರಡನ್ನು ಮುಂದಿನ ವಾರದ ಆರಂಭದಲ್ಲಿ ಅಂತಿಮಗೊಳಿಸುವ ಸಾಧ್ಯತೆ ಇದೆ.

Related Posts

Leave a Reply

Your email address will not be published. Required fields are marked *