ಬೆಂಗಳೂರು ನಾಗರಿಕರಿಗೆ ಜಲಮಂಡಳಿ ನೀರಿನ ದರವನ್ನು ಶೇ ಮೂರರಷ್ಟು ಏರಿಸುವ ಮೂಲಕ ಬರೆ ಎಳೆದಿದೆ. ಮೂರು ತಿಂಗಳಿಗೊಮ್ಮೆ ಜಲಮಂಡಳಿ ದರ ಪರಿಷ್ಕರಣೆ ಮಾಡುತ್ತಿದ್ದು, ವಾರ್ಷಿಕ ಶೇ ೧೨ ದರ ಏರಿಕೆಯಾಗಿದೆ.
ಏಪ್ರಿಲ್ 1 ರಿಂದ ನೀರಿನ ದರ ಶೇ.3 ರಷ್ಟು ಏರಿಕೆ ಮಾಡುವುದಕ್ಕೆ ಜಲಮಂಡಳಿ ಮುಂದಾಗಿದೆ. ಇದರಿಂದ ಪ್ರತಿ ಲೀಟರ್ ನೀರಿಗೆ 1 ಪೈಸೆ ಮತ್ತು ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ 1.9 ಪೈಸೆ ಹೆಚ್ಚಳವಾಗಲಿದೆ ನೈರ್ಮಲ್ಯ ಶುಲ್ಕ ಕೂಡ ಹೆಚ್ಚಾಗಲಿದೆ.
ಬೋರ್ ವೆಲ್ ಇರೋ ಮನೆಗಳಿಗೆ 30 ರೂ. ಮತ್ತು ಕೈಗಾರಿಕೆಗಳಿಗೆ 120 ರೂ. ಚಾರ್ಜ್ ಆಗಲಿದೆ. ಜಲಮಂಡಳಿ ಪ್ರತಿನಿತ್ಯ 12 ಲಕ್ಷ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದೆ, ಮೇ ತಿಂಗಳ ಬಿಲ್ ನಲ್ಲಿ ಹೊಸ ದರ ಜಾರಿಗೆ ಬರಲಿದೆ.
ಈಗಾಗಲೇ ಎಲ್‌ಪಿಜಿ ಸೇರಿದಂತೆ ಅಗತ್ಯ ಸರಕು ಮತ್ತು ಸೇವೆಗಳ ದರ ಏರಿಕೆಗೆ ತತ್ತರಿಸಿರುವ ನಾಗರಿಕರು ನೀರಿನ ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


