Menu

ಮನಿ ಡಬ್ಲಿಂಗ್‌ ಆಮಿಷ: 24 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಗುತ್ತಿಗೆದಾರ

ಹಣದ ಮಳೆ ಸುರಿಯಲಿದೆ ಎಂಬ ವಂಚಕರ ಮಾತು ನಂಬಿದ ಬೆಂಗಳೂರಿನ ಗುತ್ತಿಗೆದಾರ 24 ಲಕ್ಷ ರೂ. ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗಿರುವುದು ಅರಿವಾದ ಮೇಲೆ ಪೊಲೀಸ್‌ಗೆ ದೂರು ನೀಡಿದ್ದಾರೆ.  ಪೊಲೀಸರು ಮೂವರು ವಂಚಕರನ್ನು ಬಂಧಿಸಿ 40 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಈ ಘಟನೆ ಬೆಂಗಳೂರಿನ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಣ ಡಬ್ಲಿಂಗ್ ಮಾಡುವ ಆಮಿಷವೊಡ್ಡಿ ಗುತ್ತಿಗೆದಾರ ರಮೇಶ್‌ ಎಂಬವರಿಗೆ 28 ಲಕ್ಷ ರೂ. ವಂಚಿಸಲಾಗಿದೆ. ವಂಚನೆ ಮಾಡಿದ್ದ ಮಧುಗಿರಿಯ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಮತ್ತು ಚಾಲಕ ನವೀನ್​ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ನಮ್ಮಲ್ಲಿ ಹಣದ ರಾಶಿಯೇ ಇದೆ, ಆದರೆ ಅದು 90 ದಿನದಲ್ಲಿ ನಾರ್ಮಲ್ ಕಾಗದ ಆಗುತ್ತದೆ, ಹೀಗಾಗಿ ಅದನ್ನು ಖರ್ಚು ಮಾಡಬೇಕು. ನೀವು ನಮಗೆ ಒಂದು ಲಕ್ಷ ರೂ. ಕೊಟ್ಟರೆ ಮೂರು ಲಕ್ಷ ರೂ. ಕೊಡುತ್ತೇವೆ, ತೊಂಬತ್ತು ದಿನಗಳ ಒಳಗೆ ಯಾವುದಕ್ಕಾದರೂ ಖರ್ಚು ಮಾಡಬಹುದು ಎಂದು ನಂಬಿಸಿದ್ದರು.

ವಂಚಕರ ಮಾತನ್ನು ನಂಬಿದ್ದ ಗುತ್ತಿಗೆದಾರ ರಮೇಶ್, 28 ಲಕ್ಷ 60 ಸಾವಿರ ರೂಪಾಯಿ ತೆಗೆದುಕೊಂಡು ಬಂದಿದ್ದರು. ಹೋಟೆಲ್ ಒಂದಕ್ಕೆ ಕರೆದಿದ್ದ ಆರೋಪಿಗಳು ಹಣ ಪಡೆದು ಚೆಕ್ ಮಾಡಿಕೊಂಡು ಬರುವುದಾಗಿ ಹೇಳಿ ಹಣದ ಸಮೇತ ಪರಾರಿಯಾಗಿದ್ದರು. ಮೋಸ ಹೋಗಿರುವುದು ಗೊತ್ತಾಗಿ ರಮೇಶ್​ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ರೀತಿಯ ವಂಚನೆಗೆ ಇನ್ನೋರ್ವ ವ್ಯಕ್ತಿ 18 ಲಕ್ಷ ರೂಪಾಯಿ ಕಳೆದುಕೊಂಡಿರುವುದು ತನಿಖೆ ವೇಳೆ ಪತ್ತೆಯಾಗಿದೆ.

Related Posts

Leave a Reply

Your email address will not be published. Required fields are marked *