Menu

ಇರಾನ್‌ನ ನತಾನ್ಜ್ ಯುರೇನಿಯಂ ಕೇಂದ್ರಕ್ಕೆ ಯುಎಸ್‌-ಇಸ್ರೇಲ್‌ ದಾಳಿ

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದ ಜಂಟಿ ಸೈನಿಕ ಕಾರ್ಯಾಚರಣೆಗಳು ನಡೆಯುತ್ತಿದ್ದು, ಇರಾನ್‌ನ ಪ್ರಮುಖ ನತಾನ್ಜ್ ಯುರೇನಿಯಂ ಸಂಸ್ಕರಣಾ ಕೇಂದ್ರದ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಮಾಧ್ಯಮಗಳು ಮತ್ತು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (IAEA) ಮಾಹಿತಿ ದೃಢೀಕರಿಸಿದೆ.

ಇರಾನ್‌ನ ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ ಪ್ರತಿನಿಧಿ ರೆಜಾ ನಜಾಫಿ, ವಿಯೆನ್ನಾದಲ್ಲಿ ನಡೆದ ಸಭೆಯಲ್ಲಿ ಇಸ್ರೇಲ್ ಮತ್ತು ಅಮೆರಿಕದ ದಾಳಿಗಳಲ್ಲಿ ನತಾನ್ಜ್ ಅಣು ಸೌಲಭ್ಯವನ್ನು ಗುರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇರಾನ್‌ನ ಅಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಎಸ್ಲಾಮಿ ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ ಮುಖ್ಯಸ್ಥ ರಾಫೆಲ್ ಗ್ರೋಸಿಗೆ ಪತ್ರ ಬರೆದು, ನತಾನ್ಜ್ ಮೇಲೆ ಎರಡು ಬಾರಿ ದಾಳಿ ನಡೆಸಲಾಗಿದೆ, ಇದು ಕ್ರಿಮಿನಲ್‌ ದಾಳಿ ಎಂದು ಆರೋಪಿಸಿದ್ದಾರೆ.

ಈ ದಾಳಿಯಲ್ಲಿ ನತಾನ್ಜ್‌ನ ಅಂಡರ್‌ಗ್ರೌಂಡ್ ಫ್ಯೂಯಲ್ ಎನ್‌ರಿಚ್‌ಮೆಂಟ್ ಪ್ಲಾಂಟ್ ಪ್ರವೇಶ ದ್ವಾರಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಮುಖ್ಯ ಭೂಗತ ಸೌಲಭ್ಯಕ್ಕೆ ಹೆಚ್ಚುವರಿ ಹಾನಿ ಇಲ್ಲ ಮತ್ತು ಯಾವುದೇ ವಿಕಿರಣ ಸೋರಿಕೆ ಅಥವಾ ರೇಡಿಯೊಲಾಜಿಕಲ್ ಪರಿಣಾಮಗಳಿಲ್ಲ ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ ಸ್ಪಷ್ಟಪಡಿಸಿದೆ. ಸ್ಯಾಟಲೈಟ್ ಚಿತ್ರಗಳು ಪ್ರವೇಶ ದ್ವಾರಗಳಿಗೆ ಹಾನಿಯನ್ನು ದೃಢೀಕರಿಸಿವೆ.

ನತಾನ್ಜ್ ಇರಾನ್‌ನ ಪ್ರಮುಖ ಯುರೇನಿಯಂ ಸಂಸ್ಕರಣಾ ಘಟಕ, ಕಳೆದ ವರ್ಷ ಇಸ್ರೇಲ್-ಅಮೆರಿಕ ದಾಳಿಗಳಲ್ಲಿ ರೀ ಹಾನಿಗೊಳಗಾಗಿತ್ತು. ಈಗ ಎರಡನೇ ಬಾರಿ ದಾ:ಳಿಯಾಗಿದೆ.  ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ ಎಚ್ಚರಿಕೆ ನೀಡಿ, ಅಮೆರಿಕ ಇರಾನ್ ಮೇಲೆ ದಾಳಿ ಮಾಡಲು ಎಮಿರೇಟ್ಸ್‌ನ ವಾಯುಪ್ರದೇಶ ಬಸಿದರೆ ಪ್ರತೀಕಾರ ತೀವ್ರವಾಗಿರುವುದಾಗಿ ಹೇಳಿದೆ.

ಎಮಿರೇಟ್ಸ್‌ ತನ್ನ ವಾಯುಪ್ರದೇಶ, ಬಂದರುಗಳು ಅಥವಾ ಭೂಪ್ರದೇಶವನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡಿದರೆ, ದುಬೈ, ಅಬುದಾಬಿ ಸೇರಿದಂತೆ ಪ್ರಮುಖ ನಗರಗಳ ಮೇಲೆ ತೀವ್ರತರದ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದೆ. ಇರಾನ್ ಹರ್ಮುಜ್ ಜಲಸಂದಿಯನ್ನು ತನ್ನ ಸ್ನೇಹಿತ ರಾಷ್ಟ್ರಗಳಿಗೆ ಮಾತ್ರ ತೆರೆದಿಟ್ಟುಕೊಳ್ಳುವುದಾಗಿ ಘೋಷಿಸಿದೆ. ಅಮೆರಿಕ ಮತ್ತು ಅದರ ಮಿತ್ರರಿಗೆ ಅದರ ನಿಯಂತ್ರನ ಬಿಟ್ಟು ಕೊಡಲಾಗದು ಎಂದಿದೆ.

Related Posts

Leave a Reply

Your email address will not be published. Required fields are marked *