Menu

ಚಿನ್ನಾಭರಣವಿದ್ದ ಬ್ಯಾಗ್‌ ವಾಪಸ್‌ ನೀಡಿದ ಬಿಎಂಟಿಸಿ ಡ್ರೈವರ್‌, ಕಂಡಕ್ಟರ್‌

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಚಿನ್ನಾಭರಣಗಳಿದ್ದ ಬ್ಯಾಗನ್ನು ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಪ್ರಾಮಾಣಿಕತೆಯಿಂದ ವಾಪಸ್ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಶುಕ್ರವಾರ ರಾತ್ರಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅವಸರದಲ್ಲಿ ಬ್ಯಾಗ್ ಅನ್ನು ಕುಳಿತ ಸೀಟಿನಲ್ಲೇ ಬಿಟ್ಟು ಇಳಿದಿದ್ದರು. ಬ್ಯಾಗ್‌ನಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು.  ಮನೆಗೆ ತಲುಪಿದ ನಂತರ ಬ್ಯಾಗ್ ಕಳೆದುಹೋದ ವಿಷಯ ಗಮನಕ್ಕೆ ಬಂದು ಆತಂಕಗೊಂಡಿದ್ದರು.

ಬಸ್ಸಿನ ಸೀಟಿನ ಮೇಲೆ ಬ್ಯಾಗ್ ಇರುವುದು ಗಮಿಸಿದ ಕಂಡಕ್ಟರ್ ನಾಗೇಂದ್ರ, ಈ ವಿಚಾರ ಡ್ರೈವರ್ ಸಿದ್ದರಾಜುರ ಗಮನಕ್ಕೂ ತಂದಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಚಿನ್ನಾಭರಣಗಳಿರುವುದು ಪತ್ತೆಯಾಗಿದೆ. ಇಬ್ಬರೂ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಬಿಎಂಟಿಸಿ ಹಿರಿಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸರಿಯಾದ ದಾಖಲೆಗಳನ್ನು ಪರಿಶೀಲಿಸಿ ಬ್ಯಾಗ್‌ನ ವಾರಸುದಾರರನ್ನು ಪತ್ತೆಹಚ್ಚಿ 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹಸ್ತಾಂತರಿಸಿದರು.  ಪಡೆದುಕೊಂಡವರು ಬಿಎಂಟಿಸಿ ಸಿಬ್ಬಂದಿಯ ಪ್ರಾಮಾಣಿಕತೆಗೆ ಕಣ್ಣೀರಿನೊಂದಿಗೆ ಕೃತಜ್ಞತೆ ಸಲ್ಲಿಸಿದರು.

Related Posts

Leave a Reply

Your email address will not be published. Required fields are marked *