Menu

ಅಮೆರಿಕದ F-35 Fighter Jet ಹೊಡೆದುರಳಿಸಿದ ಇರಾನ್‌?

ಇರಾನ್‌- ಇಸ್ತೇಲ್‌ ಯುದ್ಧದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ಆರಂಭಗೊಂಡ ಬಳಿಕ ಇರಾನ್‌ ಕೂಡ ಎದಿರೇಟು ನೀಡುತ್ತ ಅಮೆರಿಕವನ್ನು ಹೈರಾಣಾಗಿಸುತ್ತಿದೆ. ಈ ನಡುವೆ ಅಮೆರಿಕದ ಐದನೇ ತಲೆಮಾರಿನ F-35 ಫೈಟರ್ ಜೆಟ್ ಮೇಲೆ ಇರಾನ್‌ ದಾಳಿ ಮಾಡಿದೆ ಎಂದು ವರದಿಯಾಗಿದೆ.

ಇರಾನ್ ಮೇಲೆ ಯುದ್ಧ ಕಾರ್ಯಾಚರಣೆ ಬಳಿಕ ಅಮೆರಿಕದ ಎಫ್-35 ಲೈಟ್ನಿಂಗ್ II ವಿಮಾನವು ಮಧ್ಯಪ್ರಾಚ್ಯದ ಅಮೆರಿಕದ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಇರಾನ್‌ನ ಆಕಾಶದ ಮೇಲೆ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ ಎಂದು ವರದಿ ಮಾಹಿತಿ ನೀಡಿದೆ. ನಂತರ F-35 ಫೈಟರ್‌ ಜೆಟ್ ತುರ್ತು ಭೂ ಸ್ಪರ್ಶ ಮಾಡಿದೆ. ವಿಮಾನದಲ್ಲಿರವ ಫೈಲಟ್ ಸುರಕ್ಷಿತ ಎಂದು ಅಮೆರಿಕ ತಿಳಿಸಿದೆ. ವಿಮಾನ ಸುರಕ್ಷಿತವಾಗಿ ಮರಳಿದೆ, ಏನು ಸಮಸ್ಯೆ ಆಗಿದೆ ಎಂಬುದರ ಕುರಿತು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಎಂದು ಕ್ಯಾಪ್ಟನ್ ಟಿಮ್ ಹಾಕಿನ್ಸ್ ತಿಳಿಸಿದ್ದಾರೆ. ಮಾಹಿತಿ ನೀಡಿದ್ದಾರೆ.

ಅತ್ಯಂತ ಮುಂದುವರಿದ ಆವೃತ್ತಿಯ ಯುದ್ಧ ವಿಮಾನಗಳಲ್ಲಿ ಒಂದಾದ F-35, 100 ಮಿಲಿಯನ್‌ ಡಾಲರ್‌ಗಿಂತಲೂ (ಅಂದಾಜು 940 ಕೋಟಿ ರೂ.) ಹೆಚ್ಚು ಮೌಲ್ಯದ್ದಾಗಿದೆ. ಸಂಘರ್ಷ ತೀವ್ರಗೊಳ್ಳುತ್ತಿರುವಂತೆ ಅಮೆರಿಕ ಮತ್ತು ಇಸ್ರೇಲ್ ಎರಡೂ ಎಫ್ -35 ಜೆಟ್‌ಗಳನ್ನು ನಿಯೋಜಿಸುತ್ತಿವೆ. ಈ ಯುದ್ಧ ಪ್ರಾರಂಭವಾದಾಗಿನಿಂದ ಕನಿಷ್ಠ 16 ಯುಎಸ್ ಮಿಲಿಟರಿ ವಿಮಾನಗಳು ನಾಶವಾಗಿವೆ. 10 ರೀಪರ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇತರ 6 ವಿಮಾನಗಳು ಹಾನಿಗೊಂಡಿವೆ.

ಯುದ್ಧದಲ್ಲಿ ನಾವು ಗೆಲ್ಲುತ್ತಿದ್ದೇವೆ. ಇರಾನ್‌ ತೀವ್ರ ಹಾನಿಗೊಳಗಾಗುತ್ತಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸುವ ಮೂಲಕ ತನ್ನ ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ. 20 ದಿನಗಳ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯ ನಂತರ ಇರಾನ್ ಯುರೇನಿಯಂ ಉತ್ಕೃಷ್ಟಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿಲ್ಲ ಎಂದಿದ್ದಾರೆ.

 

Related Posts

Leave a Reply

Your email address will not be published. Required fields are marked *