Tuesday, February 17, 2026
Menu

ಹತ್ತು ವರ್ಷ ಕಾನೂನು ಹೋರಾಟ: ಅಪರಿಚಿತೆಗೆ ಕಿಡ್ನಿ ದಾನಗೈದು ಇತಿಹಾಸ ಸೃಷ್ಟಿಸಿದ ಡಾ. ಥಂಕಮ್ ಎಸ್

ಜೀವಂತವಾಗಿರುವಾಗಲೇ ಕಿಡ್ನಿ ದಾನ ಮಾಡುವುದಾದರೆ ಕಿಡ್ನಿ ದಾನ ಪಡೆಯುವವರು ಸಂಬಂಧಿಕರು, ಪರಿಚಿತರು ಆಗಿರಬೇಕು. ಪೋಷಕರು, ಒಡಹುಟ್ಟಿದವರು, ಮಕ್ಕಳು ಆಗಿರಬೇಕು ಎಂಬ ನಿಯಮವಿದ್ದ ಕಾರಣ ಬೆಂಗಳೂರಿನ
ವೈದ್ಯೆಯೊಬ್ಬರು 10 ವರ್ಷ ಕಾನೂನು ಹೋರಾಟ ನಡೆಸಿ ಯಶಸ್ವಿಯಾಗಿ ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿ ದಾನ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಔಷಧ ತಜ್ಞೆಯಾಗಿರುವ ಡಾ. ಥಂಕಮ್ ಎಸ್ ಈ ಸಾಧನೆ ಮಾಡಿದ ವೈದ್ಯೆ. ಕಿಡ್ನಿದಾನ ಮಾಡಲು 10 ವರ್ಷ ಕಾಲ ಕಾನೂನು ಹೋರಾಟ ನಡೆಸಿ ಕೊನೆಗೂ ತಮ್ಮ ಕಿಡ್ನಿಯನ್ನು ಅಪರಿಚಿತರಿಗೆ ದಾನ ಮಾಡಿ ಒಂದು ಜೀವ ಉಳಿಸಿದ್ದಾರೆ. ಕಾನೂನು ಹೋರಾಟ ನಡೆಸಿ ಹೈಕೋರ್ಟ್ ಅನುಮತಿ ಬಳಿಕ ಅಪರಿಚಿತ ಮಹಿಳೆಗೆ ಕಿಡ್ನಿ ದಾನ ಪ್ರಕ್ರಿಯೆ ಪೂರೈಸಿದ್ದಾರೆ.

2014ರಲ್ಲಿ ಡಾ. ಥಂಕಮ್ ಎಸ್ ಮರಣೋತ್ತರವಾಗಿ ಅಂಗಾಂಗ ದಾನ ಮಾಡಲು ಸಹಿ ಹಾಕಿದ್ದರು. ರೆ ಮೃತರ ಅಂಗಾಗಳನ್ನು ದಾನ ಮಾಡಿದರೆ ಅದರ ಪರಿವರ್ತನಾ ದರ ಕಡಿಮೆಯಾಗಲಿದೆ ಎಂದು ತಿಳಿದ ಅವರು ಜೀವಂತವಾಗಿರುವಾಗಲೇ ತಮ್ಮ ಕಿಡ್ನಿಯನ್ನು ದಾನ ಮಾಡುವ ಮೂಲಕ ‘ಜೀವಂತ ಅಂಗಾಗದಾನಿ’ ಎನಿಸಿದ್ದಾರೆ.

ಅಪರಿಚಿತರಿಗೆ ಜೀವಂತವಾಗಿರುವಾಗಲೇ ಕಿಡ್ನಿದಾನ ಮಾಡುವುದಕ್ಕೆ ಕಾನೂನಿನಲ್ಲಿ ಕೆಲವು ತೊಡಕುಗಳಿದ್ದವು. 2025ರ ಜೂನ್‌ ತಿಂಗಳಿನಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ ಡಾ. ಥಂಕಮ್ ಎಸ್ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಡಿಸೆಂಬರ್‌ 2025ರಲ್ಲಿ ಕಿಡ್ನಿದಾನ ಮಾಡಲು ಅನುಮತಿ ನೀಡಿತು. ಐದು ದಿನದ ಹಿಂದೆ ಫೆ.10ರಂದು 56 ವರ್ಷದ ಮಹಿಳೆಗೆ ಅವರು ಕಿಡ್ನಿ ದಾನ ಮಾಡಿ ಯಶಸ್ವಿಯಾಗಿ ಮತ್ತೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Related Posts

Leave a Reply

Your email address will not be published. Required fields are marked *