Wednesday, February 11, 2026
Menu

ಕೆನಡಾ ಶಾಲೆಯಲ್ಲಿ ಗುಂಡಿನ ಘರ್ಜನೆ: ಹತ್ತು ಮಂದಿ ಸಾವು

ಕೆನಡಾದ ಬ್ರಿಟಿಷ್ ಕೊಲಂಬಿಯಾ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗನ್ ಮ್ಯಾನ್ ಸೇರಿದಂತೆ 10 ಮಂದಿ ಪ್ರಾಣ ಕಳೆದುಕೊಂಡಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತ ಗನ್‌ಮ್ಯಾನ್‌ ಹಾಗೂ ಇತರ ಆರು ಮಂದಿ ಶಾಲಾ ಆವರಣದಲ್ಲೇ ಅಸು ನೀಗಿದ್ದರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಟಂಬರ್ ರಿಡ್ಜ್ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಅಲರ್ಟ್‌ ಘೋಷಣೆ ಮಾಡಿ, ಟಂಬರ್ ರಿಡ್ಜ್ ಪಟ್ಟಣದ ನಿವಾಸಿಗಳು ಮನೆಯಿಂದಾಚೆ ಬಾರದಂತೆ ಎಚ್ಚರಿಸಿದ್ದಾರೆ. ಘಟನಾ ಸ್ಥಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ.

ತನಿಖೆ ಚುರುಕುಗೊಳಿಸಿರುವ ಪೊಲೀಸರು ಕೃತ್ಯ ಎಸಗಿದ ಮತ್ತೊಬ್ಬ ಗನ್‌ ಮ್ಯಾನ್‌ ಮೃತಪಟ್ಟಿದ್ದಾನೆಯೇ ಅಥವಾ ತಪ್ಪಿಸಿಕೊಂಡಿದ್ದಾನೆಯೇ ಎಂಬ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *