Menu

ಕುಡಿದು ಕ್ಯಾಬ್‌ಗೆ ವಾಹನ ಗುದ್ದಿಸಿದ ಯುವತಿಯರಿಂದ ಚಾಲಕನಿಗೆ ಹಲ್ಲೆ

ಬೆಂಗಳೂರಿನ ಬನ್ನೇರುಘಟ್ಟ ರೋಡ್‌ನ ಹುಳಿಮಾವು-ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಕಂಠಪೂರ್ತಿ ಕುಡಿದ ಯುವತಿಯರಿಬ್ಬರು ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಆರೋಪಿಗಳಾದ ಯುವತಿಯರನ್ನು ಉತ್ತರ ಭಾರತ ಮೂಲದ ಲೀಸಾ ಮತ್ತು ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಇವರು ಸಾರ್ವಜನಿಕರ ಜತೆಯೂ ಅಸಭ್ಯವಾಗಿ ವರ್ತಿಸಿದ್ದಾರೆ.

ಕುಡಿದು ಯುವತಿಯರು ದ್ವಿಚಕ್ರ ವಾಹನ ಓಡಿಸುತ್ತಿದ್ದು, ಕಾರು, ಬೈಕ್​ಗಳಿಗೆ ಗುದ್ದಿದೆ. ಪ್ರಶ್ನಿಸಿದವರ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪೊಲೀಸರ ಜತೆಗೂ ಜಗಳವಾಡಿದ್ದಾರೆ ಎನ್ನಲಾಗಿದೆ. ವಾಹನ ಚಲಾಯಿಸಿಕೊಂಡು ಬಂದ ಆರೋಪಿಗಳು ಹುಳಿಮಾವು ಬಳಿ ಕ್ಯಾಬ್‌ ಒಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಯುವತಿಯರನ್ನು ಕ್ಯಾಬ್ ಚಾಲಕ ಅಹ್ಮದ್ ಪ್ರಶ್ನೆ ಮಾಡಿದ್ದಕ್ಕೆ ನಿಂದಿಸಿ ಪರಾರಿಯಾಗಲು ಯತ್ನಿಸಿದರು. ಆಗ ಸ್ಥಳೀಯರು ತಡೆದಿದ್ದಾರೆ. ಯುವತಿಯರು ಕೈಗೆ ಚೈನ್ ಸುತ್ತಿಕೊಂಡು ಅಹ್ಮದ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಸಭ್ಯ ಸನ್ನೆ ತೋರಿಸಿದ್ದಾರೆ.

ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಬಂದ ಪೊಲೀಸರ ಬಳಿಯೂ ಯುವತಿಯರು ಕೆಟ್ಟದಾಗಿ ವರ್ತಿಸಿದ್ದಾರೆ. ಜೆ.ಪಿ. ನಗರ ಹಾಗೂ ಕೋರಮಂಗಲದಲ್ಲಿ ವಾಸವಾಗಿರುವ ಯುವತಿಯರು ಸ್ನೇಹಿತನ ಜತೆ ಪಾರ್ಟಿ ಮುಗಿಸಿ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಲೀಸಾ ಮತ್ತು ಮ್ಯಾಥ್ಯೂ ಸಂಚರಿಸುತ್ತಿದ್ದ ಸ್ಕೂಟಿ ಹಿಂದಿನಿಂದ ಬಂದು ನನ್ನ ಕ್ಯಾಬ್​​ಗೆ ಟಚ್​​ ಆಗಿದೆ. ಹೀಗಾಗಿ ಗಾಡಿ ನಿಲ್ಲಿಸಿ ಈ ಬಗ್ಗೆ ಪ್ರಶ್ನಿಸಿದೆ. ನಾನು ಮಾತನಾಡುತ್ತಿದ್ದರೂ ಕ್ಯಾರೇ ಎನ್ನದೆ ಅವರು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋಗೋಕೆ ಯತ್ನಿಸಿದಾಗ ಸ್ಥಳೀಯರೆಲ್ಲ ಅಡ್ಡಗಟ್ಟಿದರು. ಯುವತಿಯರು ಚೈನ್ ಸುತ್ತಿಕೊಂಡು ನನ್ನ ಮುಖ, ಕೈ, ಬೆನ್ನಿನ ಮೇಲೆ ದಾಳಿ ನಡೆಸಿದರು. ಸ್ಥಳೀರು ನನ್ನ ಸಹಾಯಕ್ಕೆ ಧಾವಿಸಿದರು. ಪೊಲೀಸರ ಜತೆಯೂ ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಕ್ಯಾಬ್‌ ಚಾಲಕ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *