ಉಡುಪಿಯ ಯುವಕನೊಬ್ಬ ಸ್ನೇಹಿತನೊಂದಿಗೆ ಸೇರಿ ಖರೀದಿಸಿದ ಅಬುಧಾಬಿಯ ಲಕ್ಕಿ ಡ್ರಾನಲ್ಲಿ 49 ಕೋಟಿ ರೂ. ಬಹುಮಾನ ಲಭಿಸಿದೆ. ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಬಹುಮಾನ ವಿಜೇತರಾಗಿದ್ದು, 20 ಮಿಲಿಯನ್ ದಿರಮ್ ಬಹುಮಾನ ಸಿಕ್ಕಿದೆ.
ಅಬುಧಾಬಿಯಲ್ಲಿ ಬಿಗ್ ಟಿಕೆಟ್ ಲಕ್ಕಿ ಡ್ರಾ ನಡೆದಿತ್ತು. ಬಿಗ್ ಬಂಪರ್ ಜೊತೆಗೆ ಹೆಚ್ಚುವರಿ ಬಹುಮಾನಗಳು ಇದ್ದ ಲಕ್ಕಿ ಡ್ರಾ ಇದಾಗಿತ್ತು. ನೇರ ಪ್ರಸಾರ ಡ್ರಾದಲ್ಲಿ ಬಹುಮಾನ ಘೋಷಣೆ ಮಾಡಲಾಗಿದೆ.
ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ಸೇಲ್ಸ್ ವಿಭಾಗದಲ್ಲಿ ಶಂತನು ದುಡಿಯುತ್ತಿದ್ದರು. ಸ್ನೇಹಿತನ ಜೊತೆ ಸೇರಿ ಟಿಕೆಟ್ ಖರೀದಿಸಿದ್ದರು. ಬಹುಮಾನವನ್ನು ಸ್ನೇಹಿತನ ಜೊತೆ ಹಂಚಿಕೊಳ್ಳುವು ದಾಗಿ ನಿರ್ಧರಿಸಿದ್ದಾರೆ. ಕಾಪು ತಾಲೂಕಿನ ಮಟ್ಟು ಪರಿಸರದಲ್ಲಿ ನೆಲೆಸಿರುವ ಕುಟುಂಬದ ಜೊತೆ ಶಂತನು ಸಂತೋಷ ಹಂಚಿಕೊಂಡಿದ್ದಾರೆ.


