ಬೆಂಗಳೂರಿನಲ್ಲಿ ಆಗಾಗ ಹುಸಿ ಬಾಂಬ್ ಕರೆಗಳು ಸದ್ದು ಮಾಡುತ್ತಿದ್ದು, ಹಲಸೂರು ಬಳಿ ಇರುವ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ.
ಜನವರಿ 30ರಂದು ಬಂದಿದ್ದ ಬೆದರಿಕೆ ಮೇಲ್ ಬಂದಿದ್ದು, 5 ಆರ್‌ಡಿಎಕ್ಸ್ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಇಟಾಲಿಯನ್ ಕಾನ್ಸುಲೇಟ್‌ನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಒ ಮಿಲಾನೋ ಎಂಬವರು ಹಲಸೂರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಳ್ಳತನಕ್ಕೆ ಹೋದಾಗ ಹಲ್ಲೆ ಮಾಡಿದರೆಂದು ದೂರು: ಕಳ್ಳನ ಅರೆಸ್ಟ್ ಮಾಡಿದ ಪೊಲೀಸ್
ಬೆಂಗಳೂರಿನಲ್ಲಿ ಕಳ್ಳತನಕ್ಕೆ ಹೋದ ವ್ಯಕ್ತಿ ಮನೆಯವರ ಬಳಿ ಸಿಕ್ಕಿಬಿದ್ದು ಪೆಟ್ಟು ತಿಂದು ಬಂದು ಕದಿಯಲು ಹೋದ ವೇಳೆ ಆ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ ಅಸ್ಗರ್ ಖಾನ್ ಕೆಟ್ಟ ಚಟಗಳಿಗೆ ದಾಸನಾಗಿದ್ದ. ದುಡಿಯುವ ಹಣ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಸ್ನೇಹಿತರು ಕಳ್ಳತನ ಮಾಡಿ ಖರ್ಚಿಗೆ ದುಡ್ಡು ಮಾಡಿ ಕೊಳ್ಳುತ್ತಿದ್ದರು. ಇವರಿಂದಾಗಿ ಅಸ್ಗರ್ ತಾನೂ ಕಳ್ಳತನ ಮಾಡಿ ಹಣ ಮಾಡಬೇಕೆಂದು ನಿರ್ಧರಿಸಿದ್ದ. ಇಬ್ಬರು ಸ್ನೇಹಿತರ ಜೊತೆಗೂಡಿ ಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕಬ್ಬಿಣ ಕದಿ ಯಲು ಕಾಂಪೌಂಟ್ ಹಾರಿದ್ದ. ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ದಂಪತಿ ಗಮನಿಸಿ ಪ್ರಶ್ನೆ ಮಾಡಿದ್ದಾರೆ. ಸಿಟ್ಟಾದ ಅಸ್ಗರ್ ದಂಪತಿ ಮೇಲೆ ಹಲ್ಲೆ ಮಾಡಿದ್ದಾನೆ. ಅಕ್ಕ ಪಕ್ಕದ ಮನೆಯವರೂ ಸ್ಥಳಕ್ಕೆ ಬಂದು ಹಲ್ಲೆ ನಡೆಸಿದ್ದಾರೆ.
ತಪ್ಪಿಸಕೊಂಡು ಬಂದ ಅಸ್ಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಅಸ್ಗರ್ನನ್ನು ಅರೆಸ್ಟ್ ಮಾಡಿರುವ ಸಂಪಿಗೆಹಳ್ಳಿ ಪೊಲೀಸರು, ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.


