Thursday, January 30, 2025
Menu

ಬೀದರ್: ಎಟಿಎಂ ವಾಹನದ ಮೇಲೆ ಗುಂಡು ಹಾರಿಸಿ 90 ಲಕ್ಷ ರೂ. ದರೋಡೆ: ಇಬ್ಬರು ಸಿಬ್ಬಂದಿ ಸಾವು

ಎಟಿಎಎಂ ವಾಹನದ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಸುಮಾರು 90 ಲಕ್ಷ ರೂ. ಹಣ ದರೋಡೆ ಮಾಡಿದ ಆಘಾತಕಾರಿ ಘಟನೆ ಬೀದರ್ ನಲ್ಲಿ ನಡೆದಿದ್ದು, ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ.

ಗುರುವಾರ ಬೆಳಿಗ್ಗೆ ಶಿವಾಜಿ ರಾವ್ ವೃತ್ತದ ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಸಿಬ್ಬಂದಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್ [26] ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

ಬೀದರ್ ನ ಎಸ್‌ಬಿಐ ಬ್ಯಾಂಕ್ ಕಚೇರಿಯ ಎಟಿಎಂಗೆ ಹಣ ಹಾಕಲು ಏಜೆನ್ಸಿಯ ಸಿಬ್ಬಂದಿ ವಾಹನದಲ್ಲಿ ಬಂದಿದ್ದಾಗ ಇಬ್ಬರು ದುಷ್ಕರ್ಮಿಗಳು ಬಂದು ಗುಂಡು ಹಾರಿಸಿದ್ದಾರೆ. ಬಳಿಕ ಉಳಿದ ಸಿಬ್ಬಂದಿ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ ಹಣವನ್ನು ಖದೀಮರು ಕದ್ದೊಯ್ದಿದ್ದಾರೆ.

ದುಷ್ಕರ್ಮಿಗಳು ೫ ಸುತ್ತಿನ ಗುಂಡಿನ ದಾಳಿ ನಡೆದ ಬಳಿಕ ಹಣ ತೆಗೆದುಕೊಂಡು ಖದೀಮರು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಏಜೆನ್ಸಿಯ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿ ಶಿವಕುಮಾರ್ ಅವರನ್ನು ಭೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

Related Posts

Leave a Reply

Your email address will not be published. Required fields are marked *