Menu

Iran-Israel war: ಉದ್ವಿಗ್ನಗೊಂಡ ಇರಾನ್‌-ಇಸ್ರೇಲ್‌: ಕ್ಷಿಪಣಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ತೀವ್ರಗೊಂಡಿದ್ದು, ಕ್ಷಿಪಣಿ ದಾಳಿ- ಪ್ರತಿದಾಳಿ ಮುಂದುವರಿದಿದೆ. ಈವರೆಗಿನ ದಾಳಿಯಲ್ಲಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅಣ್ವಸ್ತ್ರ ವಿಜ್ಞಾನಿಗಳು ಸೇರಿದಂತೆ ಈವರೆಗೆ 14 ಹಿರಿಯ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ಆಪರೇಷನ್‌ ʻರೈಸಿಂಗ್‌ ಲಯನ್‌ʼ ಬಳಿಕ ಎರಡೂ ದೇಶಗಳಲ್ಲೂ ಉದ್ವಿ ಸ್ಥಿತಿಗ್ನ ನಿರ್ಮಾಣಗೊಂಡಿದೆ. ಇರಾನ್‌ ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್‌ ಇರಾನ್‌ನ ಅಣ್ವಸ್ತ್ರ ಮಿಲಿಟರಿ ನೆಲೆಗಳಾದ ನಂತರ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಆರಂಭಿಸಿದೆ. ಇರಾನ್‌ನ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು ಹಾಗೂ 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿಯಾಗಿದೆ.

ಇರಾನ್‌ ಕೂಡ ಇಸ್ರೇಲ್‌ ಮೇಲೆ 200 ಖಂಡಾಂತರ ಕ್ಷಿಪಣಿಗಳು ಹಾಗೂ 100 ಡ್ರೋನ್‌ಗಳಿಂದ ದಾಳಿ ನಡೆಸಿದೆ. ಟೆಲ್‌ ಅವಿವ್‌, ಜೆರುಸಲೆಮ್‌ ಸೇರಿದಂತೆ ಮಿಲಿಟರಿ ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಎರಡೂ ದೇಶಗಳ ಮಧ್ಯೆ ಸಂಘರ್ಷ ಮುಂದುವರಿದಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಟೆಹರಾನ್‌ ಹೊತ್ತಿ ಉರಿಯಯತ್ತೆ, ನಿರಂತರ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕೂಡ ಇಸ್ರೇಲ್‌ ಮೇಲೆ ವ್ಯಾಪಕ ದಾಳಿ ನಡೆಸುವ ಸೂಚನೆ ಕೊಟ್ಟಿದೆ. ಇಸ್ರೇಲ್‌ನಿಂದ ದಾಳಿ ನಿಲ್ಲುವವರೆಗೂ ನಾವು ಕದನ ವಿರಾಮದ ಬಗ್ಗೆ ಮಾತನಾಡುವುದಿಲ್ಲ ಎಂದು ಒಮನ್ ಮತ್ತು ಕತಾರ್‌ನ ಮಧ್ಯಸ್ಥಿಕೆಯನ್ನು ಇರಾನ್‌ ತಿರಸ್ಕರಿಸಿದೆ.

ಇಸ್ರೇಲ್‌ ನಡೆಸಿದ ದಾಳಿಯಲ್ಲಿ 224 ಮಂದಿ ಅಸು ನೀಗಿ, 1,277 ಜನರು ಗಾಯಗೊಂಡಿದ್ದಾರೆ. ಇರಾನ್‌ ನಡೆಸಿದ ದಾಳಿಯಲ್ಲಿ 14 ಇಸ್ರೇಲ್ ನಾಗರಿಕರು ಸತ್ತಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Related Posts

Leave a Reply

Your email address will not be published. Required fields are marked *