ಗೋವಾ
ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಹಾಫ್’ ಚಿತ್ರಕ್ಕೆ ಭರ್ಜರಿ ಸ್ವಾಗತ
ಉದಯಕಾಲ ನ್ಯೂಸ್, ಪಣಜಿ (ಗೋವಾ): ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಬಹುನಿರೀಕ್ಷಿತ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ ‘ಹಾಫ್’ (HALF) ಯಶಸ್ವಿ ಏಷ್ಯನ್ ಪ್ರೀಮಿಯರ್ ಕಂಡಿದ್ದು, ಸಿನಿಪ್ರಿಯರಿಂದ ಅಭೂತಪೂರ್ವ ಸ್ವಾಗತ ಪಡೆದುಕೊಂಡಿದೆ. ಫ್ರಾಗ್ರೆಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಆನ್ ಸಜೀವ್ ಮತ್ತು ಪಿ.ಕೆ. ಸಜೀವ್ ನಿರ್ಮಿಸಿರುವ ಈ ಸಿನಿಮಾ, ಪಣಜಿಯ ಪಿವಿಆರ್ ಐನಾಕ್ಸ್ ಆಡಿಟೋರಿಯಂ 4ರಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಹೌಸ್‌ಫುಲ್ ಪ್ರದರ್ಶನ


