Menu

ಅಗಲಿದ ಗಣ್ಯರಿಗೆ ವಿಧಾನ ಪರಿಷತ್ ನಲ್ಲಿ ಸಂತಾಪ

ಬೆಳಗಾವಿ, ಸುವರ್ಣವಿಧಾನಸೌಧ: ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾದ ವಿಧಾನಮಂಡಲದ ಚಳಿಗಾಲ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ  ಮೇಲ್ಮನೆಯಾದ ವಿಧಾನಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು.

ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕೆ.ಎಚ್. ಶ್ರೀನಿವಾಸ, ಶುಭಲತಾ ವಸಂತ ಅಸ್ನೋಟಿಕರ್, ಕಾಲೇಬುಡ್ಡೆ ಇಸ್ಮಾಯಿಲ್ ಸಾಬ್, ನರೇಂದ್ರ ಖೇಣಿ, ಕೆ ನಿರಂಜನ ನಾಯ್ಡು, ಸಾವಿತ್ರಮ್ಮ ಎಂ ಗುಂಡಿ, ಮಾಜಿ ಸಚಿವ ಹಾಗೂ ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಮನೋಹರ್ ತಹಸೀಲ್ದಾರ, ರಾಷ್ಟ್ರಕಂಡ ಶ್ರೇಷ್ಠ ಕೈಗಾರಿಕೋದ್ಯಮಿ ಮತ್ತು ಮಾನವತಾವಾದಿ ರತನ್ ನಾವಲ್ ಟಾಟಾ, ಕಲಬುರಗಿ ಜಿಲ್ಲೆಯ ಖಾಜಾ ಬಂದೇ ನವಾಜ್ ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ಶಿಕ್ಷಣ ತಜ್ಞರಾದ ಡಾ.ಸೈಯದ್ ಶಹಾ ಖುಸ್ರೊ ಹುಸೇನಿ, ಖ್ಯಾತ ಸಾಹಿತಿ ರಾಜಶೇಖರ ನೀರಮಾನ್ವಿ ಅವರಿಗೆ ಸಂತಾಪ ಸೂಚಿಸಲಾಯಿತು.

ಆರಂಭದಲ್ಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆಯ ನಿರ್ಣಯದ ಪ್ರತಿಯನ್ನು ಸಭೆಗೆ ಮಂಡಿಸಿದರು.

ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಸಭಾ ನಾಯಕರಾದ ಸಚಿವ ಎನ್.ಎಸ್.ಭೋಸರಾಜು   ಮತ್ತು ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅಗಲಿದ ಗಣ್ಯರು ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಮೃತರುಗಳ ಆತ್ಮಕ್ಕೆ ಸದ್ಗತಿಯನ್ನು ಕೋರಿದರು. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಹೇಳಿದರು.

ವಿಧಾನಪರಿಷತ್ನ ಶಾಸಕರು ಅಗಲಿದ ಗಣ್ಯರ ಸೇವೆ ಮತ್ತು ಒಡನಾಟ ಸೇರಿ ಇನ್ನೀತರ ವಿಷಯಗಳನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಅಗಲಿದ ಗಣ್ಯರ ಗೌರವಾರ್ಥ ಮಾನ್ಯ ಶಾಸಕರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವುದರ ಮೂಲಕ ನಮನ ಸಲ್ಲಿಸಿದರು.

Related Posts

Leave a Reply

Your email address will not be published. Required fields are marked *