Menu

ಆರ್‌ಎಸ್‌ಎಸ್ ಮತ್ತು ಪ್ರಿಯಾಂಕ್  ಖರ್ಗೆ ಎತ್ತಿರುವ ಪ್ರಶ್ನೆ

ಸರ್ಕಾರವಾಗಿ ರಾಜ್ಯದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಈಗ ಆರ್ ಎಸ್ ಎಸ್ ನೋಂದಣಿ ಪ್ರಶ್ನೆ ಎತ್ತಿದ್ದಾರೆ. ಈ ಸಂಸ್ಥೆಯ ಪ್ರಮುಖರಿಗೆ ಪತ್ರವನ್ನೂ ಸಚಿವರು ಬರೆದಿದ್ದಾರೆ. ಆದರೆ ಈ ಪತ್ರಕ್ಕೆ ಉತ್ತರಿಸುವ ಪ್ರಮೇಯವಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈ ವಿವಾದ ಇಲ್ಲಿಗೆ ಮುಗಿಯಲಿಲ್ಲ. ಇದು ಆರಂಭ. ಅಯೋಧ್ಯೆಯ ರಾಮಮಂದಿರದ ವಿವಾದದಷ್ಟೇ ಜಟಿಲವಾಗುವ ದಿನಗಳು ದೂರವಿಲ್ಲ.

ಆರ್ ಎಸ್ ಎಸ್, ಕಾಂಗ್ರೆಸ್ ಮತ್ತು ದೇಶದ ಸಂವಿಧಾನ; ಇವೆಂದಿಗೂ ಈ ದೇಶದಲ್ಲಿ ಚರ್ಚೆಗೆ ಗ್ರಾಸವಾಗುವಂತಹ ಸಂಗತಿಗಳೇ. ಭಾರತೀಯ ಸಂವಿಧಾನವನ್ನು ಇಲ್ಲಿನ ಪ್ರಜೆಗಳು ಒಪ್ಪಿಕೊಂಡ ಮೇಲೆ, ಇದರ ಕಟ್ಟುಪಾಡು  ಪಾಲಿಸುವುದು ವಿಧಿತ. ಈ ಸಂವಿಧಾನದಲ್ಲಿ ಇರುವುದು ಐರೋಪ್ಯ ಸಂಪ್ರದಾಯ, ರೀತಿ ರಿವಾಜುಗಳ ಮತ್ತು ಪಾಶ್ಚಿಮಾತ್ಯ ಪ್ರೇರಿತ ಸಂಗತಿಗಳು. ಇದನ್ನು ಆಂಗ್ಲ ಪ್ರೇರಿತ ಮತ್ತು ಆಂಗ್ಲಪೂರಿತ ಕಾನೂನಿನ ಕಣಜವೆನ್ನದೆ ವಿಧಿಯಿಲ್ಲ. ಈ ದೇಶದಲ್ಲಿ ಹುಟ್ಟಿ ಬೆಳೆದ ಪ್ರಜೆಗೆ ತನ್ನ ಧಾರ್ಮಿಕ ಮೌಲ್ಯಗಳನ್ನು ವಿಧಿ ಆಚರಣೆ ಅನುಸರಿಸುವ ಮುನ್ನ ಯಾರ ಅಪ್ಪಣೆ ಯನ್ನು ಯಾಕೆ ಪಡೆಯಬೇಕು,  ಆರ್ ಎಸ್ ಎಸ್ ಮುಖ್ಯಸ್ಥರು ಹೇಳುವ ಸ್ಪಷ್ಟ ಮಾತುಗಳು ಇದು.

ಹೌದು. ಈ ದೇಶದ ಸಂವಿಧಾನವು ಜಾರಿಗೆ ಬಂದ ಆರಂಭದ ದಿನಗಳಲ್ಲಿಯೇ ಆರ್ ಎಸ್ ಎಸ್ ನೋಂದಣಿ ಕುರಿತು ವ್ಯಾಪಕ ಚರ್ಚೆ ಆಗಬೇಕಿತ್ತು . ಈಗ ಆರ್‌ಎಸ್ ಎಸ್ ಭಾರತೀಯ ಸಂವಿಧಾನದಡಿಯಲ್ಲಿ ಚರ್ಚೆ ಆಗಬೇಕಿರುವುದು ಎಲ್ಲಿ ,  ಯಾವ ಖಚಿತ ಕಾನೂನಿನಡಿ, ಗುರುಕಾಣಿಕೆ ಪಡೆಯುವ ಒಂದು ದೇಶೀಯ ಸಂಘಟನೆ ದೇಣಿಗೆ ಪಡೆಯುವುದಿಲ್ಲವಲ್ಲ. ಮಿಗಿಲಾಗಿ ಆರ್ ಎಸ್ ಎಸ್ ಸಂಘಟನೆ ಎಂಬ ಖಚಿತ ಡೆಫನೇಷನ್‌ಗೆ ಒಳಪಡುವುದೇ ?

ದೇಶದಲ್ಲಿರುವ ವಿವಿಧ ದೇವಾಲಯಗಳಿಗೆ ಧಾರ್ಮಿಕ ದತ್ತಿ ಕಾಯಿದೆ ಇದೆ. ಮಸೀದಿಗೆ ವಕ್ಫ್ ಕಾಯಿದೆ ಇದೆ. ಸಾಮಾಜಿಕ , ಕೌಟುಂಬಿಕ ಸಂಘಟನೆ ಎಂದಾಗ ಟ್ರಸ್ಟ್ ಕಾಯಿದೆ ಮಾಲಿಕ ಮತ್ತು ಕಾರ್ಮಿಕನ ಸಂಬಂಧ ಇದ್ದಾಗ ಕಾರ್ಮಿಕ ಕಾಯಿದೆ ಅನ್ವಯವಾಗುತ್ತೆ . ಹಾಗಾದರೆ ಇಷ್ಟು ಕಾನೂನುಗಳ ಪೈಕಿ ಆರ್ ಎಸ್ ಎಸ್‌ಗೆ ಅನ್ವಯವಾಗುವಂತಹ ಕಾನೂನು ಯಾವುದು?

ಈ ದೇಶದಲ್ಲಿ ಯಾವುದೂ ಅಷ್ಟು ಸುಲಭವಾಗಿ ತೀರ್ಮಾನವಾಗುವುದಿಲ್ಲ. ರಾಮನು ಜನಿಸಿದ ಜಾಗವನ್ನು ಅಂತಿಮವಾಗಿ ತೀರ್ಮಾನಿಸಿದ್ದು ಈ ದೇಶದ ಸುಪ್ರಿಂಕೋರ್ಟ್. ಇಬ್ಬರ ನಡುವೆ ಜಗಳ ಅಥವಾ ವಿವಾದ ಶುರುವಾದಾಗ ಇದನ್ನು ಇತ್ಯರ್ಥಪಡಿಸಿಕೊಳ್ಳಲು ನಾವಿಂದು ಮೂರನೆ ವ್ಯಕ್ತಿಯಾದ ಅಮೆರಿಕ ಮತ್ತು ರಷ್ಯಾ ದೇಶಕ್ಕೆ ಮೊರೆಯಿಡಲು ಸಾಧ್ಯವಿಲ್ಲ. ಸಂವಿಧಾನದಡಿ ಈ ಸಮಸ್ಯೆಗೆ ಉತ್ತರಿಸಬೇಕಿರುವುದು ದೇಶದ ಸರ್ವೋನ್ನತ ನ್ಯಾಯಾಲಯ.

ನ್ಯಾಯಶಾಸ್ತ್ರದಲ್ಲಿ ಸಮಾನತೆ ಸಹಜ ನ್ಯಾಯ ಎಂಬುದಕ್ಕೆ ಪ್ರಥಮ ಆದ್ಯತೆ ಇದೆ, ಇದನ್ನು ಎತ್ತಿ ಹಿಡಿಯುವ ಹೊಣೆ ಚುನಾಯಿತ ಸರ್ಕಾರಗಳದ್ದು. ಹಾಗೆಯೆ ಸಂವಿಧಾನದ ಪರಮಾಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಈ ದೇಶದ ಪ್ರತಿಯೋರ್ವ ವ್ಯಕ್ತಿ ಮತ್ತು ಸಂಘ , ಸಂಸ್ಥೆಗಳ ಕರ್ತವ್ಯ. ಸಂವಿಧಾನದ ಪಾಲನೆಯಲ್ಲಿ ಲೋಪವಾಗಿದ್ದಲ್ಲಿ ಇದನ್ನು ಸರಿಪಡಿಸಿ ಸಂರಕ್ಷಿಸುವ ಹೊಣೆಗಾರಿಕೆಯನ್ನು ಸರ್ಕಾರ ಹೊಂದಿದೆ. ಸರ್ಕಾರವಾಗಿ ರಾಜ್ಯದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಈಗ ಆರ್ ಎಸ್ ಎಸ್ ನೊಂದಣಿಯ ಪ್ರಶ್ನೆ ಎತ್ತಿದ್ದಾರೆ. ಈ ಸಂಸ್ಥೆಯ ಪ್ರಮುಖರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಪತ್ರಕ್ಕೆ ಉತ್ತರಿಸುವ ಪ್ರಮೇಯವಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈ ವಿವಾದ ಇಲ್ಲಿಗೇ ನಿಲ್ಲುವುದಿಲ್ಲ. ಇದು ಆರಂಭವಷ್ಟೆ.

Related Posts

Leave a Reply

Your email address will not be published. Required fields are marked *