Menu

ಮುಧೋಳದಲ್ಲಿ ಬಸ್‌ಗೆ ಬೈಕ್‌ ಡಿಕ್ಕಿ: ಯುವಕ ಸಜೀವ ದಹನ

ಮುಧೋಳ ತಾಲೂಕಿನ ಸೊರಗಾಂವ್ ಗ್ರಾಮದ ಬಳಿ ಬಸ್‌ಗೆ ಬೈಕ್ ಡಿಕ್ಕಿಯಾಗಿದ್ದು, ಬೈಕ್‌ಗೆ ಬೆಂಕಿ ತಗುಲಿ ಯುವಕ ಜೀವಂತವಾಗಿ ದಹನಗೊಂಡಿರುವ ಭೀಕರ ಘಟನೆ ನಡೆದಿದೆ. ಮುಧೋಳ ಪಟ್ಟಣದ ಜನತಾ ಪ್ಲಾಟ್ ನಿವಾಸಿ ನವೀನ್ ಹನುಮಂತ ಗೋರ್ಕ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಬಾದಾಮಿಯಿಂದ ಇಚಲಕರಂಜಿ ಕಡೆಗೆ ತೆರಳುತ್ತಿದ್ದ ಬಸ್‌ಗೆ ಬೈಕ್ ಡಿಕ್ಕಿಯಾಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಬೈಕ್‌ ಸವಾರ ನವೀನ್ ಬೆಂಕಿಯಲ್ಲಿ ಸಿಲುಕಿ ಸ್ಥಳದಲ್ಲೇ ಸುಟ್ಟು ಕರಕಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ

ನೆಲಮಂಗಲದಲ್ಲಿ ಆಟವಾಡುತ್ತಿದ್ದ ಮಗು ಮಹಡಿಯಿಂದ ಬಿದ್ದು ಸಾವು

ಆಟವಾಡುತ್ತಿದ್ದ ಮಗು ಮೊದಲನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.  ಟಿ.ದಾಸರಹಳ್ಳಿ ನಿವಾಸಿ ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿಯ ಎರಡು ವರ್ಷದ ಮಗು ದೀಕ್ಷಿತ್ (2) ಮೃತಪಟ್ಟಿದೆ. ಆಟವಾಡುವಾಗ ಮೆಟ್ಟಿಲ ಮೇಲಿಂದ ಮಗು

ಕಾಂಪೌಂಡ್‌ ಗೋಡ ಕುಸಿತ: ಆಟವಾಡುತ್ತಿದ್ದ ಮಗು ಸಾವು

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಬಿದ್ದು, ಐದು ವರ್ಷದ ಮಗುವೊಂದು ಮೃತಪಟ್ಟಿದೆ. ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಯಾದಗಿಯ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಮೃತಪಟ್ಟ ಮಗು

ಗದಗದಲ್ಲಿ ಸಿಡಿಲು ಬಡಿದು ಯುವಕ ಸಾವು

ಗದಗದ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ  ಜಾನುವಾರು ಮೇಯಿಸಲು ಹೋಗಿದ್ದ ಪ್ರಶಾಂತ್ ಹುಡೇದ (19) ಎಂಬ ಯುವಕ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಅನ್ಣ ತಮ್ಮನ ಮೃತದೇಹವನ್ನು ಮನೆಗೆ ತಂದಿದ್ದಾನೆ.  ಗದಗ ಜಿಲ್ಲೆಯಾದ್ಯಂತ ಶುಕ್ರವಾರ

ಸಿರಗುಪ್ಪದಲ್ಲಿ ಬೈಕ್‌ ರಸ್ತೆ ಗುಂಡಿಗೆ ಬಿದ್ದು ನರ್ಸ್‌ ಬಲಿ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಾಣಕನೂರು ಕ್ರಾಸ್ ಬಳಿ ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ನರ್ಸ್‌ ಬಲಿಯಾಗಿದ್ದು, ಆಕೆಯ ಪತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳುತ್ತಿದ್ದ ದಂಪತಿ ಬೈಕ್ ಸಮೇತ ರಸ್ತೆ ಗುಂಡಿಗೆ ಬಿದ್ದಿದ್ದು, ಪತ್ನಿ

ಆಟವಾಡುತ್ತ ಕಾರು ಡಿಕ್ಕಿಯೊಳಗೆ ಹೋದ ಮಗು ಉಸಿರುಗಟ್ಟಿ ಸಾವು

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಡಿಕ್ಕಿಯಲ್ಲಿ ಸಿಲುಕಿ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ಮಗು ಬಸವಪ್ರಭು ಕೊಟ್ಟುರೇಶ್ವರ ಅವರ ಮಗ. ಮಗು ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಆಡುತ್ತಾ

ತಮ್ಮ ಅಪಘಾತಕ್ಕೆ ಬಲಿಯಾದ ಸುದ್ದಿ ತಿಳಿದು ಅಕ್ಕ ಹೃದಯಾಘಾತದಿಂದ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಸೋದರಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬರುತ್ತಿದ್ದಾಗ ಬೈಕ್‌ ಅಪಘಾತದಲ್ಲಿ ಸಹೋದರ ಮೃತಪಟ್ಟ  ಸುದ್ದಿ ಕೇಳಿದ ಅಕ್ಕ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಗದಗದ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ

ಮದುವೆ ಮಂಟಪದಿಂದ ಹನಿಮೂನ್‌ಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್‌ ಪತನ: ವರ, ಪೈಲಟ್‌ ಸಾವು

ಮದುವೆ ಸಂಭ್ರಮದಿಂದ ಹನಿಮೂನ್‌ಗೆ ತೆರಳುತ್ತಿದ್ದ ಜೋಡಿಯಿದ್ದ ಹೆಲಿಕಾಪ್ಟರ್‌ ಅಮೆರಿಕದ ಜಾರ್ಜಿಯಾದಲ್ಲಿ ಪತನಗೊಂಡಿದ್ದು, ಕೇರಳದ ವರ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ವಧು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ವರ ಕೇರಳದ 26 ವರ್ಷದ ಡೇವ್ ಫಿಜಿ, ವೃತ್ತಿಯಲ್ಲಿ ಪೈಲಟ್‌ ಆಗಿದ್ದವರು, ಮದುವೆ ಸಮಾರಂಭದ ಬಳಿಕ

ಮನೆಯಲ್ಲಿ ಎಸಿ ಸ್ಫೋಟ: ನಿವೃತ್ತ ಐಎಎಸ್‌ ಸಾವು

ಮನೆಯಲ್ಲಿ ಎಸಿ ಸ್ಫೋಟಗೊಂಡು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ಮೃತಪಟ್ಟಿದ್ದಾರೆ. ಅವರ ಮಗನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲ್ಲಿಯ ಹೌಜ್‌ಖಾಸ್‌ನಲ್ಲಿರುವ ಧನೇಂದ್ರ ಕುಮಾರ್ ಮನೆಯಲ್ಲಿ

ಕೋರಮಂಗಲದಲ್ಲಿ ಬಿಎಂಟಿಸಿ ಬಸ್‌ಗೆ ಯುವಕ ಬಲಿ

ಬೆಂಗಳೂರಿನ ಕೋರಮಂಗಲದಲ್ಲಿ ಶುಕ್ರವಾರ ರಾತ್ರಿ ನಡೆದ ನಡೆದ ಬಿಎಂಟಿಸಿ ಬಸ್‌ ಅಪಘಾತದಲ್ಲಿ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದು, ಯಶವಂತಪುರ ಸರ್ಕಲ್‌ನಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಬಳಿ ಅಪಘಾತ ಸಂಭವಿಸಿದ್ದು, ಆಂಧ್ರಪ್ರದೇಶ