Wednesday, September 30, 2026
Menu

ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ: ಸಮಗ್ರ ರಕ್ಷಣಾ ವ್ಯವಸ್ಥೆಗೆ ಡಿಕೆ ಶಿವಕುಮಾರ್ ಆದೇಶ

-ಹೇಮಂತ್ ಗೌಡ, ಕನಕಪುರ ಮಲೈ ಮಹದೇಶ್ವರ ಬೆಟ್ಟ—ಭಕ್ತಿಭಾವ, ತ್ಯಾಗ ಮತ್ತು ನಂಬಿಕೆಯ ಸಂಕೇತ. ಪ್ರತಿವರ್ಷ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು  ಪಾದಯಾತ್ರೆಯ ಮೂಲಕ ಈ ಪವಿತ್ರ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಾರೆ. ಆದರೆ ಈ ಭಕ್ತಿಪೂರ್ಣ ಪಯಣದ ನಡುವೆ ಆಗಾಗ  ಸಂಭವಿಸುವ ಅವಘಡಗಳು ಭಕ್ತರಲ್ಲಿ ಆತಂಕ ಮೂಡಿಸುತ್ತಿವೆ. ಭಕ್ತರ ಸುರಕ್ಷತೆ ಕುರಿತ ಆತಂಕದ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಾದಯಾತ್ರೆಗೆ ಸಮಗ್ರ ರಕ್ಷಣಾ ವ್ಯವಸ್ಥೆ ಮಾಡಲು ಬೆಂಗಳೂರು

Union Budget 2026-27: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ಇಲ್ಲ, ಯಾವ ಹೈಸ್ಪೀಡ್ ರೈಲೂ ಬರಲ್ಲ: ಡಿಕೆ ಶಿವಕುಮಾರ್‌ ಕಿಡಿ

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಅನುಕೂಲ ಇಲ್ಲ, ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ. ಯಾವ ಹೈಸ್ಪೀಡ್ ರೈಲೂ ಬರಲ್ಲ. 50:50 ಅನುಪಾತದಲ್ಲಿ ಮಾಡಲು ಆಗಲ್ಲ, 90:10 ಕೊಡಲಿ. ಆಗ ನಾವು 10% ಕೊಡುತ್ತೇವೆ. ಬೇರೆ ರಾಜ್ಯ ಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ

ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಪ್ರಮುಖ ಆರೋಪಿ ಕಿಶೋರ್‌ ಸಾಳ್ವೆ ಪೊಲೀಸ್‌ಗೆ ಶರಣು

ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್‌ನಲ್ಲಿ ಎರಡು ಕಂಟೇನರ್‌ಗಳಲ್ಲಿದ್ದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಿಶೋರ್ ಸಾಳ್ವೆಯನ್ನು ಬಂಧಿಸಲಾಗಿದೆ. ಇ ಕಿಶೋರ್ ಸಾಳ್ವೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಗೆ ತೆರಳಿ ಶರಣಾದ ಬಳಿಕ ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ನಾಲ್ವರು ಕಾರ್ಮಿಕರ ಶಂಕಾಸ್ಪದ ಸಾವು

ಬೆಂಗಳೂರು: ಮಲಗಿದ್ದ ಸ್ಥಿತಿಯಲ್ಲಿ ನಾಲ್ವರು ಕೂಲಿ ಕಾರ್ಮಿಕರು ಶಂಕಾಸ್ಪದವಾಗಿ ಮೃತಪಟ್ಟಿರುವ ದಾರುಣ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಸಂದ್ರದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮುತ್ಸಂದ್ರ ಗ್ರಾಮದ ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಾ ಅಲ್ಲಿಯ ಲೇಬರ್ ಶೆಡ್‌ನಲ್ಲಿ ವಾಸಿಸುತ್ತಿದ್ದ

ಸಿಜೆ ರಾಯ್ ಇಚ್ಚೆಯಂತೆ ತವರು ಕೇರಳ ಬದಲು ಬೆಂಗಳೂರಿನಲ್ಲಿ ಅಂತ್ಯಕ್ರಿಯೆ?

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ.ಸಿಜೆ ರಾಯ್ ಅವರಿಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ. ಆಪ್ತರ ಬಳಿ ಈ ಹಿಂದೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಮಣ್ಣಾಗುವ ಬಗ್ಗೆ ಡಾ.ಸಿ.ಜೆ. ರಾಯ್ ಹೇಳಿಕೊಂಡಿದ್ದರು. ಅವರ ಇಚ್ಚೆಯಂತೆ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು

ರಾಜ್ಯದಲ್ಲಿ 432 ಮಂದಿ ಅಕ್ರಮ: ವಲಸಿಗರು ಪತ್ತೆ 255 ಮಂದಿ ಗಡೀಪಾರು

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ವಿವಿಧ ದೇಶಗಳಿಂದ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿದ್ದ 432 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ 255 ಮಂದಿಯನ್ನ ಗಡೀಪಾರು ಮಾಡಲಾಗಿದೆ. ನಗರದ ಹೊರವಲಯದಲ್ಲಿ ಅಕ್ರಮವಾಗಿ ನೆಲೆಸಿದ್ದ 53 ಮಂದಿ ಬಾಂಗ್ಲಾದೇಶಿಯರನ್ನು ಇತ್ತೀಚೆಗೆ

ಹುಮನಾಬಾದ್ ನಲ್ಲಿ ಸ್ಫೋಟಕ್ಕೆ 6 ಜನರಿಗೆ ಗಾಯ: ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ

ಬೆಂಗಳೂರು: ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ

ತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ

ತುಮಕೂರು: ಠಾಣೆಯ ವಶದಲ್ಲಿದ್ದ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ. ವಾಹನ ಬಿಡುಗಡೆಗೆ ಒಟ್ಟು ₹1 ಲಕ್ಷ ಲಂಚಕ್ಕೆ ಬೇಡಿಕೆ

ಕರೆಂಟ್ ಹೊಡೆದು 5ನೇ ತರಗತಿ ವಿದ್ಯಾರ್ಥಿನಿ ಸಾವು

ಐದನೇ ತರಗತಿ ಓದುತ್ತಿದ್ದ ಹರಿಜನ ವಾರ್ಡಿನ ಶಾಲೆಯ ವಿದ್ಯಾರ್ಥಿನಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ದಾರುಣ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ. ಸಿಂಧನೂರು ತಾಲೂಕಿನ ಕುರುಕುಂದ ಗ್ರಾಮದ ಹರಿಜನ ವಾರ್ಡಿನಲ್ಲಿ 5ನೇ ತರಗತಿ ಓದುತ್ತಿರುವ ತನುಶ್ರೀ ತಂದೆ ಶಾಮಣ್ಣ ಭಜಂತ್ರಿ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಬಜೆಟ್ ನಲ್ಲಿ ಕನಿಷ್ಠ ಶೇ.4.71 ಪಾಲು ಕೊಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ಬೆಂಗಳೂರು: ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಗಳಷ್ಟು ಆದಾಯ ಬರುತ್ತಿದೆ. ಆದರೆ ರಾಜ್ಯದ ಪಾಲನ್ನು ಈ ಬಾರಿಯ ಬಜೆಟ್ ನಲ್ಲಿ ಶೇ 4.71ಕ್ಕಿಂತ ಅಧಿಕ ಪಾಲು ನೀಡಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ. ಮುಖ್ಯಮಂತ್ರಿ