Menu

ಸ್ಥಳೀಯ ಪತ್ರಿಕೆಗಳು ಮುಖ್ಯಮಂತ್ರಿಗಳ ಆದ್ಯತೆ: ಕೆವಿ ಪ್ರಭಾಕರ್

ಸ್ಥಳೀಯ ಪತ್ರಿಕೆಗಳು ಮುಖ್ಯಮಂತ್ರಿಗಳ ಮೊದಲ ಆದ್ಯತೆಯಾಗಿದೆ. ಸ್ಥಳೀಯ ಮತ್ತು ಸಣ್ಣ ಪತ್ರಿಕೆಗಳಿಗೆ ಜಾಹಿರಾತಿನಲ್ಲಿ ತೊಂದರೆ ಆಗಬಾರದು ಎನ್ನುವ ನಿಲುವು ಮುಖ್ಯಮಂತ್ರಿಗಳದ್ದೂ ಆಗಿದೆ, ನನ್ನದೂ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್  ಹೇಳಿದ್ದಾರೆ. ಮಾಧ್ಯಮ‌ ಸಲಹೆಗಾರ ಹೊಣೆಗಾರಿಕೆ ಹೂವಿನ‌ ಹಾದಿ ಅಲ್ಲ, ಮುಳ್ಳಿನ ಹಾಸಿಗೆ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆ ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ

ರಾಜೀವ್‌ ಗಾಂಧಿ ಹತ್ಯೆಗೆ ಕಾರಣನಾಗಿದ್ದ ವಿ ಪ್ರಭಾಕರನ್‌ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್‌

ಟಿವಿಕೆ ಸ್ಥಾಪಕ, ನಟ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಕಾರಣವಾಗಿರುವ ಎಲ್‌ಟಿಟಿಇ ಸಂಘಟನೆಯ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್‌ನನ್ನು ಸ್ಮರಿಸಿದ್ದು, ಈ ರಾಜಕೀಯ ನಡೆ ಭಾರಿ ಸಂಚಲನ ಸೃಷ್ಟಿಸಿದೆ. ವಿಜಯ್, ವೇಲುಪಿಳ್ಳೈ ಪ್ರಭಾಕರನ್‌ನ ‘ತಾಯಿ ಹೃದಯಕ್ಕೆ’ ಹೋಲಿಸಿದ್ದಾರೆ.

ಕ್ಯಾಮೆರಾ ಅಳವಡಿಸಿ ಸೇನಾಪಡೆಗಳ ಮಾಹಿತಿಯನ್ನು ಪಾಕ್‌ಗೆ ನೀಡುತ್ತಿದ್ದಾತನ ಬಂಧನ

ದೇಶದ ಸೇನಾ ಪಡೆಗಳ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದಡಿ ಪಠಾಣ್‌ಕೋಟ್ ಪೊಲೀಸರು ಬಲ್ಜಿತ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಚಕ್ ಧಾರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್-ಜಮ್ಮು ರಸ್ತೆಯ ಸೇತುವೆಯ ಬಳಿಯ ಅಂಗಡಿಯಲ್ಲಿ ಇಂಟರ್ನೆಟ್

ತಮಿಳುನಾಡು ಸಿಎಂ ವಿಜಯ್ ಮತ್ತಿತರರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ಚುನಾವಣೆ ಸಂದರ್ಭದಲ್ಲಿ ಮಕ್ಕಳ ಬಳಕೆ, ಭ್ರಷ್ಟಾಚಾರ ಆರೋಪಗಳಡಿ ಟಿವಿಕೆ ಸ್ಥಾಪಕ, ತಮಿಳುನಾಡು ಸಿಎಂ ವಿಜಯ್ ಮತ್ತಿತರರಿಗೆ ನೋಟಿಸ್ ನೀಡಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭ ಮತದಾರರ ಮೇಲೆ ಪ್ರಭಾವ ಬೀರಲು ಮಕ್ಕಳ ಬಳಕೆ ಸೇರಿದಂತೆ

24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ

ಜೂನ್ 18ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದೇ ವೇಳೆ ಮಹಾರಾಷ್ಟ್ರ

ರಾಜ್ಯದ ನಾಗರಿಕರ ಮತದಾನ ಹಕ್ಕು ರಕ್ಷಣೆಗೆ ಸರ್ವಪ್ರಯತ್ನ: ಸಚಿವ ಹೆಚ್.ಕೆ.ಪಾಟೀಲ್

ರಾಷ್ಟ್ರದ ನಾಗರಿಕನಾಗಿರುವ ರಾಜ್ಯದ ಯಾವುದೇ ಪ್ರಜೆಗೆ ತನ್ನ ಮತದಾನದ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವಂತಹ ಪ್ರಕ್ರಿಯೆ ನಡೆದರೆ, ಅಂತಹ ಪ್ರಕ್ರಿಯೆಯಿಂದ ನಾಗರೀಕನ ಮತದಾನದ ಹಕ್ಕನ್ನು ಕಾಪಾಡಲು ಸರ್ವಪ್ರಯತ್ನಗಳನ್ನು ಮಾಡಲು ಚಿಂತನೆ ನಡೆಸಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಕರ್ನಾಟಕ

ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ರಾಜ್ಯಗಳೇ ನಡೆಸಲಿ: ಸಿಎಂ ಸಿದ್ದರಾಮಯ್ಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಪ್ರಧಾನಿ,  ಕೇಂದ್ರ ಸಚಿವ ಪ್ರಧಾನ್ ಹೊಣೆಗಾರರು.  ಮೋದಿಯವರು ನೀಟ್ ವಿದ್ಯಾರ್ಥಿಗಳಿಗೆ ಬೇಷರತ್ ಕ್ಷಮೆ ಕೋರಬೇಕು. ಆಯಾ ರಾಜ್ಯಗಳಿಗೆ ವೈದ್ಯಕೀಯ ಕಾಲೇಜು ಪ್ರವೇಶ  ಪರೀಕ್ಷೆ ನಡೆಸುವ ಅವಕಾಶ ನೀಡಬೇಕು ಎಂದು  ಸಿಎಂ ಸಿದ್ದರಾಮಯ್ಯ  ಆಗ್ರಹಿಸಿದ್ದಾರೆ. ಫ್ರೀಡಂ ಪಾರ್ಕ್

ದೇವರು, ದೇವಸ್ಥಾನ ಎಲ್ಲರ ಆಸ್ತಿ, ದೇವರಿಗೆ ಜಾತಿ, ಧರ್ಮ ಇಲ್ಲ: ಡಿಸಿಎಂ

“ದೇವರು ಕಷ್ಟ ಕೊಡುತ್ತಾನೆ ಜೊತೆಗೆ ಅದನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತಾನೆ. ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪಬೇಕಿರುವುದು ನಮ್ಮ ಕೆಲಸ. ದೇವರು, ದೇವಸ್ಥಾನ ಎಲ್ಲರ ಆಸ್ತಿ. ದೇವರು ನೀಡುವ ಅವಕಾಶವನ್ನು ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಕೈಯಿಂದ ದಾನ ಮಾಡಿ” ಎಂದು

ಶೀಘ್ರ ಮೇಕೆದಾಟು ಡಿಪಿಆರ್ ಸಲ್ಲಿಕೆ, ಕೇಂದ್ರದ ಅನುಮತಿ ಬಳಿಕ ಭೂಮಿಪೂಜೆ: ಡಿಕೆ ಶಿವಕುಮಾರ್

“ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಈ ಯೋಜನೆಯ ಕಚೇರಿ ಆರಂಭಿಸಿದ್ದೇವೆ. ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನೀಡಲು ಜಮೀನು ಗುರುತಿಸುತ್ತಿದ್ದೇವೆ. ಶೀಘ್ರವೇ ಕೇಂದ್ರಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಿದ್ದು, ಕೇಂದ್ರ ಸರ್ಕಾರದ ಅನುಮತಿ ಬಳಿಕ ಯೋಜನೆಯ ಭೂಮಿ ಪೂಜೆ ಮಾಡಲಾಗುವುದು” ಎಂದು 

ಸೋಲಿನ ಭಯದಿಂದ ಕಾಂಗ್ರೆಸ್ ಸರ್ಕಾರ  ಜಿಬಿಎ ಚುನಾವಣೆ ಮುಂದೂಡುತ್ತಿದೆ: ಆರ್‌ ಅಶೋಕ

ಸೋಲುವ ಭಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಕಾಂಗ್ರೆಸ್ ಸರ್ಕಾರ ಪದೇ ಪದೆ ಮುಂದೂಡುತ್ತಿದ್ದು, ಇದು ಬೆಂಗಳೂರು ಜನತೆಗೆ ಮಾಡಿರುವ ದ್ರೋಹ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಇದ್ದ 198 ವಾರ್ಡ್‌ಗಳ ಆಧಾರದ