Wednesday, September 09, 2026
Menu

ಸೈಫ್‌ಗೆ ಇರಿದಾತನ ಬೆರಳಚ್ಚು ಪತ್ತೆ

ಮುಂಬೈನ ಬಾಂದ್ರಾದಲ್ಲಿರುವ  ನಿವಾಸದಲ್ಲಿ ಇತ್ತೀಚೆಗೆ ನಟ ಸೈಫ್‌ ಅಲಿಖಾನ್‌ಗೆ ಚಾಕುವಿನಿಂದ ಇರಿದಿದ್ದ ಬಂಧಿತ ಆರೋಪಿಯ ಬೆರಳಚ್ಚುಗಳನ್ನು ವಿವಿಧ ಸ್ಥಳಗಳಿಂದ ಸಂಗ್ರಹಿಸಿರುವ ಅಧಿಕಾರಿಗಳು  ತನಿಖೆ ಮುಂದುವರಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.  ಜನವರಿ ೧೬ರಂದು ಬಾಂದ್ರಾದಲ್ಲಿರುವ ಸದ್ಗುರು ಶರಣ್ ಅಪಾರ್ಟ್ಮೆಂಟ್‌ನಲ್ಲಿರುವ ಸೈಫ್ ಅಲಿ ಖಾನ್ ನಿವಾಸದೊಳಗೆ ನುಗ್ಗಿದ್ದ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಭಾನುವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಸ್ಥಳೀಯ ಪೊಲೀಸರು ಮತ್ತು ಅಪರಾಧ ವಿಭಾಗವು ನಿವಾಸಕ್ಕೆ ತೆರಳಿ ಬೆರಳಚ್ಚುಗಳನ್ನು ಸಂಗ್ರಹಿಸಿದೆ. ವಿಧಿವಿಜ್ಞಾನ ತಂಡವೂ ಅಲ್ಲಿಗೆ ಭೇಟಿ ನೀಡಿದೆ.  ಸ್ನಾನಗೃಹದ ಕಿಟಕಿ, ಡಕ್ಟ್ ಶಾಫ್ಟ್ ಸೇರಿದಂತೆ ಆರೋಪಿಯ ಬೆರಳಚ್ಚುಗಳು ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾಗಿವೆ.  ಆರೋಪಿ ಬಾಂಗ್ಲಾದೇಶದ ಜಲೋಕಾತಿ ಜಿಲ್ಲೆಯವ, ಐದು ತಿಂಗಳಿನಿಂದ ಮುಂಬೈನಲ್ಲಿ ನೆಲೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *