ದೇಶ-ವಿದೇಶ
ಜಿಮೇಲ್ ಬಳಕೆದಾರರು ಪಾಸ್‌ವರ್ಡ್ ಬದಲಿಸಿ: ಸೈಬರ್ ಸೆಕ್ಯುರಿಟಿ ತಜ್ಞರ ಎಚ್ಚರಿಕೆ
18 ಕೋಟಿ 30 ಲಕ್ಷ ಜಿಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಸೈಬರ್ ಕ್ರಿಮಿನಲ್‌ಗಳು ಕಳವು ಮಾಡಿದ್ದಾರೆ. ಜಿಮೇಲ್ ಬಳಕೆದಾರರ ವೈಯಕ್ತಿಕ ಮಾಹಿತಿಗಳು, ಫೋಟೋಗಳು, ವೀಡಿಯೊಗಳು, ಬ್ಯಾಂಕ್ ವಿವರಗಳು ಮತ್ತು ಇತರ ಖಾಸಗಿ ಡೇಟಾ ಅಪಾಯದಲ್ಲಿದೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜಿಮೇಲ್ ಬಳಕೆದಾರರು ಖಾತೆಯ ಪಾಸ್‌ವರ್ಡ್‌ಗಳನ್ನು ತಕ್ಷಣ ಬದಲಾಯಿಸುವಂತೆಯೂ ತಜ್ಞರು ಸೂಚಿಸಿದ್ದಾರೆ. ಬಳಕೆದಾರರ ಖಾತೆಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಖಾತೆಯನ್ನು ಹ್ಯಾಕ್ ಮಾಡಿದರೆ ಕಳ್ಳರು ಬಳಕೆದಾರರ ಇಮೇಲ್,
ಗಾಜಾ ಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿಗೆ 30 ಮಂದಿ ಬಲಿ
ಗಾಜಾ ಮತ್ತು ಇಸ್ರೇಲ್ ಪರಸ್ಪರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಇಸ್ರೇಲ್ ಗಾಜಾ ಪಟ್ಟಿ ಪ್ರದೇಶದ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿದೆ. ಕದನ ವಿರಾಮದ ನಡುವೆಯೂ ಇಸ್ರೇಲ್ ಗಾಜಾದಲ್ಲಿ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆಂದು ಗಾಜಾದ ನಾಗರಿಕ
ಅಲ್ ಖೈದಾ ಸಂಪರ್ಕ ಆರೋಪ: ಪುಣೆಯಲ್ಲಿ ಟೆಕ್ಕಿ ಅರೆಸ್ಟ್
ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪುಣೆಯ ಕೊಂಧ್ವಾದಲ್ಲಿ ಟೆಕ್ಕಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಜುಬೈರ್ ಹಂಗರ್ಗೇಕರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದರು.
ಆಂಧ್ರದತ್ತ ಚಂಡಮಾರುತ: ಕರಾವಳಿ ನಿವಾಸಿಗಳ ಸ್ಥಳಾಂತರ, ರೆಡ್ ಅಲರ್ಟ್
ಆಂಧ್ರಪ್ರದೇಶದ ಕರಾವಳಿಯತ್ತ ಮೊಂಥಾ ಚಂಡಮಾರುತವು ವೇಗವಾಗಿ ಸಾಗುತ್ತಿದ್ದು, ಸಂಜೆ ಅಥವಾ ರಾತ್ರಿ ಕಾಕಿನಾಡ ಬಳಿಯ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಭೂಮಿಯನ್ನು ಸ್ಪರ್ಶಿಸುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಜಾರಿ ಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರಾವಳಿ ಪ್ರದೇಶಗಳ
ಟೀಮ್ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ಐಸಿಯುನಲ್ಲಿ
ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವಾಗ ಶ್ರೇಯಸ್ ಅಯ್ಯರ್ ಅವರ
ಕೆಆರ್‌ಎಸ್‌ನಲ್ಲಿ ರಿವರ್ಸ್ ತೆಗೆಯುತ್ತಿದ್ದ ಬಸ್‌ಗೆ ಊಟ ಮಾಡುತ್ತಿದ್ದ ಮಹಿಳೆ ಬಲಿ
ಮಂಡ್ಯದ ಕೆಆರ್‌ಎಸ್ ನಲ್ಲಿ ಬಸ್ ರಿವರ್ಸ್ ತೆಗೆಯುವಾಗ ನಡೆದ ಅವಘಡದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್‌ಎಸ್‌ಗೆ ಪ್ರವಾಸ ಬಂದಿದ್ದ ಕೇರಳದ ಮಹಿಳೆ ಕೌಸಲ್ಯಾ ಪಾರ್ಕಿಂಗ್ ಬಳಿ ಊಟ ಮಾಡುತ್ತ ಕುಳಿತಿದ್ದಾಗ ಈ ದುರಂತ ಸಂಭವಿಸಿದ್ದು, ಮತ್ತೊಬ್ಬರು ಕೇರಳದ ಮಹಿಳೆ ಗಾಯಗೊಂಡಿದ್ದಾರೆ. ಕೆಆರ್‌ಎಸ್
ಮೊಂಥಾ ಚಂಡಮಾರುತ: ಆಂಧ್ರ, ಒಡಿಶಾ, ತಮಿಳುನಾಡಿನಲ್ಲಿ ರೆಡ್ ಅಲರ್ಟ್
ಆಂಧ್ರದ ಕರಾವಳಿಗೆ ನಾಳೆ (ಅಕ್ಟೋಬರ್ 28ರಂದು) ಮೊಂಥಾ ಚಂಡಮಾರುತ ಅಪ್ಪಳಿಸಲಿದ್ದು, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭೂಕುಸಿತ ಸಂಭವಿಸುವ ಅಪಾಯ ಸಾಧ್ಯತೆಗಳಿರುವ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಉಂಟಾಗಿದೆ. ಚಂಡಮಾರುತದ
ಬಲೂಚಿಸ್ತಾನ ಪ್ರತ್ಯೇಕ ದೇಶ: ಸಲ್ಮಾನ್ ಖಾನ್‌ಗೆ ಭಯೋತ್ಪಾದಕ ಪಟ್ಟವಿತ್ತ ಪಾಕ್
ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕ ದೇಶ ಎಂದು ಬಣ್ಣಿಸಿದ್ದರಿಂದ ಪಾಕಿಸ್ತಾನದ ಶಹಬಾಜ್ ಸರ್ಕಾರ ನಟ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಪಾಕ್ ಗೃಹ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಸಲ್ಮಾನ್ ಖಾನ್ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ನಡೆದ ಜಾಯ್
ವೈದ್ಯೆ ಆತ್ಮಹತ್ಯೆ ಪ್ರಕರಣ: ಅತ್ಯಾಚಾರಿ ಆರೋಪಿ ಪಿಎಸ್‌ಐ ಪೊಲೀಸ್‌ಗೆ ಶರಣು
ಮಹಾರಾಷ್ಟ್ರದ ಸತಾರದಲ್ಲಿ ನಡೆದಿದ್ದ ವೈದ್ಯೆಯ ಆತ್ಮಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದ್ನೆ ಫಾಲ್ಟನ್ ಗ್ರಾಮೀಣ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮತ್ತೊಬ್ಬ ಆರೋಪಿಯಾದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್‌ನನ್ನು ಪುಣೆಯಲ್ಲಿ ಬಂಧಿಸಲಾಗಿತ್ತು. ವೈದ್ಯೆಗೆ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬದಲಾಯಿಸುವಂತೆ ರಾಜಕಾರಣಿಗಳು
ಆಂಧ್ರ ದುರಂತಕ್ಕೆ ಕಾರಣವಾಯಿತಾ ಬಸ್ ನಲ್ಲಿದ್ದ 234 ಸ್ಮಾರ್ಟ್ ಫೋನ್?
ಬೆಂಕಿಗೆ ಆಹುತಿಯಾದ ಬೆಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶದ ಖಾಸಗಿ ಬಸ್ ನಲ್ಲಿ 46 ಲಕ್ಷ ರೂ. ಮೌಲ್ಯದ 234 ಸ್ಮಾರ್ಟ್ ಫೋನ್ ಗಳು ಇದ್ದವು ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಿಗ್ಗೆ ಕರ್ನೂಲ್ ನಿಂದ 20 ಕಿ.ಮೀ. ದೂರದಲ್ಲಿ ಬೈಕ್




