ದೇಶ-ವಿದೇಶ
ಖಮೇನಿ ಮಾತ್ರವಲ್ಲ, ಇರಾನ್‌ನ 48 ನಾಯಕರನ್ನು ಹೊಡೆದುರುಳಿಸಿದ್ದೇವೆ ಎಂದ ಟ್ರಂಪ್
ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಭೀಕರ ದಾಳಿಗಳನ್ನು ನಡೆಸಿದ್ದು, ಅಲ್ಲಿನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಮಾತ್ರವಲ್ಲದೆ ಅಲ್ಲಿನ 48 ನಾಯಕರನ್ನು ಹೊಡೆದುರುಳಿಸಿರುವುದಾಗಿ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಈ ದಾಳಿಯಲ್ಲಿ ನಾವು ಪಡೆಯುತ್ತಿರುವ ಯಶಸ್ಸು ನಂಬಲು ಆಗದಷ್ಟು, ಒಂದೇ ಹೊಡೆತದಲ್ಲಿ 48 ಇರಾನ್‌ನ ನಾಯಕರು ಅಂತ್ಯ ಕಂಡಿದ್ದಾರೆ. ಕಾರ್ಯಾಚರಣೆ ಮತ್ತಷ್ಟು ವೇಗವಾಗಿ ಸಾಗುತ್ತಿದೆ. ಇನ್ನೆಷ್ಟು ಗುರಿಗಳುತಲುಪಬೇಕಿವೆ ಎಂಬುದು ಕೂಡ ಸ್ಪಷ್ಟವಾಗಿ ಗೊತ್ತಿದೆ ಎಂದು ವಿವರಿಸಿದ್ದಾರೆ.
ಇರಾನ್-ಇಸ್ರೇಲ್ ಸಂಘರ್ಷ ತೀವ್ರ: ಇರಾನ್ ಶಾಲೆ ಮೇಲಿನ ದಾಳಿಗೆ ಐವರು ಬಲಿ
ಇರಾನ್ ಹಾಗೂ ಇಸ್ರೇಲ್ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದರಿಂದ ಇರಾನ್‌ನ ಪ್ರಾಥಮಿಕ ಶಾಲೆಯೊಂದು ಧ್ವಂಸಗೊಂಡು ಐವರು ಮೃತಪಟ್ಟಿದ್ದಾರೆ. ಅಮೆರಿಕ ಆರಂಭಿಸಿದ ಯುದ್ಧದಲ್ಲಿ ಇಸ್ರೇಲ್ ಕೂಡ ಕೈ ಜೋಡಿಸಿದ್ದು, ಪರಿಸ್ಥಿತಿ ವಿಷಮಿಸುತ್ತಿದೆ. ಇರಾನ್
ಇರಾನ್ ಮೇಲೆ ದಾಳಿ ಬಳಿಕ ಪ್ರತಿದಾಳಿ ಸಾಧ್ಯತೆ: ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇಸ್ರೇಲ್‌ನಾದ್ಯಂತ ‘ವಿಶೇಷ ಮತ್ತು ಶಾಶ್ವತ ತುರ್ತು ಪರಿಸ್ಥಿತಿ’ಯನ್ನು ಘೋಷಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಇಸ್ರೇಲ್ ದಾಳಿಯನಂತರ ಇರಾನ್ ಕಡೆಯಿಂದ ಡ್ರೋನ್‌ಗಳು ಹಾಗೂ ಖಂಡಾಂತರ ಕ್ಷಿಪಣಿಗಳ ಮೂಲಕ ಪ್ರತಿದಾಳಿ ನಡೆಯುವ
ಅಬಕಾರಿ ನೀತಿ ಹಗರಣ ಕೇಸ್: ಕೇಜ್ರಿವಾಲ್ ಸೇರಿ 23 ಆರೋಪಿಗಳ ಖುಲಾಸೆ, ಸಿಬಿಐಗೆ ಕೋರ್ಟ್ ತರಾಟೆ
ಅಬಕಾರಿ ನೀತಿ ಹಗರಣ ಸಂಬಂಧ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ತೆಲಂಗಾಣದ ಎಂಎಲ್‌ಸಿ ಕೆ. ಕವಿತಾ ಸೇರಿದಂತೆ 23 ಆರೋಪಿ ಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ಈ ನಾಯಕರ ವಿರುದ್ಧ ದೋಷಾರೋಪ ಹೊರಿಸಿದ್ದಕ್ಕಾಗಿ
‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಆಳ ಒಳಸಂಚು: ಕ್ಷಮೆಯಿಲ್ಲ, ತಪ್ಪಿತಸ್ಥರ ತಲೆದಂಡವೆಂದು ಸರ್ಕಾರಕ್ಕೆ ಸುಪ್ರೀಂ ತಾಕೀತು
ಎನ್‌ಸಿಇಆರ್‌ಟಿ ಎಂಟನೇ ತರಗತಿಗೆ ಅಳವಡಿಸಿರುವ ʼನ್ಯಾಯಾಂಗದಲ್ಲಿ ಭ್ರಷ್ಟಾಚಾರʼ ಪಾಠವನ್ನು ಒಳಗೊಂಡ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮೇಲೆ ಸುಪ್ರೀಂ ಕೋರ್ಟ್ ಸಂಪೂರ್ಣ ನಿಷೇಧ ಹೇರಿದೆ. ಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಭಾಗವನ್ನು ಸೇರಿಸಿರುವುದು ಆಳವಾದ ಒಳಸಂಚು ಎಂದು ತೀವ್ರವಾಗಿ ಖಂಡಿಸಿದೆ. ಮುಖ್ಯ ನ್ಯಾಯಮೂರ್ತಿ
ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ: ಸುಪ್ರೀಂ
ಎನ್‌ಸಿಇಆರ್‌ಟಿಯ ಎಂಟನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬಹುದು
ಹೆಣ್ಣುಮಕ್ಕಳೆಂದು ಸದಾ ನಿಂದಿಸುತ್ತಿದ್ದ ತಂದೆಯ ಕೊಲೆಗೈದ ಪುತ್ರಿಯರು
ಕುಟುಂಬದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಡುತ್ತಿದ್ದ ಜೊತೆಗೆ ಹೆಣ್ಣು ಮಕ್ಕಳನ್ನು ನಿರಂತರ ಟೀಕಿಸುತ್ತಿದ್ದ ತಂದೆಯನ್ನು ಸೋದರಿಯರಿಬ್ಬರು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ನಿರಂತರ ತಾರತಮ್ಯ ಮತ್ತು ಅವಹೇಳನದಿಂದ
ಒಬ್ಬರ ಪ್ರಾಣಕ್ಕಾಗಿ ಏಳು ಲಕ್ಷ ನೀಡಿ ಪಡೆದ ಏರ್ ಆಂಬ್ಯುಲೆನ್ಸ್ ಅಪಘಾತದಲ್ಲಿ ಏಳು ಜನ ಸಾವು
ಜಾರ್ಖಂಡ್ನ ರಾಂಚಿಯಲ್ಲಿ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಒಂದು ಜೀವ ಉಳಿಸುವುದಕ್ಕಾಗಿ ಕುಟುಂಬ ಆಂಬ್ಯುಲೆನ್ಸ್ಗೆ ಏಳು ಲಕ್ಷ ರೂ. ಪಾವತಿ ಮಾಡಿತ್ತು. ದೆಹಲಿಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಲು ಲಕ್ಷಗಟ್ಟಲೆ ಸಾಲನ್ನೂ ಕೂಡ ಮಾಡಿತ್ತು ಎನ್ನಲಾಗಿದೆ. ಆದರೆ ಅದೇ ಆಂಬ್ಯುಲೆನ್ಸ್
ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯ: ಐದು ಒಟಿಟಿಗಳಿಗೆ ಕೇಂದ್ರ ನಿರ್ಬಂಧ
ಮಾಹಿತಿ ತಂತ್ರಜ್ಞಾನ ಕಾಯಿದೆ 2021 ಮತ್ತು ಐಟಿ ಕಾಯಿದೆಯ ಸೆಕ್ಷನ್ 69A ಅಡಿ ಐದು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯ ಪ್ರಸಾರ ಮಾಡುವ ಮೂಲಕ ಸಾಮಾಜಿಕ ಮಾನ ದಂಡಗಳನ್ನು ಪಾಲಿಸದ ಕಾರಣಕ್ಕೆ ನಿರ್ಬಂಧ ವಿಧಿಸಿದೆ.
ಗೆಳೆಯನ ಎದುರೇ ಮಹಿಳೆ ಮೇಲೆ ಏಳು ಮಂದಿಯಿಂದ ಅತ್ಯಾಚಾರ
ಅಸ್ಸಾಂನ ಸಿಲ್ಚಾರ್ ಪಟ್ಟಣದಲ್ಲಿ ಗೆಳೆಯನೊಂದಿಗೆ ಡಿನ್ನರ್‌ಗೆ ಹೋಗಿದ್ದ 28 ವರ್ಷದ ಮಹಿಳೆಗೆ ಚಾಕು ತೋರಿಸಿ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಘಟನೆ ನಡೆದಿದ್ದು, ಸಂತ್ರಸ್ತೆ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಏಳು ಮಂದಿ




