ದೇಶ-ವಿದೇಶ
ರಿಯಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿಗೆ ಡ್ರೋನ್ ದಾಳಿ
ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಮಂಗಳವಾರ ಡ್ರೋನ್ ದಾಳಿ ನಡೆದಿದೆ. ಇರಾನ್ ಬೆಂಬಲಿತ ಪಡೆಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಈ ಬೆಳವಣಿಗೆಯಿಂದಾಗಿ ಯುದ್ಧ ಭೀತಿ ಮತ್ತಷ್ಟು ಹೆಚ್ಚಿದೆ. ರಿಯಾದ್‌ನ ಡಿಪ್ಲೊಮ್ಯಾಟಿಕ್ ಕ್ವಾರ್ಟರ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಎರಡು ಆತ್ಮಹತ್ಯಾ ಡ್ರೋನ್‌ಗಳು ದಾಳಿ ನಡೆಸಿವೆ. ದಾಳಿಯ ಸಮಯದಲ್ಲಿ ಕಚೇರಿ ಖಾಲಿಯಾಗಿದ್ದರಿಂದ ಸಾವು-ನೋವು ಸಂಭವಿಸಿಲ್ಲ, ರೆ ಕಟ್ಟಡಕ್ಕೆ ಹಾನಿಯಾಗಿದೆ. ಇತರ ನಾಲ್ಕು ಡ್ರೋನ್ ಗಳನ್ನು
ದುಬೈನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ 123 ಕನ್ನಡಿಗರು
ಅಮೆರಿಕಾ-ಇಸ್ರೇಲ್ ದಾಳಿ, ಇರಾನ್ ಪ್ರತಿದಾಳಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ವಿಮಾನಗಳ ರಾಟಾಟ ರದ್ದುಗೊಂಡು ದುಬೈ ಅಬುದಾಬಿಗಳಲ್ಲಿ ಸಿಲುಕಿದ್ದ 213 ಕನ್ನಡಿಗರು ಸೋಮವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಇರಾನ್ ಇಸ್ರೇಲ್ ಸಂಘರ್ಷದಿಂದ ನಡೆದ ಬೆಳವಣಿಗೆಗಳಿಂದ ಮೂರು ದಿನಗಳ ಆತಂಕದಲ್ಲಿಯೇ ಇವರೆಲ್ಲ
ಇರಾನ್-ಇಸ್ರೇಲ್ ಸಂಘರ್ಷ: ದೇಶದಲ್ಲಿ ಹಿಂಸಾಚಾರ ಸಾಧ್ಯತೆ, ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ
ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡು ಅಮೆರಿಕ ನಡೆಸಿದ ದಾಳಿಯಲ್ಲಿ ಖಮೇನಿ ಸಾವಿನ ಬಳಿಕ ಇರಾನ್ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ದಾಳಿ ನಡೆಸಿದೆ. ದಾಳಿ, ಪ್ರತಿದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಪರಿಣಾಮವಾಗಿ ಭಾರತದಲ್ಲಿ ಸಂಭಾವ್ಯ ಹಿಂಸಾಚಾರದ ಬಗ್ಗೆ ಎಲ್ಲಾ
ಇರಾನ್ ಮೇಲಿನ ದಾಳಿಯಿಂದ ಎಪ್ಸ್ಟೀನ್ ಕೇಸ್ ಫೈಲ್‌ಗಳು ನಾಶವಾಗದು: ಟ್ರಂಪ್ ವಿರುದ್ಧ ಮಾಸ್ಸಿ ಕಿಡಿ
ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿ ಧ್ವಂಸಗೊಳಿಸಿದ ಮಾತ್ರಕ್ಕೆ ಎಪ್ಸ್ಟೀನ್ ಪ್ರಕರಣದ ದಾಖಲೆಗಳು ನಾಶವಾಗುವುದಿಲ್ಲ, ಈ ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ರಿಪಬ್ಲಿಕನ್ ಪಕ್ಷದ ಶಾಸಕ ಥಾಮಸ್ ಮಾಸ್ಸಿ
ಇರಾನ್-ಇಸ್ರೇಲ್ ಸಂಘರ್ಷ: ರಾಜ್ಯದವರ ರಕ್ಷಣೆಗೆ ಸರ್ಕಾರ ಕ್ರಮವೆಂದ ಸಚಿವ ಕೃಷ್ಣ ಭೈರೇಗೌಡ
ಇರಾನ್- ಇಸ್ರೇಲ್ ಸಂಘರ್ಷದಿಂದ ನಲುಗಿರುವ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರು ಆತಂಕಕ್ಕೆ ಒಳಗಾಗಬೇಕಿಲ್ಲ. ರಾಜ್ಯ ಸರ್ಕಾರ ಕೇಂದ್ರ
ಇರಾನ್-ಇಸ್ರೇಲ್ ಸಂಘರ್ಷ: ಅಮೆರಿಕ ಬೆಂಬಲಕ್ಕೆ ಬ್ರಿಟನ್, ಫ್ರಾನ್ಸ್, ಜರ್ಮನಿ
ಇರಾನ್-ಇಸ್ರೇಲ್ ಸಂಘರ್ಷ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದೆ. ಇರಾನ್‌ನ ಸೇನಾ ಪ್ರತಿದಾಳಿಯನ್ನು ಎದುರಿಸಲು ಅಮೆರಿಕ ಜೊತೆ ಕೈಜೋಡಿಸುವುದಾಗಿ ಬ್ರಿಟನ್ , ಫ್ರಾನ್ಸ್ ಮತ್ತು ಜರ್ಮನಿ ಮುಂದಾಗಿವೆ. ಈ ದೇಶಗಳ ಉನ್ನತ ನಾಯಕರಾದ ಕೀರ್ ಸ್ಟಾರ್ಮರ್, ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಡ್ರಿಕ್
ವೀಡಿಯೊ ತೋರಿಸಿ ಬ್ಲ್ಯಾಕ್‌ಮೇಲ್: ಮಾಜಿ ಪ್ರಿಯಕರನ ಕೊಂದ ಮಹಿಳೆ
ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಖಾಸಗಿ ವೀಡಿಯೊ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆ ಕೊಂದು ಮುಖಕ್ಕೆ ಆ್ಯಸಿಡ್ ಹಾಕಿರುವ ಘಟನೆ ನಡೆದಿದೆ. ವಿವಾಹಿತ ಮಹಿಳೆ ಸಂಬಂಧ ಕೊನೆಗೊಳಿಸಲು ಪ್ರಯತ್ನಿಸಿದಾಗ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದ, ಆಕೆ ತನ್ನ ಸೋದರ ಮತ್ತು ಅತ್ತಿಗೆಯ
ಇರಾನ್ ಪ್ರತಿದಾಳಿಯಲ್ಲಿ ಅಮೆರಿಕದ 560 ಸೈನಿಕರ ಸಾವು?
ಅಮೆರಿಕದ ವಿರುದ್ಧ ನಡೆಸಿದ ಪ್ರತಿದಾಳಿಯ ಭಾಗವಾಗಿ ಆ ದೇಶದ ಮಿಲಿಟರಿ ನೆಲೆಗಳ ಮೇಲೆ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದು, ಅಮೆರಿಕದ 560 ಸೈನಿಕರು ಹತರಾಗಿರುವುದಾಗಿ ಎಂದು ಇರಾನ್ ಹೇಳಿದೆ. ಕುವೈತ್‌ನಲ್ಲಿರುವ ಅಮೆರಿಕ ನೆಲೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ ನೆಲೆಯೂ ಡ್ರೋನ್
ಶ್ರೀಶೈಲದಲ್ಲಿ ಮಾರ್ಚ್ 16- 20 ಯುಗಾದಿ ಮಹೋತ್ಸವ
ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಾರ್ಚ್ 16ರಿಂದ 20ರವರೆಗೆ ಯುಗಾದಿ ಮಹೋತ್ಸವ ಆಚರಣೆ ನಡೆಯಲಿದ್ದು, ಉತ್ಸವ ಪ್ರಾರಂಭವಾಗುವ ಮೊದಲು ಮಾರ್ಚ್ 06ರಿಂದ 15ರವರೆಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಧರ್ಮದರ್ಶಿ ಮಂಡಳಿಯ ಅಧ್ಯಕ್ಷ
ಇಸ್ರೇಲ್ ಇರಾನ್ ಸಂಘರ್ಷ: ರದ್ದುಗೊಂಡ ವಿಮಾನಗಳು, ದುಬೈನಲ್ಲಿ ಸಿಕ್ಕಾಕಿಕೊಂಡ ಕನ್ನಡಿಗರು
ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡು ಅಮೆರಿಕದ ದಾಳಿಗೆ ಪ್ರತಿದಾಳಿಯಾಗಿ ಇರಾನ್ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ಕೊಲ್ಲಿ ರಾಷ್ಟ್ರಗಳಲ್ಲೂ ಆತಂಕದ ಸ್ಥಿತಿ ನಿರ್ಮಾಣಗೊಂಡಿದ್ದು, ಲಕ್ಷಾಂತರ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಿಂದ ಬಹಳಷ್ಟು ಪ್ರವಾಸಿಗರು ದುಬೈನಲ್ಲಿದ್ದು, ಅಲ್ಲಿಂದ




