ದೇಶ-ವಿದೇಶ
ಇರಾನ್-ಇಸ್ರೇಲ್ ಸಂಘರ್ಷ: ದುಬೈ ವಿಮಾನ ನಿಲ್ದಾಣ ಬಳಿ ಇರಾನ್ ಡ್ರೋನ್ ದಾಳಿ
ಇರಾನ್-ಇಸ್ರೇಲ್ ಸಂಘರ್ಷದ ಭಾಗವಾಗಿ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ದಾಳಿ ಮುಂದುವರಿಸಿದ್ದು, ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್‌ಗಳನ್ನು ಸ್ಫೋಟಿಸಿದೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ವಿಮಾನ ಸಂಚಾರ ಎಂದಿನಂತೆ ಮುಂದುವರಿದಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಎರಡು ಡ್ರೋನ್‌ಗಳು ಬಿದ್ದಿದ್ದು, ಘಾನಾದ ಇಬ್ಬರು ಮತ್ತು ಒಬ್ಬ ಬಾಂಗ್ಲಾದೇಶಿ ಪ್ರಜೆಗೆ ಗಂಭೀರ ಗಾಯಗಳಾಗಿವೆ, ಭಾರತೀಯ ಪ್ರಜೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್-ಇಸ್ರೇಲ್ ಸಂಘರ್ಷ: ಹರ್ಮುಜ್ ಜಲಸಂಧಿಯಲ್ಲಿ ನೇವಲ್ ಮೈನ್ಸ್ ಇಟ್ಟು ಇರಾನ್ ಪ್ರತೀಕಾರ
ಇರಾನ್-ಇಸ್ರೇಲ್ ಯುದ್ಧ ಇನ್ನಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ, ಇರಾನ್ ಈಗ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಸ್ಫೋಟಕವನ್ನು ಇರಿಸಿದ ವಿಚಾರ ತಿಳಿದು ಬಂದಿದ್ದು, ಇರಾನ್ ಹರ್ಮುಜ್ ಜಲಸಂಧಿಯಲ್ಲಿ ಯಾವುದೇ ನೇವಲ್ ಮೈನ್ಸ್ ಇದ್ದರೆ ತೆಗೆದು ಹಾಕಬೇಕು. ತೆಗೆಯದೆ ಇದ್ದರೆ ಹಿಂದೆಂದು
13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ ಸಮ್ಮತಿಸಿದ ಸುಪ್ರೀಂ
13 ವರ್ಷಗಳಿಂದ ಕೋಮಾದಲ್ಲಿದ್ದ 31 ವರ್ಷದ ವ್ಯಕ್ತಿಗೆ ಸುಪ್ರೀಂಕೋರ್ಟ್ ದಯಾಮರಣ ನೀಡಲು ಸಮ್ಮತಿಸುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಎರಡು ವೈದ್ಯಕೀಯ ಮಂಡಳಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ತೀರ್ಪು ಪ್ರಕಟಿಸಿದೆ. ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ
ಲಿವರ್ ದಾನ ಮಾಡಿ ಅಮ್ಮನ ಉಳಿಸಿಕೊಂಡ ಮಗ ಚೇತರಿಸಿಕೊಳ್ಳದೆ ಸಾವು
ತಾಯಿಯ ಜೀವ ಉಳಿಸುವುದಕ್ಕೆಂದು ಮಗ ಆಕೆಗೆ ಲಿವರ್ ದಾನ ಮಾಡಿದ ಬಳಿಕ ಮೃತಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದ್ದು, ಭಾರೀ ವೈರಲ್ ಆಗಿದೆ. ಅಮ್ಮನಿಗಾಗಿ ಲಿವರ್ ದಾನಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕ ಚೇತರಿಸಿಕೊಳ್ಳದೆ ಪ್ರಾಣ ಹೋಗಿದೆ. ಮಗನ ಸಾವಿನ ಆಘಾತವನ್ನು ಸಹಿಸಲಾಗದೆ
ಇರಾನ್-ಇಸ್ರೇಲ್ ಸಂಘರ್ಷ: ಎಲ್‌ಪಿಜಿ ವ್ಯತ್ಯಯ, ಬನಶಂಕರಿ ದೇಗುಲದಲ್ಲಿ ಪ್ರಸಾದ ವಿತರಣೆ ಸ್ಥಗಿತ?
ಇರಾನ್-ಇಸ್ರೇಲ್ ಯುದ್ಧ ತೀವ್ರಗತಿಯಲ್ಲಿದ್ದು, ಜಗತ್ತಿನ ಹಲವು ದೇಶಗಳಲ್ಲಿ ನಾನಾ ರೀತಿಯ ಸಂಕಷ್ಟಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯಗೊಂಡು ಹೋಟೆಲ್ ಉದ್ಯಮವನ್ನು ಕಂಗೆಡಿಸಿದೆ. ಬೆಂಗಳೂರು ಸೇರಿದಂತೆ ನಗರಗಳಲ್ಲಿ ಹೋಟೆಲ್, ಪಿಜಿ, ಹಾಸ್ಟೆಲ್ ಮೆನುಗಳೇ ಬದಲಾಗಿವೆ. ಈ ನಡುವೆ ದೇವಸ್ಥಾನಗಳಲ್ಲಿ
ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳ ಖಾತ್ರಿಗೆ ಏಕರೂಪ ನಾಗರಿಕ ಸಂಹಿತೆಯೇ ದಾರಿ: ಸುಪ್ರೀಂ
ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದರೆ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನು(ಶರಿಯತ್)ಅಡಿ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಆರೋಪದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ
ಇರಾನ್ ಹಡಗುಗಳನ್ನು ಮುಳುಗಿಸುವುದೇ ಮಜಾವೆಂದ ಅಮೆರಿಕ ಸೇನೆ
ಇರಾನ್ ಹಡಗುಗಳನ್ನು ಮುಳುಗಿಸುವುದೇ ನಮಗೆ ಮಜಾ ಎಂದು ಅಮೆರಿಕ ಸೇನೆ ಹೇಳಿಕೊಂಡಿದ್ದಾಗಿ ಡೋರಲ್‌ನಲ್ಲಿ ನಡೆದ ನ್ಯಾಷನಲ್ ರಿಪಬ್ಲಿಕನ್ ಸಭೆಯಲ್ಲಿ ಅಮೆರಿಕ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಇರಾನ್‌ನ ನೌಕಾಪಡೆಗೆ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ. ಅಮೆರಿಕ
ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ ಪಠ್ಯ ಪುಸ್ತಕ ವಾಪಸ್ ಪಡೆದ ಎನ್ಸಿಆರ್ಟಿ
8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯ ಉಲ್ಲೇಖಕ್ಕೆ ಸಂಬಂಧಿಸಿದಂತೆ ಎನ್ಸಿಆರ್ಟಿ ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ, ಇಡೀ ಪುಸ್ತಕವನ್ನೇ ವಾಪಸ್ ಪಡೆದಿದೆ. ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ಕೋಲಾಹಲಕ್ಕೆ ಕಾರಣವಾಗಿತ್ತು.
ಇರಾನ್ ಇಸ್ರೇಲ್ ಸಂಘರ್ಷದಿಂದ ಎಲ್‌ಪಿಜಿ ಕೊರತೆ: ಹೋಟೆಲ್ ಬಂದ್ ಆತಂಕ
ಇರಾನ್-ಇಸ್ರೇಲ್ ಯುದ್ಧ ಜಾಗತಿಕವಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಇರಾನ್‌ಗೆ ಬೇರೆ ದೇಶಗಳಿಂದ ರಫ್ತು ಆಗುತ್ತಿದ್ದ ವಸ್ತುಗಳು ರಫ್ತು ಆಗುತ್ತಿಲ್ಲ, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಪ್ರಮುಖವಾಗಿ ಹಲವು ದೇಶಗಳಲ್ಲಿ ತೈಲ ಸಮಸ್ಯೆ ಎದುರಾಗಿದ್ದು, ಬಿಕ್ಕಟ್ಟು ಸೃಷ್ಟಿಯಾಗಿದೆ. ಎಲ್‌ಪಿಜಿ ಪೂರೈಕೆ ವ್ಯತ್ಯಯಗೊಂಡು ಮುಂಬೈನಲ್ಲಿ 20%
ಯುದ್ಧ ನಿಲ್ಲಿಸುವುದು ಅಮೆರಿಕವಲ್ಲ, ಇರಾನ್: ಟ್ರಂಪ್‌ಗೆ ತಿರುಗೇಟು
ಯುದ್ಧ ನಿಲ್ಲಿಸುವುದು ಅಮೆರಿಕದ ನಿರ್ಧಾರವಲ್ಲ, ಅದು ನಮ್ಮ ನಿರ್ಧಾರ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ. ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್ ಹೇಳಿಕೆಗೆ ಐಆರ್‌ಜಿಸಿ ಪಡೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.




