ದೇಶ-ವಿದೇಶ
ಕೌಶಲ್ಯಪೂರ್ಣ ತಂತ್ರಜ್ಞರು, ದಾದಿಯರಿಗಾಗಿ ಕರ್ನಾಟಕ ಕಾರ್ಯಪಡೆಯತ್ತ ಜಪಾನ್ ಕಣ್ಣು
ನಾನಾ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ವೃತ್ತಿಪರರರು, ನರ್ಸ್ ಗಳ ಅಗತ್ಯವಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್ ಸ್ಟಮೊ ಸ್ಪಷ್ಟಪಡಿಸಿದ್ದು, ಕರ್ನಾಟಕದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಜಪಾನ್‌ನಲ್ಲಿ ಕಾರ್ಯಪಡೆಯ ಕೊರತೆ ಇದೆ. ವಿಶೇಷವಾಗಿ ಆರೋಗ್ಯ ರಕ್ಷಣೆ, ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೌಶಲ್ಯಗಾರರ ಅಗತ್ಯವಿದೆ. ರಾಜ್ಯದಿಂದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ. ವೈಟ್-ಕಾಲರ್ ತಜ್ಞರ ಜೊತೆಗೆ, ಕೌಶಲ್ಯಪೂರ್ಣ ತಂತ್ರಜ್ಞರ ಅಗತ್ಯವಿದೆ. ದಾದಿಯರ ಅಗತ್ಯ ಹೆಚ್ಚುತ್ತಿದೆ.
ಸ್ಲೀಪರ್ ಬಸ್‌ನಲ್ಲಿ ಹೊತ್ತಿಕೊಂಡ ಬೆಂಕಿ: ಮಲಗಿದ್ದಲ್ಲೇ ಐವರು ಸಜೀವ ದಹನ
ಲಕ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದ ಕಿಸಾನ್ ಪಥದಲ್ಲಿ ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಐವರು ಸಜೀವ ದಹನಗೊಂಡಿದ್ದಾರೆ. ಬಸ್‌ನಲ್ಲಿ 60 ಪ್ರಯಾಣಿಕರಿದ್ದರು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಏಕಾಏಕಿ
ಮಹಿಳಾ ಸೇನಾಧಿಕಾರಿ ಸೋಫಿಯಾ ಖುರೇಷಿಗೆ ನಿಂದನೆ: ಬಿಜೆಪಿ ಸಚಿವನ ವಿರುದ್ಧ ಎಫ್ ಐಆರ್ ದಾಖಲು!
ಭೂಪಲ್: ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ. ಮಧ್ಯಪ್ರದೇಶದ ಹೈಕೋರ್ಟ್ ಸೂಚನೆ ಮೇರೆಗೆ ಸಚಿವ ಹಾಗೂ ಬಿಜೆಪಿ ಮುಖಂಡರ ವಿಜಯ್ ಶಾ ವಿರುದ್ಧ
ಆಪರೇಷನ್ ಸಿಂಧೂರ್‌ನಲ್ಲಿ ಮೃತ ಉಗ್ರರಿಗೆ ಪಾಕ್ ಸರ್ಕಾರದಿಂದ ತಲಾ ಕೋಟಿ ರೂ. ಪರಿಹಾರ
ಭಾರತದ ಆಪರೇಷನ್ ಸಿಂಧೂರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸುವ ಮೂಲಕ ಆ ರಾಷ್ಟ್ರವು ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ವ್ಯಕ್ತಪಡಿಸಿದಂತಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ಕಾರ್ಯಾಚರಣೆಯಲ್ಲಿ, ಉಗ್ರ ಮಸೂದ್
ಮೇ 27ಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ
ನವದೆಹಲಿ; ಮುಂಗಾರು ಮಾರುತ ವಾಡಿಕೆಗಿಂತ ಮುಂಚಿತವಾಗಿಯೇ ಮೇ 27ರಂದು ಕೇರಳ ಪ್ರವೇಶಿಸಲಿವೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ಮಂಗಳವಾರ ಮುಂಗಾರು ಮಾರುತಗಳು ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು
ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು: ಪ್ರಿಯಾಂಕ್ ಖರ್ಗೆ
ಏಪ್ರಿಲ್ 22ರಂದು ಪೆಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಪ್ರಧಾನಿ ಮೋದಿ ಬಿಹಾರ ಚುನಾವಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಜಮ್ಮು ಕಾಶ್ಮೀರ, ಆದಂಪುರ ಸೇರಿದಂತೆ ಎಲ್ಲೆಡೆ ಬ್ಲಾಕ್‌ಔಟ್ ಆಗಿದ್ದಾಗ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು ಎಂದು ಐಟಿ-ಬಿಟಿ ಸಚಿವ
ಭಾರತಕ್ಕೆ ಬಿಎಸ್ ಎಫ್ ಯೋಧ ಹಸ್ತಾಂತರಿಸಿದ ಪಾಕಿಸ್ತಾನ!
ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿದ್ದ ಭಾರತದ ಬಿಎಸ್ ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ. ಆರ್ಟರಿ ಗಡಿಯಲ್ಲಿ ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು
ಬೆಂಗಳೂರು ಸೇರಿದಂತೆ ದೇಶದ 13 ನಗರಗಳಲ್ಲಿ ಇ-ಪಾಸ್‌ಪೋರ್ಟ್
ದೇಶಾದ್ಯಂತ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ನೀಡಲು ಆರಂಭಿಸಲಾಗಿದೆ. ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿಗೊಂಡಿದ್ದ ಈ ಯೋಜನೆ ಈಗ ದೇಶದ 13 ಪ್ರಮುಖ ನಗರಗಳಲ್ಲಿ ಲಭ್ಯವಿದೆ. ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮಡಿ ಜಾರಿಗೊಳಿಸಲಾದ ಈ ವ್ಯವಸ್ಥೆಯು ಭದ್ರತೆಯನ್ನು ದ್ವಿಗುಣಗೊಳಿಸುವು ದರ ಜೊತೆಗೆ ಅಂತರರಾಷ್ಟ್ರೀಯ ಪ್ರಯಾಣವನ್ನು
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಬಿ.ಆರ್ ಗವಾಯಿ ಅಧಿಕಾರ ಸ್ವೀಕಾರ
ಸುಪ್ರೀಂಕೋರ್ಟ್‌ನ 52ನೇ ಮುಖ್ಯ ನ್ಯಾಯಾಧೀಶರಾಗಿ ಬಿ.ಆರ್ ಗವಾಯಿ ಅಧಿಕಾರ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್‌ನ ಹೊಸ ಮುಖ್ಯ ನ್ಯಾಯಾಧೀಶ ರಾಗಿರುವ ಜಸ್ಟೀಸ್ ಭೂಷಣ್ ರಾಮಕೃಷ್ಣ ಗವಾಯಿ ಅವರು ಭಾರತದ ಮೊದಲ ಬೌದ್ಧ, ಎರಡನೆಯ ದಲಿತ ಸಿಜೆಐ ಎನಿಸಿದ್ದಾರೆ. ಬಿ.ಆರ್ ಗವಾಯಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ
ಮದರಸಾಗಳ ವಿರುದ್ಧ ದಂಗೆ ಎದ್ದರಾ ಪಾಕ್ ನಾಗರಿಕರು?
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳು ಹಾಗೂ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಪ್ರತ್ಯುತ್ತರ ನೀಡಿದೆ. ಭಾರತದ ಈ ದಾಳಿಗೆ ಬೆಚ್ಚಿರುವ ನಾಗರಿಕರು ಅಲ್ಲಿನ




