Thursday, January 30, 2025
Menu

ಮಳೆ ಪ್ರವಾಹದಿಂದ ತತ್ತರಿಸುತ್ತಿದೆ ಮರುಭೂಮಿ ಸೌದಿ ಅರೇಬಿಯಾ

ಮರುಭೂಮಿ ಸೌದಿ ಅರೇಬಿಯಾದಲ್ಲಿ ಮಂಗಳವಾರದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ತತ್ತರಿಸಿ ಹೋಗಿದೆ. ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ, ಮೆಕ್ಕಾ ಮತ್ತು ಮದೀನಾದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿ ಪ್ರವಾಹದಿಂದ ಕಂಗೆಟ್ಟಿದೆ.

ಹಲವು ನಗರ ಪ್ರದೇಶಗಳು ಜಲಾವೃತಗೊಂಡು ಜನ ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆಗೆ ಜೆಡ್ಡಾ, ಮೆಕ್ಕಾ ಮತ್ತು ಮದೀನಾದಲ್ಲಿ ಪ್ರವಾಹ ಉಕ್ಕಿ ಹರಿದಿದ್ದು ಹಲವು ವಾಹನಗಳು ಮರಗಳು, ಮನೆ ಬಳಕೆ ವಸ್ತುಗಳು ರಸ್ತೆ ಮೇಲೆ ಹರಿದು ನೀರಿನಲ್ಲಿ ಹೋಗಿವೆ. ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರುಗಳು ಕೂಡ ಜಲಾವೃತವಾಗಿದ್ದು, ಬಿಲ್ಡಿಂಗ್​ಗಳ ಬೇಸ್​ಮೆಂಟ್​ಗಳಲ್ಲಿ ನೀರು ತುಂಬಿಕೊಂಡಿದೆ.

ಸೌದಿಯ ಪೂರ್ವ ಪ್ರಾಂತ್ಯ ಮತ್ತು ರಿಯಾದ್‌ನಲ್ಲಿ ಆನ್‌ಲೈನ್‌ ಮೂಲಕ ಶಾಲೆಗಳನ್ನು ನಡೆಸಲಾಗುತ್ತಿದೆ. ಕೆಲವು ವಿಮಾನಯಾನಗಳೂ ರದ್ದಾಗಿವೆ. ಸಿರಾಜ್ ಅಲ್-ಖುರಾಶಿಯಿಂದ ಮೆಕ್ಕಾದ ಪಶ್ಚಿಮದಲ್ಲಿರುವ ಅಲ್-ಶಮ್ಸಿ ಸೇತುವೆ ಪ್ರವಾಹದಲ್ಲಿ ಮುಳುಗಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಸಾರ್ವಜನಿಕರು ಮನೆಗಳಿಂದ ಹೊರಬಾರದಂತೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *