Thursday, January 30, 2025
Menu

ಜೀವನ ಶೈಲಿ ಬದಲಿಸಿ, ಮಧುಮೇಹ ನಿಯಂತ್ರಿಸಿ…

ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಆಟವಾಡಲು ಸೂಕ್ತ ಸೌಲ‘್ಯಗಳು ಸಿಗುತ್ತಿಲ್ಲ. ಇದರಿಂದಾಗಿ ಹತಾಶರಾಗುವ ಮಕ್ಕಳು, ಕ್ರೀಡಾ ಚಟುವಟಿಕೆಗಳ ಬಗ್ಗೆ ಅನಾಸಕ್ತರಾಗಿ, ಕಂಪ್ಯೂಟರ್ ಗೇಮ್‌ಗಳು ಮತ್ತು ದೂರದರ್ಶನಗಳಂಥ ಒಳಾಂಗಣ ಮನರಂಜನೆಯತ್ತ ಆಸಕ್ತಿವಹಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಮಧುಮೇಹ ಪ್ರಮಾಣ ಹೆಚ್ಚಾಗಿ ರಾಷ್ಟ್ರದ ‘ವಿಷ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಮಧುಮೇಹ

ತುಂಬಾ ಪ್ರಾಚೀನ ಕಾಯಿಲೆ. ಈ ರೋಗವನ್ನು ಗ್ರೀಸ್, ಈಜಿಪ್ಟ್‌ ಮತ್ತು ಚೀನಾ ದೇಶಗಳಲ್ಲಿ ಬಹಳ ಹಿಂದೆಯೇ ಗುರುತಿಸಲಾಗಿದೆ. ‘ಡಯಾಬಿಟಿಸ್’ ಶಬ್ದ ಗ್ರೀಕ್ ಮೂಲದಿಂದ ಬಂದಿದೆ. ಎರಡನೆಯ ಶಬ್ದ ‘ಮೆಲಿಟಸ್’ ಎಂದರೆ ಸಿಹಿ. ಮೂತ್ರ ಸಿಹಿಯಾಗಿರುವುದರಿಂದ ಈ ಶಬ್ದ ರೋಗದ ಸಂಪೂರ್ಣ ಚಿತ್ರವನ್ನು ನೀಡುತ್ತದೆ. ಕ್ರಿ.ಶ. ಎರಡನೆಯ ಶತಮಾನದಲ್ಲಿ ಗ್ರೀಸ್‌ನ ‘ಅರಿಯೇಟಸ್’ ಈ ರೋಗಕ್ಕೆ ‘ಡಯಾಬಿಟಿಸ್’ ಎಂದು ಹೆಸರಿಸಿದನು. ಚರಕ ಸಂಹಿತೆ ಮತ್ತು ಸುಶೃತ ಸಂಹಿತೆಗಳಲ್ಲಿ ಈ ರೋಗದ ನಿದಾನ ಮತ್ತು ಚಿಕಿತ್ಸೆಯ ಬಗ್ಗೆ ವಿವರಣೆ ಇದೆ. ಮ‘ುಮೇಹ ಮೂಲ‘ೂತ ಅಂಶಗಳನ್ನಾ‘ರಿಸಿ, ರೋಗದ ಲಕ್ಷಣಗಳು ಮತ್ತು ಚಿಕಿತ್ಸೆಯ ವಿವರಣೆ ಸಾವಿರ ವರ್ಷಗಳ ಹಿಂದೆ ಬರೆಯಲ್ಪಟ್ಟ ಅಷ್ಟಾಂಗ ಹೃದಯ, ಮಾ‘ವ ನಿದಾನ ಯೋಗ ರತ್ನಾಕರ, ‘ಾವ ಪ್ರಕಾಶ ಮತ್ತು ರಸಚಂದ್ರಿಕಾ ಗ್ರಂಥಗಳಲ್ಲಿ ದೊರೆಯುತ್ತದೆ. ಆಗ ಮಾಡಿದ ರೋಗ ವಿವರಣೆ, ಗುಣ ಲಕ್ಷಣಗಳ ವಿಶ್ಲೇಷಣೆ ಮತ್ತು ನಿರ್ಣಯ ಇಂದಿಗೂ ಬದಲಾಗದೆ ಉಳಿದಿವೆ.

‘ಾರತ ವಿಶ್ವದ ಮಧುಮೇಹ ರೋಗಿಗಳ ರಾಜ‘ಾನಿ ಆಗುವತ್ತ ದಾಪುಗಾಲು ಇಟ್ಟಿರುವುದು ಆತಂಕಕಾರಿ. ಬದಲಾದ ಜೀವನಶೈಲಿಯೇ ಈ ರೋಗ ಹೆಚ್ಚಾಗಲು ಕಾರಣವಾಗಿವೆ. ಉತ್ತಮ ಉದ್ಯೋಗ, ‘ವಿಷ್ಯ ಮತ್ತು ಜೀವನ ಮಟ್ಟ ಸು‘ಾರಣೆಗಾಗಿ ಗ್ರಾಮಗಳು ಮತ್ತು ಪಟ್ಟಣಗಳಿಂದ ನಗರ ಪ್ರದೇಶಗಳತ್ತ ‘ಾರೀ ಪ್ರಮಾಣದ ವಲಸೆಯಾಗುತ್ತಿದೆ. ಇದರಿಂದ ನಗರಗಳಲ್ಲಿ ಜನದಟ್ಟಣೆಗೆ ಕಾರಣವಾಗುತ್ತಿದೆ. ದಿನಸಿ ಮತ್ತು ತರಕಾರಿಗಳನ್ನು ಖರೀದಿಸಲು ನಡೆದುಕೊಂಡು ಹೋಗುತ್ತಿದ್ದ ಜನರು ಈಗ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಬಳಸುತ್ತಿದ್ದಾರೆ. ಜೀವನ ಮಟ್ಟ ಸು‘ಾರಿಸುತ್ತಿದ್ದಂತೆ ಜನರ ಮನೆ ಬಾಗಿಲಿಗೇ ಗ್ರಾಹಕರ ಸೇವೆ ಲಭಿಸುತ್ತಿದೆ. ವ್ಯಕ್ತಿಯ ಜೀವನ ಶೈಲಿಯ ‘ಾಗವಾಗಿದ್ದ ವ್ಯಾಯಾಮ ಇಂದಿನ ದಿನಗಳಲ್ಲಿ ಕಂಡು ಬರುತ್ತಿಲ್ಲ. ಇದರಿಂದ ಸ್ಥೂಲಕಾಯ, ಬೊಜ್ಜು ಪ್ರಮಾಣ ಹೆಚ್ಚಾಗುತ್ತಿದೆ.

ಆಹಾರ‘್ಯಾಸ ಬದಲಾವಣೆಯಿಂದಾಗಿ ಮ‘ುಮೇಹ ಪೂರ್ವಸ್ಥಿತಿ ಸಂಖ್ಯೆ ದಿನೇದಿನ ಹೆಚ್ಚಾಗುತ್ತಿದೆ. ಜನರ ಪ್ರಮುಖ ಆಹಾರವಾಗಿದ್ದ ರಾಗಿ, ಜೋಳ, ಗೋಧಿ ಮತ್ತು ಅಪರೂಪಕ್ಕೆ ಅಕ್ಕಿ ಕಡಿಮೆಯಾಗಿ, ಈಗ ಅತ್ಯಧಿಕ ಕೊಬ್ಬಿನಾಂಶ ಇರುವ ಪಿಜ್ಜಾ ಬರ್ಗರ್, ನೂಡಲ್ಸ್‌ ನಂತಹವು ಆಹಾರಗಳಾಗಿ ಪರಿವರ್ತನೆಯಾಗಿವೆ. ಈ ತಿನಿಸುಗಳು ಚೀಸ್ ಮತ್ತು ಅಧಿಕ ಎಣ್ಣೆಯಿಂದ ಕೂಡಿರುತ್ತವೆ. ಇದರಿಂದ ಬೊಜ್ಜು, ಸ್ಥೂಲಕಾಯ ಪ್ರಮಾಣ ಹೆಚ್ಚಾಗಿ, ಬಿ.ಪಿ, ಮ‘ುಮೇಹ ಮತ್ತು ಹೃದ್ರೋಗಗಳಿಗೆ ಎಡೆಮಾಡಿಕೊಡುತ್ತದೆ.

ಆರಂಭಿಕ ಹಂತದಲ್ಲಿ ಗುರುತಿಸಲ್ಪಟ್ಟ ಸಕ್ಕರೆ ಕಾಯಿಲೆಯನ್ನು ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸುವ ಮೂಲಕ ನಿಯಂತ್ರಿಸಬಹುದು ಅಥವಾ ಮುಂದೂಡಬಹುದು. ಬಿರುಸು ನಡಿಗೆ, ಜಾಗಿಂಗ್, ಟೆನಿಸ್, ಈಜು, ಸೈಕ್ಲಿಂಗ್ ಮುಂತಾದ ವ್ಯಾಯಾಮಗಳ ರೂಪದಲ್ಲಿ ದೈಹಿಕ ಚಟುವಟಿಕೆಗಳನ್ನು ವೃದ್ಧಿಗೊಳಿಸುವ ಮೂಲಕ ಮ‘ುಮೇಹ ಕಾಯಿಲೆಯನ್ನು ಹತೋಟಿಯಲ್ಲಿಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರಾದ ಟೆಡ್ರೊಸ್ ಅ‘ಾನಾಮ್ ಘೆಬ್ರಿಯೊಸಸ್ ಹೇಳಿರುವುದು ಅರ್ಥಪೂರ್ಣ. ಕಟ್ಟುನಿಟ್ಟಿನ ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ಆರಂಭಿಕ ಹಂತದಲ್ಲಿರುವ ಮ‘ುಮೇಹವನ್ನು ಸಮರ್ಥವಾಗಿ ತಡೆಗಟ್ಟಬಹುದಾಗಿದೆ ಎಂಬುದು ಜಗತ್ತಿನೆಲ್ಲೆಡೆ ನಡೆದ ಅ‘್ಯಯನಗಳಿಂದ ಸಾಬೀತಾಗಿದೆ.
ಬದಲಾದ ಜೀವನ ಶೈಲಿ :

ವ್ಯಕ್ತಿಯ ಜೀವನ ಮಟ್ಟ ಸು‘ಾರಣೆಯಾಗುತ್ತಿದ್ದಂತೆ, ಕಚೇರಿಯಲ್ಲಿ ವ್ಯಕ್ತಿಯ ಮೇಲೆ ಒತ್ತಡವೂ ಹೆಚ್ಚಾಗುತ್ತದೆ. ಇದರಿಂದ ಆಹಾರ ಸೇವಿಸುವ ಪದ್ಧತಿ (ಅಕಾಲಿಕ ಆಹಾರ ಸೇವನೆ) ಬದಲಾಗುತ್ತದೆ. ಅನುವಂಶೀಯತೆ, ಸ್ಥೂಲಕಾಯ ದೈಹಿಕ ಜಡತ್ವವಲ್ಲದೇ, ಮಾನಸಿಕ ಒತ್ತಡದಿಂದಲೂ ಮ‘ುಮೇಹ ಹೆಚ್ಚಾಗುತ್ತದೆಂಬುದು ಅ‘್ಯಯನಗಳಿಂದ ತಿಳಿದು ಬಂದಿದೆ. ಮ‘ುಮೇಹ ಇತಿಹಾಸ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ಮಾತ್ರವೇ ಮ‘ುಮೇಹ ರೋಗ ಬರುತ್ತದೆ ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಅದು ಸತ್ಯವಲ್ಲ. ಈ ಮೇಲಿನ ಕಾರಣವಲ್ಲದೇ ಇತರ ಕಾರಣಗಳಿಂದಲೂ ಮ‘ುಮೇಹ ಬರುತ್ತದೆ. ಕ್ಷಿಪ್ರ ನಗರೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಆಹಾರ ಪದ್ಧತಿ ಬದಲಾವಣೆ ಮತ್ತು ಜೀವನಶೈಲಿ ಪರಿವರ್ತನೆಯಿಂದ ಮಕ್ಕಳಲ್ಲೂ ಡಯಾಬಿಟಿಸ್ ಪ್ರಮಾಣ ಹೆಚ್ಚಾಗುತ್ತಿರುವುದನ್ನು ನಾವು ಕಾಣಬಹುದು. ಇದು ನಿಜವಾದ ಆತಂಕಕಾರಿ ಬೆಳವಣಿಗೆ.

ಜೀವನಶೈಲಿ ಬದಲಾವಣೆಗೆ ಬ್ರೇಕ್ ಹಾಕದಿದ್ದಲ್ಲಿ ಮುಂಬರುವ ದಿನಗಳಲ್ಲಿ ಚಿಕ್ಕ ವಯಸ್ಸಿಗೆ ಸ್ಥೂಲಕಾಯತ್ವ, ಮಧುಮೇಹ, ರಕ್ತದೊತ್ತಡ, ಹೃದ್ರೋಗಗಳ ಪ್ರಮಾಣ ಹೆಚ್ಚು ಆಗುವುದರಲ್ಲಿ ಸಂಶಯವಿಲ್ಲ. ಉನ್ನತ ಹುದ್ದೆಗಳ ಉದ್ಯೋಗದಲ್ಲಿರುವ ಪೋಷಕರು ಈ ಸಮಸ್ಯೆಗಳಿಗೆ ಸಾಕಷ್ಟು ಕೊಡುಗೆ ನೀಡುತ್ತಾರೆಂದು ಹೇಳಬಹುದು. ಇಂಥ ಪೋಷಕರು ಮತ್ತು ತಂದೆ-ತಾಯಿಗಳಿಗೆ ತಮ್ಮ ಮಕ್ಕಳೊಂದಿಗೆ ಇರಲು ಸಾಕಷ್ಟು ಸಮಯಾವಕಾಶ ಇರುವುದಿಲ್ಲ ಮತ್ತು ಅಜ್ಜ-ಅಜ್ಜಿ ಅಥವಾ ಕೆಲಸಕ್ಕಿರುವ ಪೋಷಕರ ಮೂಲಕ ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ.

ಇದರಿಂದಾಗಿ ನೋಡಿಕೊಳ್ಳುವವರಿಲ್ಲದೆ ಮಕ್ಕಳು ಹೆಚ್ಚಾಗಿ ಆಹಾರ ಸೇವಿಸಿ ಬೊಜ್ಜು ಬೆಳೆಸಿಕೊಳ್ಳುತ್ತಾರೆ. ಇದೇ ವೇಳೆ, ಪೋಷಕರಿಗೆ ಸಮಯ ಸಿಕ್ಕಾಗ, ತಮ್ಮ ಮಕ್ಕಳನ್ನು ಾಸ್ಟ್‌ ುಡ್ ಅಥವಾ ಪಿಜ್ಜಾ ಪಾಯಿಂಟ್‌ಗಳಿಗೆ ಕರೆದೊಯ್ದು ಅಧಿಕ ಕೊಬ್ಬಿನಾಂಶದ ಆಹಾರ ಪದಾರ್ಥಗಳನ್ನು ತಿನಿಸುತ್ತಾರೆ. ಇದರಿಂದ ಅಧಿಕ ಕ್ಯಾಲರಿ ಮೈ ಸೇರಿ, ಚಿಕ್ಕ ವಯಸ್ಸಿನಲ್ಲಿಯೇ ಸ್ಥೂಲಕಾಯದವರಾಗುತ್ತಾರೆ.

ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಆಟವಾಡಲು ಸೂಕ್ತ ಸೌಲ‘್ಯಗಳು ಸಿಗುತ್ತಿಲ್ಲ. ಇದರಿಂದಾಗಿ ಹತಾಶರಾಗುವ ಮಕ್ಕಳು, ಕ್ರೀಡಾ ಚಟುವಟಿಕೆಗಳ ಬಗ್ಗೆ ಅನಾಸಕ್ತರಾಗಿ, ಕಂಪ್ಯೂಟರ್ ಗೇಮ್‌ಗಳು ಮತ್ತು ದೂರದರ್ಶನಗಳಂಥ ಒಳಾಂಗಣ ಮನರಂಜನೆಯತ್ತ ಆಸಕ್ತಿವಹಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಮ‘ುಮೇಹ ಪ್ರಮಾಣ ಹೆಚ್ಚಾಗಿ ರಾಷ್ಟ್ರದ ‘ವಿಷ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಅನುಸರಿಸಲೇಬೇಕಾದ ಆಹಾರ ಪಥ್ಯ:

ಪಥಿ ನಾ‘ು ಪಥ್ಯ. ಜೀವನ ದಾರಿಗೆ ಪೂರಕವಾದದ್ದು ಪಥ್ಯ ಎನಿಸಿಕೊಳ್ಳುತ್ತದೆ. ಆಹಾರದಲ್ಲಿ ಪಥ್ಯ ಅನುಸರಿಸುವುದು ಮ‘ುಮೇಹಕ್ಕೆ ಅತ್ಯಂತ ಮೂಲ ಮತ್ತು ಮುಖ್ಯ ಚಿಕಿತ್ಸೆಯಾಗಿದೆ. ಶರೀರದ ಅಗತ್ಯಕ್ಕೆ ತಕ್ಕಂತೆ ಆಹಾರ ಆಗಬೇಕೇ ಹೊರತು ಬಾಯಿ ರುಚಿಗೆ ಅಲ್ಲ. ಒಬ್ಬ ವ್ಯಕ್ತಿಯ ಎತ್ತರ, ವಯಸ್ಸು ಮತ್ತು ಮೈಕಟ್ಟಿಗೆ ಅನುಸಾರವಾಗಿ ಇರುವ ತೂಕ ಗಣನೆಗೆ ತೆಗೆದುಕೊಂಡರೆ ಆತನಿಗೆ ಬೇಕಾದ ಆಹಾರ ಪ್ರತಿ ಕಿಲೋಗ್ರಾಂ ತೂಕಕ್ಕೆ 30 ಕ್ಯಾಲೊರಿ ಅಥವಾ ಇನ್ನೂ ಕಡಿಮೆ. ಉದಾ: ಒಬ್ಬರು 60 ಕಿ .ಗ್ರಾಂ.ತೂಕವಿದ್ದರೆ ಅವರಿಗೆ 1800 ಕ್ಯಾಲೊರಿ ಆಹಾರ ಅಗತ್ಯವಿರುತ್ತದೆ. ಒಂದು ವೇಳೆ ಮ‘ುಮೇಹಿಗಳು ಅತಿ ಹೆಚ್ಚು ತೂಕವುಳ್ಳವರಾಗಿದ್ದಲ್ಲಿ ಅವರಿಗೆ ಪ್ರಕಟವಾದ ಪ್ರತಿ ಕಿ. ಗ್ರಾಂ ಗೆ 25 ಕ್ಯಾಲೊರಿ ಸಾಕಾಗುತ್ತದೆ. ಆದ್ದರಿಂದ ಮ‘ುಮೇಹಿ ತಮ್ಮ ಆಹಾರವನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಅವರು ಆಹಾರದಲ್ಲಿ ಏನೇನು ಇದೆ ಮತ್ತು ಎಷ್ಟು ಸಕ್ಕರೆಯ ಪ್ರಮಾಣ ಇದೆ ಎಂಬುದನ್ನು ತಿಳಿದಿರಬೇಕು.

ಸಿಹಿ ತಿಂಡಿಗಳನ್ನು ವರ್ಜಿಸಬೇಕು. ಸಕ್ಕರೆ, ಬೆಲ್ಲದಿಂದ ಮಾಡಿದ ಯಾವುದೇ ಸಿಹಿ ತಿಂಡಿಯನ್ನು ಸೇವಿಸಬಾರದು. ಆಲೂಗಡ್ಡೆ, ಗೆಣಸು ಅಧಿಕ ಪ್ರಮಾಣದ ಪಿಷ್ಟವನ್ನೊಳಗೊಂಡಿರುವುದರಿಂದ ಅವುಗಳನ್ನು ವರ್ಜಿಸಬೇಕು. ಬೇಳೆ ಕಾಳು ಮತ್ತು ಬೀಜಗಳನ್ನು ಸಾಮಾನ್ಯ ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು. ಹಸಿರು ತೊಪ್ಪಲು ಪಲ್ಯ, ತರಕಾರಿಗಳನ್ನು ಸಮೃದ್ಧವಾಗಿ ಸೇವಿಸಬಹುದು. ಸಕ್ಕರೆ / ಬೆಲ್ಲ ಇಲ್ಲದ ಟೀ, ಕಾಫಿ ಅಥವಾ ಸೂಪ್ ಸೇವಿಸಬಹುದು. ಮ‘ುಮೇಹಿಗಳು ಆಹಾರದಲ್ಲಿ ಶಿಸ್ತನ್ನು ಜೀವನಪರ್ಯಂತ ಪಾಲಿಸಬೇಕಾದ ಅಗತ್ಯತೆ ಗಮನದಲ್ಲಿರಿಸಬೇಕು. ಮ‘ುಮೇಹಿಗಳು ತಿನ್ನಬೇಕು. ಆದರೆ ಹೊಟ್ಟೆ ತುಂಬ ಅಲ್ಲ. ಸ್ವಲ್ಪ ಹೊಟ್ಟೆ ಖಾಲಿ ಇರುವಾಗಲೇ ತಟ್ಟೆ ಬಿಟ್ಟೇಳಬೇಕು. ಎರಡನೆ ಬಾರಿ ಬಡಿಸಲು ಬಂದಾಗ ಬೇಡ ಎಂದು ಹೇಳುವ ಕಲೆಯನ್ನು ರೂಢಿಸಿಕೊಂಡಲ್ಲಿ ಮಧುಮೇಹದ ವಿರುದ್ಧದ ಯುದ್ಧ ಗೆದ್ದಂತೆಯೇ ಸೈ.

ನಿಯಮಿತ ವ್ಯಾಯಾಮ :

ಮಧುಮೇಹಗಳಿಗೆ ಆಹಾರ ಮತ್ತು ಔಷಧಿಗಳಷ್ಟೇ ಮುಖ್ಯ ವ್ಯಾಯಾಮ. ಪ್ರತಿದಿನ ಒಂದು ಗಂಟೆಯ ನಡಿಗೆ ಇಲ್ಲವೆ ವ್ಯಾಯಾಮ ಉತ್ತಮವಾದುದು. ಆದರೆ ಕಠಿಣ ವ್ಯಾಯಾಮ ಬೇಡ. ಏಕೆಂದರೆ ಕಠಿಣ ವ್ಯಾಯಾಮದಿಂದ ಹೃದಯದ ಮತ್ತು ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪ್ರತಿದಿನ ಬೆಳಿಗ್ಗೆ ಇಲ್ಲವೆ ಸಂಜೆ ಒಂದು ಗಂಟೆಯ ಕ್ರಮಬದ್ಧ ನಡಿಗೆ ತುಂಬ ಪ್ರಯೋಜನಕಾರಿ. ಯೋಗದ ಬಗ್ಗೆ ಆಸಕ್ತಿಯಿರುವವರು ಯೋಗಾಸನಗಳನ್ನು ಮಾಡಬಹುದು. ಯೋಗ ಮತ್ತು ‘್ಯಾನದಿಂದ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.

Related Posts

Leave a Reply

Your email address will not be published. Required fields are marked *