ಅಪರಾಧ
ಧಾರವಾಡದಲ್ಲಿ ಪತ್ನಿಯ ಕೊಂದು ವ್ಯಕ್ತಿ ಆತ್ಮಹತ್ಯೆ
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗರಗ ಗ್ರಾಮದ ಮೌಲಾಸಾಬ್ (28) ಎಂಬಾತ ಪತ್ನಿ ಸಲ್ಮಾಳನ್ನು(21) ಕೊಲೆ ಮಾಡಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದೂವರೆ ವರ್ಷದ ಮಗುವಿನ ಎದುರೇ ಮೌಲಾಸಾಬ್ ಪತ್ನಿಯನ್ನು ಕೊಲೆ ಮಾಡಿ ನೇನು ಬಿಗಿದುಕೊಂಡಿದ್ದಾನೆ. ಮೂರು ವರ್ಷದ ಹಿಂದೆ ಇವರ ಮದುವೆಯಾಗಿತ್ತು. ನಮ್ಮ ಮಗಳು ಸಲ್ಮಾಗೆ ಅತ್ತೆ, ಮಾವನ ಕಾಟ ಇತ್ತು. ಈಗ ಅವಳನ್ನು
ಚಿಂಚೋಳಿಯಲ್ಲಿ ಪತ್ನಿ ಜೊತೆ ಜಗಳವಾಡಿ ಮಗನ ನದಿಗೆಸೆದು ಕೊಲೆಗೈದ ತಂದೆ
ಹೆಂಡತಿಯ ಮೇಲಿನ ಸಿಟ್ಟಿಗೆ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಮಗನನ್ನು ನದಿಗೆ ಎಸೆದು ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ. ಸೋಮರಾವ್ ಹೂಗಾರ್ ಮಗುವನ್ನು ಹತ್ಯೆಗೈದ ಆರೋಪಿ, ಪತ್ನಿ ಕಲ್ಪನಾ ಜೊತೆ ಗಲಾಟೆ ಮಾಡಿಕೊಂಡಿದ್ದ ಆರೋಪಿಯು ಇದೇ
ಬೆಂಗಳೂರಿನ ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ ಬಲಿ
ಮಧ್ಯಪ್ರದೇಶದ ರಾಜ್‌ಘಡದ ಬಿಯೋರಾ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ. ಬಸ್ ಸೇತುವೆಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ, ಅಪಘಾತದಲ್ಲಿ ಹಲವರಿಗೆ ಗಂಭೀರ ಗಾಯವಾಗಿದ್ದು, ಒಬ್ಬ ಪೊಲೀಸ್ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನಲ್ಲಿ ಕಳೆದ ಏಳು ತಿಂಗಳಲ್ಲಿ ಸೈಬರ್ ವಂಚಕರು ದೋಚಿದ್ದು 558 ಕೋಟಿ ರೂ.
ಬೆಂಗಳೂರಿನಲ್ಲಿ ಕಳೆದ ಏಳು ತಿಂಗಳಲ್ಲಿ ಒಟ್ಟು 4,712 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಜನರು 558 ಕೋಟಿ ರೂ. ಕಳೆದುಕೊಂಡಿದ್ದಾರೆ. ನಗರದಲ್ಲಿ ಇಂಜಿನಿಯರ್‌ಗಳು, ವೈದ್ಯರು, ಶಿಕ್ಷಕರು, ಬ್ಯಾಂಕ್ ಸಿಬ್ಬಂದಿ, ಹಿರಿಯ ನಾಗರಿಕರು, ಗೃಹಿಣಿಯರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಮೋಸದ ಜಾಲವನ್ನು ಬೀಸುತ್ತಿದ್ದಾರೆ.
ಅನೈತಿಕ ಸಂಬಂಧ: ವ್ಯಕ್ತಿಯನ್ನು ಹೊಡೆದು ಕೊಲೆಗೈದ ಮಹಿಳೆಯ ಕುಟುಂಬ
ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿರುವುದಕ್ಕೆ ಆಕೆಯ ಕುಟುಂಬದವರು ವ್ಯಕ್ತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಗದಗದ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ. 34 ವರ್ಷದ ಈರಣ್ಣ ಅಗಸಿಬಾಗಿಲು ಮೃತಪಟ್ಟ ವ್ಯಕ್ತಿ. ಆತ ರೇಣುಕಾ ಎಂಬ
ದಯಾಮರಣ ಕೋರಿದ್ದ ತುಮಕೂರಿನ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ
ಈ ಹಿಂದೆ ಗೃಹಸಚಿವರಾಗಿದ್ದ ಪರಮೇಶ್ವರ್ ಅವರಲ್ಲಿ ದಯಾಮರಣ ಕೋರಿ ಮನವಿ ಸಲ್ಲಿಸಿದ್ದ ತುಮಕೂರಿನ ಶಿರಾ ನಗರ ಹೊರ ವಲಯದ ಮಹಿಳೆಯು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಬಿಯಾ ಪಾಷಾ (39), ಮಗಳು ತಮನ್ನಾ (9), ಮಗ ಸಿಮ್ರಾನ್ (5) ಆತ್ಮಹತ್ಯೆ ಮಾಡಿಕೊಂಡವರು.
ಪಶು ವೈದ್ಯಾಧಿಕಾರಿ ನೇಮಕ ಅಕ್ರಮ: ಸ್ಟ್ರಾಂಗ್‌ರೂಂ ಡೇಟಾ ಡಿಲಿಟ್, ಸ್ಕ್ಯಾನ್ ಹಾರ್ಡ್ ಡಿಸ್ಕ್ ನಾಪತ್ತೆ
ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ನೇಮಕದಲ್ಲಿ ಅಕ್ರಮ ಪ್ರಕರಣದ ತನಿಖೆ ನಡೆಸಬೇಕಾದರೆ ಪ್ರಶ್ನೆಪತ್ರಿಕೆ, OMR ಶೀಟ್ ಇಡುವ ಸ್ಟ್ರಾಂಗ್‌ರೂಂನ ದೃಶ್ಯಾವಳಿಗಳು ಡಿಲಿಟ್ ಆಗಿದ್ದು, OMR ಸ್ಕ್ಯಾನ್ ಹಾರ್ಡ್ ಡಿಸ್ಕ್ ನಾಪತ್ತೆಯಾಗಿರುವುದು ಬಯಲಾಗಿದೆ. ನಿಯಮದಂತೆ ಸ್ಟ್ರಾಂಗ್‌ರೂಂನ ಸಿಸಿಟಿವ ಡೇಟಾವನ್ನು ಪರೀಕ್ಷೆ ಮುಗಿದ ಬಳಿಕ ವರ್ಷದ
ಪ್ರಶ್ನೆಪತ್ರಿಕೆ ಸೋರಿಕೆ: ಮಹಾರಾಷ್ಟ್ರದಲ್ಲಿ ಡ್ರಗ್ ಇನ್ಸ್‌ಪೆಕ್ಟರ್ ನೇಮಕ ಪ್ರಕ್ರಿಯೆ ರದ್ದು
ಮಹಾರಾಷ್ಟ್ರ ಲೋಕಸೇವಾ ಆಯೋಗ ನಡೆಸಿದ ಡ್ರಗ್ ಇನ್ಸ್‌ಪೆಕ್ಟರ್, ಗ್ರೂಪ್ ಬಿ ಹುದ್ದೆಗಳ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮ ಆರೋಪಗಳ ಕುರಿತು ನಡೆಸಲಾದ ಪ್ರಾಥಮಿಕ ತನಿಖೆ ಬಳಿಕ ನೇಮಕ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗಿದೆ. ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಡ್ರಗ್
ಕೆಪಿಎಸ್ಸಿ ಅಕ್ರಮ: ಶಿವಶಂಕರಪ್ಪ ಸಾಹುಕಾರ್ ಎರಡನೇ ಬಾರಿ ಅಮಾನತು
ಕೆಪಿಎಸ್ಸಿ ನೇಮಕದಲ್ಲಿ ಅಕ್ರಮ ಸೇರಿದಂತೆ ವಿವಾದಗಳ ಹಿನ್ನೆಲೆ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಎರಡನೇ ಬಾರಿ ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಈ ಹಿಂದಿನ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಈ ಹಿಂದೆ ಅಮಾನತು ಆದೇಶದಲ್ಲಿ ಉಂಟಾಗಿದ್ದ ಆಡಳಿತಾತ್ಮಕ ಮತ್ತು
ವಿಜಯಪುರ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಮಂದಿಯ ಶವ ಪತ್ತೆ
ವಿಜಯಪುರ ನಗರದ ಹೊರಭಾಗದಲ್ಲಿರುವ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಜನರ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಾಯಿ ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ) (10), ವಿಕಾಸ




