Saturday, September 26, 2026
Menu

ಮನೆ ಲೀಸ್‌ ಆಫರ್‌ ಮುಂದಿಟ್ಟು ಗ್ರಾಹಕರಿಗೆ 200 ಕೋಟಿ ರೂ. ವಂಚನೆ

ಬೆಂಗಳೂರಿನಲ್ಲಿ ಮನೆ ಲೀಸ್​ಗೆ ನೀಡುವುದಾಗಿ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಕಂಪೆನಿಯೊಂದು 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬಹಿರಂಗವಾಗಿದೆ. ಜಾನ್ಸ್ ಅಸೆಟ್ ಹೆಸರಿನ ಮಿಡಿಯೇಟರ್ ಕಂಪನಿಯು 300ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ಮಾಲೀಕ ಪರಾರಿಯಾಗಿದ್ದಾನೆ. ಕಂಪನಿ ಲೀಸ್‌ಗೆ ಮನೆ ಹುಡುಕುವ ಗ್ರಾಹಕರಿಗೆ ಆಫರ್ ನೀಡಿ, ನಿಮ್ಮ ಲೀಸ್ ಹಣವನ್ನು ನಮಗೆ ಕೊಡಿ, ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ

ಶಿರಾದಲ್ಲಿ ಯುವಕನೊಂದಿಗೆ ಮಗಳ ಪ್ರೀತಿ ಒಪ್ಪದೆ ಕೊಲೆಗೈದ ತಂದೆ

ಮಗಳು ಯುವಕನೊಬ್ಬನನ್ನು ಪ್ರೀತಿಸಿ ಮನೆತನದ ಗೌರವಕ್ಕೆ ಕುಂದು ಮಾಡುತ್ತಿದ್ದಾಳೆಂದು ಸಿಟ್ಟಿಗೆದ್ದ ತಂದೆ ಆಕೆಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.’ ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ಆರೋಪಿ

ದರ್ಶನ್‌ ವಿರುದ್ಧ ಮಾಧ್ಯಮ ವಿಚಾರಣೆ: ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

ಚಿತ್ರದುರ್ಗದ ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ಧ ‘ಮಾಧ್ಯಮ ವಿಚಾರಣೆ’ ಬಗ್ಗೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಸೂಚನೆ ನೀಡಿದೆ. ಮಾಧ್ಯಮಗಳು ನ್ಯಾಯಾಧೀಶರಾಗಲು, ತೀರ್ಪುಗಾರರಾಗಲು ಅಥವಾ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು

ತಂದೆ, ಆತನ ಸ್ನೇಹಿತನಿಂದ ಮಗಳ ಮೇಲೆ ಅತ್ಯಾಚಾರ

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಜನತಾ ಕಾಲೋನಿಯಲ್ಲಿ ತಂದೆಯೊಬ್ಬ ಅಪ್ರಾಪ್ತ ವಯಸ್ಕ ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಈ ಕೃತ್ಯವನ್ನು ಯಾರಿಗೂ ತಿಳಿಸಬಾರದು ಎಂದು ಮಗಳಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದ. ತಾಯಿಗೆ ವಿಷಯ ತಿಳಿಯಬಾರದೆಂದು ಮಗಳಿಗೆ

ದೇಶದಲ್ಲಿ ಮೊದಲ ಬಾರಿಗೆ 182 ಕೋಟಿ ಮೌಲ್ಯದ ಜಿಹಾದಿ ಡ್ರಗ್‌ ವಶ

ಭಾರತದಲ್ಲಿ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) 182 ಕೋಟಿ ಮೌಲ್ಯದ ಕ್ಯಾಪ್ಟಗನ್ ಡ್ರಗ್‌ ವಶಪಡಿಸಿಕೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಡ್ರಗ್ಸ್ ಅನ್ನು ಪಶ್ಚಿಮ ಏಷ್ಯಾಕ್ಕೆ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಮುಂದ್ರಾ

ರೇಪ್‌ ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಬಲಪಡಿಸುವಂತಿಲ್ಲ: ದೆಹಲಿ ಹೈಕೋರ್ಟ್‌

ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಬಲವಂತಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಜಾಮೀನು ಅರ್ಜಿ ತಿರಸ್ಕರಿಸುವ ವೇಳೆ ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ

ಸಿಂಧನೂರಿನಲ್ಲಿ ಸಾಧುವೇಷದ ಕಳ್ಳ: ಮೆಡಿಕಲ್‌ ಮಾಲೀಕನಿಗೆ ಮಂಪರು ಬರಿಸಿ ಚಿನ್ನ, ನಗದು ಕಳವು

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಮೆಡಿಕಲ್‌ಗೆ ಬಂದ ಸಾಧು ವೇಷಧಾರಿ ಮಾಲೀಕನ ಬೆರಳಲಲಿದ್ದ ಚಿನ್ನದ ಉಂಗುರ, ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ವಿಷ್ಣು ದತ್ತ ಎಂಬವರ ಶ್ರೀ ಸಾಯಿ ಮೆಡಿಕಲ್‌ಗೆ ಬಂದ ಸಾಧು ವೇಷಧಾರಿ ಕುಡಿಯಲು ನೀರು ಬರುತ್ತಾನೆ, ವಿಷ್ಣು

ಶಿರಸಿಯ ಸಹಕಾರಿ ಬ್ಯಾಂಕ್‌ನಿಂದ ರೈತರ ಹೆಸರಲ್ಲಿ ಕೋಟ್ಯಂತರ ರೂ. ಸಾಲ ಪಡೆದು ವಂಚನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ದಾಸನಕೊಪ್ಪದ ಸಹಕಾರಿ ಬ್ಯಾಂಕ್‌ನಲ್ಲಿ ರೈತರ ಹೆಸರಲ್ಲಿ ಸಾಲ ಪಡೆದು ಕೋಟ್ಯಂತರ ರೂಪಾಯಿ ದುರುಪಯೋಗ ಹಗರಣ ಬೆಳಕಿಗೆ ಬಂದಿದೆ. ದಾಸನಕೊಪ್ಪದ ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಈ ಗೋಲ್‌ಮಾಲ್ ನಡೆದಿದ್ದು, ವಂಚನೆಗೆ ಒಳಗಾದ ರೈತರು ಮತ್ತು ಷೇರುದಾರರು ಬ್ಯಾಂಕ್‌ಗೆ

ಟ್ರ್ಯಾಕ್ಟರ್‌ನಲ್ಲಿ ಹುಲಿಗೆಮ್ಮ ದರ್ಶನಕ್ಕೆ ಹೋಗುತ್ತಿದ್ದಾಗ ಟ್ಯಾಂಕರ್‌ ಡಿಕ್ಕಿ: ಏಳು ಮಂದಿ ಸಾವು

ದೇವಿಯ ವಾರವೆಂದು ಮುನಿರಾಬಾದ್‌ನ ಹುಲಿಗೆಮ್ಮತಾಯಿ ದರ್ಶನಕ್ಕೆ ಹೊರಟವರು ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಹೃದಯವಿದ್ರಾವಕ  ಘಟನೆ  ಕೊಪ್ಪಳ-ವಿಜಯನಗರ ಜಿಲ್ಲೆಯ ಗಡಿಭಾಗದ ಮುನಿರಾಬಾದ್ ಸೇತುವೆ ಬಳಿ ಶುಕ್ರವಾರ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾನಳ್ಳಿಯಿಂದ

ಇಡೀ ಕುಟುಂಬಕ್ಕೆ ವಾರಕ್ಕೆ500 ರೂ.ಸಂಬಳ: ಹೊಸಪೇಟೆಯಲ್ಲಿ ಒಡಿಶಾದ 37 ಮಂದಿ ಜೀತಮುಕ್ತ

ಹೊಸಪೇಟೆ ತಾಲೂಕಿನ ನಂದಿಬಂಡಿಯಲ್ಲಿ ಒಡಿಶಾದ 37 ಮಂದಿ ಜೀತಕ್ಕಿದ್ದ ಮಾಹಿತಿ ಪಡೆದ ಅಧಿಕಾರಿಗಳು ಜೀತದಿಂದ ಮುಕ್ತಿ ನೀಡಿದ್ದಾರೆ.  ಶ್ರೀನಿವಾಸ್, ಮಹಾದೇವ ರಾವ್ ಮತ್ತು ವೆಂಕಟ ಪ್ರಸಾದ್ ಎಂಬವರು ಈ ಕಾರ್ಮಿಕರನ್ನು ಶೆಡ್‌ನಲ್ಲಿ ಕೂಡಿ ಹಾಕಿ ಬಲವಂತವಾಗಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡಿಸುತ್ತಿದ್ದರು.