Thursday, October 01, 2026
Menu

ಚಾಲಕನಿಗೆ ರುದ್ರಾಕ್ಷಿ ನೀಡಿ ಚಿನ್ನದುಂಗುರ ಎಗರಿಸಿ ನಕಲಿ ನಾಗಾಸಾಧು ಪರಾರಿ

ಬೆಂಗಳೂರಿನಲ್ಲಿ ನಕಲಿ ನಾಗಸಾಧುವೊಬ್ಬರು ಕಾರು ಚಾಲಕನಿಗೆ ಮಂಕುಬೂದಿ ಎರಚಿ ರುದ್ರಾಕ್ಷಿ ಕೊಟ್ಟು ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಬಹಿರಂಗಗೊಂಡಿದೆ. ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಎಂಬವರು ಇತ್ತೀಚೆಗೆ ಖಾಸಗಿ ಹೋಟೆಲ್ ಬಳಿ ಮಾಲೀಕರನ್ನು ಡ್ರಾಪ್ ಮಾಡಿ ರಸ್ತೆ ಬದಿ ಕಾರು ನಿಲ್ಲಿಸಿ ಕೊಂಡಿದ್ದರು. ಆಗ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿ ಮಾತು ಶುರು ಮಾಡಿದ್ದ.

ಕಾರಿನೊಳಗೆ ಗುಂಡು ಹಾರಿಸಿಕೊಂಡು ಕಾರ್ಕಳದ ಉದ್ಯಮಿ ಆತ್ಮಹತ್ಯೆ

ಕಾರ್ಕಳದ ನಿಟ್ಟೆಯ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಉದ್ಯಮಿ ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಲೀಪ್ ಎನ್.ಆರ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ವ್ಯಕ್ತಿ. ದಿಲೀಪ್‌ ಮಂಗಳೂರಿನಲ್ಲಿ ಸಣ್ಣ ಉದ್ಯಮ ನಡೆಸುತ್ತಿದ್ದರು. ಉದ್ಯಮ ನಷ್ಟ ಹಾಗೂ ವಿಪರೀತ ಸಾಲ ಆತ್ಮಹತ್ಯೆಗೆ ಕಾರಣ

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ಅಪಹರಿಸಿ ಕಗ್ಗೊಲೆ

ಬೆಂಗಳೂರು:ಕ್ಯಾಬ್‌ ಚಾಲಕರೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸಾತನೂರಿನ ಕಬ್ಬಾಳು ಸಮೀಪದ ಅರೆಕಟ್ಟೆದೊಡ್ಡಿ ಬಳಿ ಶನಿವಾರ ರಾತ್ರಿ ನಡೆದಿದೆ. ಸೋಲದೇವನಹಳ್ಳಿಯ ಚಿಕ್ಕಬ್ಯಾಲಕೆರೆಯ ಚಂದ್ರಶೇಖರ (39) ಕೊಲೆಯಾದವರು, ನಗರದಲ್ಲಿ ಕ್ಯಾಬ್‌ ಚಾಲಕರಾಗಿದ್ದ ಚಂದ್ರಶೇಖರ ಅವರನ್ನು ರಾತ್ರಿ ದುಷ್ಕರ್ಮಿಗಳು ವಾಹನವೊಂದರಲ್ಲಿ

ಮಗಳ ಕೊಂದು ನದಿಗೆ ಶವ ಎಸೆದ ಅಪ್ಪ: 8 ತಿಂಗಳ ನಂತರ ಪ್ರಕರಣ ಬೆಳಕಿಗೆ

ಕಲಬುರಗಿ: ಪ್ರೀತಿಸಿದ ಅನ್ಯ ಕೋಮಿನ ಯುವಕನನ್ನು ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದ ಮಗಳನ್ನು ಕೊಂದು ನದಿಗೆ ಎಸೆದ ಪ್ರಕರಣ 8 ತಿಂಗಳ ನಂತರ ಬೆಳಕಿಗೆ ಬಂದಿರುವ ಘಟನೆ ಕಲಬುರಗಿಯ ಲಿಂಗಸೂರಿನಲ್ಲಿ ನಡೆದಿದೆ. ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಲಕ್ಕಪ್ಪ ಕಂಬಳಿ ಎನ್ನುವಾತ ತನ್ನ

ಶಾಸಕ ವಿನಯ್ ಕುಲಕರ್ಣಿ- ಐಶ್ವರ್ಯ ಗೌಡ ಕೋಟ್ಯಂತರ ರೂ. ವ್ಯವಹಾರ: ಇಡಿ ತನಿಖೆಯಲ್ಲಿ ಬಯಲು

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ ಪ್ರಕರಣದ ತನಿಖೆಯನ್ನು ಇಡಿ ಚುರುಕುಗೊಳಿಸಿದ್ದು, ತನಿಖೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇಡಿ ಅಧಿಕಾರಿಗಳು ಐಶ್ವರ್ಯಾ ಗೌಡ, ಶಾಸಕ ವಿನಯ್ ಕುಲಕರ್ಣಿ ಹಾಗೂ ಶಿಲ್ಪಾಗೌಡ

ಸಹಕಾರ ಬ್ಯಾಂಕ್‌ಗಳಿಗೆ ವಂಚನೆ: ರಮೇಶ್ ಜಾರಕಿಹೊಳಿ ವಿರುದ್ಧ ಸಿಐಡಿ ದೋಷಾರೋಪ ಪಟ್ಟಿ

ಸಹಕಾರ ಬ್ಯಾಂಕ್‌ಗಳಿಗೆ 439.12 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಶಾಸಕ ರಮೇಶ್ ಜಾರಕಿಹೊಳಿ ಮತ್ತವರ ಇಬ್ಬರು ಆಪ್ತರ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚಿನ ಪುಟಗಳ ದೋಷಾರೋಪ ಪಟ್ಟಿಯನ್ನು  ಸಲ್ಲಿಸಿದೆ. ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹದ

ಡಿಪೋ ವ್ಯವಸ್ಥಾಪಕನ ಕಿರುಕುಳಕ್ಕೆ ಬೇಸತ್ತು ಚಾಲಕ ಆತ್ಮಹತ್ಯೆಗೆ ಯತ್ನ

ಲಿಂಗಸುಗೂರು ಪಟ್ಟಣದ ಬಸ್ ಡಿಪೋ ವ್ಯವಸ್ಥಾಪಕ ರಾಹುಲ್ ಅವರ ಕಾರ್ಯವೈಖರಿಗೆ ಬಸ್ ಚಾಲಕ ಅಬ್ದುಲ್ ಸಾಬ ಬೇಸತ್ತು ಬಸ್ ಡಿಪೋದಲ್ಲೇ  ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪತ್ರಕರ್ತರ ಜೊತೆ ಚಾಲಕ ಮಾತನಾಡಿ,  ನಾನು 18ವರ್ಷದಿಂದ ಚಾಲಕನಾಗಿ  ಕಾರ್ಯ ನಿರ್ವಹಿಸುತ್ತಿದ್ದೇನೆ.  ವ್ಯವಸ್ಥಾಪಕ

ಭಾರತದಿಂದ ಪ್ರತೀಕಾರದ ಭೀತಿ: ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್‌

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತವು ತನ್ನ ಮೇಲೆ  ದಾಳಿ ನಡೆಸಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ ತನ್ನ ಕ್ಷಿಪಣಿ ಪರೀಕ್ಷೆಗೆ ಮುಂದಾಗಿದೆ. ವಿಶೇಷ ಆರ್ಥಿಕ ವಲಯದೊಳಗಿನ ಕರಾಚಿ ಕರಾವಳಿಯಲ್ಲಿ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆಯನ್ನು ನಡೆಸಲು ಕ್ರಮ ಕೈಗೊಂಡಿರುವುದಾಗಿ ರಕ್ಷಣಾ

ಓಂ ಪ್ರಕಾಶ್ ಹತ್ಯೆ: ಮಗಳ ವಿಚಾರಣೆ, ಪ್ರಕರಣ ಸಿಸಿಬಿಗೆ

ಮಾಜಿ ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ ಸಂಬಂಧ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಹೆಚ್​ಎಸ್​ಆರ್ ಲೇಔಟ್ ಪೊಲೀಸರು ಅದೇ ದಿನ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಬಳಿಕ ಪಲ್ಲವಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮಗಳು ಕೃತಿಯ

ಸಿಗರೇಟ್‌ ಸೇದಬೇಡಿ ಎಂದಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ: ಇಬ್ಬರ ಬಂಧನ

ಧಾರವಾಡದ ಗಾಂಧಿಚೌಕ್ ಬಳಿ ಕ್ಷುಲ್ಲಕ ಕಾರಣಕ್ಕಾಗಿ ನಾಲ್ವರು ಯುವಕರು ಆರ್‌ಎಸ್‌ಎಸ್ ಮುಖಂಡ ಶಿರೀಶ್‌ ಬಳ್ಳಾರಿ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಗರೇಟು ಸೇದುತ್ತಿದ್ದ ನಾಲ್ವರಿಗೆ ಶಿರೀಶ್‌ ಅವರು ಬುದ್ಧಿವಾದ ಹೇಳಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ನಾಲ್ವರು