Thursday, October 01, 2026
Menu

ಬೀದರ್‌ ವಿವಿಯಲ್ಲಿ ಅವ್ಯವಹಾರ: 67 ಕಡೆ ಲೋಕಾಯುಕ್ತ ದಾಳಿ

ಬೀದರ್‌ನ ಪಶು ಮತ್ತು ಮೀನುಗಾರಿಕಾ ವಿಶ್ವ ವಿದ್ಯಾಲಯದಲ್ಲಿ 2017-19ರವರೆಗೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿದೆ. ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ಸಿಬ್ಬಂದಿ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ಬೀದರ್‌ನಲ್ಲಿ ಒಟ್ಟು 25 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪ್ರೊಫೆಸರ್, ಇಂಜಿನಿಯರ್ಸ್ ಸೇರಿ ಸಿಬ್ಬಂದಿ ಮನೆ ಮೇಲೆ

ರಾಣೇಬೆನ್ನೂರಿನಲ್ಲಿ ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಸಾಯಿಸಿದ ತಾಯಿ

ರಾಣೇಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವಿನ ಉಸಿರುಗಟ್ಟಿಸಿ ತಾಯಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಗುವನ್ನು ಪ್ರಿಯಾಂಕಾ (4) ಎಂದು ಗುರುತಿಸಲಾಗಿದೆ. ರಾಣೇಬೆನ್ನೂರು ನಗರದ ಎಕೆಜಿ

ಭಾಲ್ಕಿಯಲ್ಲಿ ಕಾಲುವೆಗೆ ಜಿಗಿದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಭಾಲ್ಕಿ ತಾಲೂಕಿನ ಮರೂರು ಬಳಿ ಕಾಲುವೆಗೆ ಜಿಗಿದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ವರು ಮಕ್ಕಳ ಜೊತೆ ದಂಪತಿ ಸೇರಿ ಒಟ್ಟು 6 ಜನರು ಕಾರಂಜಾ ಜಲಾಶಯದ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ವರು ಮೃತಪಟ್ಟಿದ್ದರೆ ಇಬ್ಬರನ್ನು ಸ್ಥಳೀಯರು

ದರ್ಶನ್‌ ಬಳ್ಳಾರಿ ಜೈಲಿಗೆ ವರ್ಗಾವಣೆ ಇಲ್ಲ, ಹಾಸಿಗೆ ದಿಂಬು ನೀಡಲು ಕೋರ್ಟ್‌ ಅಸ್ತು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ದರ್ಶನ್​ಗೆ ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಅನುಮತಿ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ ಅವರನ್ನು

ನನಗೆ ದಯವಿಟ್ಟು ವಿಷ ಕೊಡಿ: ನಟ ದರ್ಶನ್‌ ಜಡ್ಜ್‌ಗೆ ಮನವಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ  ನಟ ದರ್ಶನ್‌ ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯುವಾಗ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿ, ನನಗೆ ಜೈಲಿನಲ್ಲಿ ಬದುಕುವುದು ಕಷ್ಟವಾಗುತ್ತಿದೆ, ದಯವಿಟ್ಟು ನನಗೆ ವಿಷ ಕೊಡಿ, ನಾನು ಬಿಸಿಲು

ಮಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದ ವಾಹನ: ಲಾರಿ ಹರಿದು ಮಹಿಳೆ ಸಾವು

ಮಂಗಳೂರು ನಗರದ ಕೂಳೂರು ರಾಯಲ್ ಓಕ್ ಶೋರೂಂ ಮುಂಭಾಗ ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಮಹಿಳಾ ಸವಾರರೊಬ್ಬರ ಮೇಲೆ ಕ್ಯಾಂಟರ್‌ ಲಾರಿ ಹರಿದು ಮೃತಪಟ್ಟಿದ್ದಾರೆ. ಉಡುಪಿಯ ಪರ್ಕಳದ ಮಾಧವಿ ಮೃತ ಮಹಿಳೆ. ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಿಬ್ಬಂದಿ ಮಾಧವಿ ಹಾಜರಾಗಲು

ರಾಜಾಜಿನಗರದಲ್ಲಿ ಪ್ರೀತಿಸಿದಾತ ಮದುವೆ ಮುಂದೂಡುತ್ತಿದ್ದನೆಂದು ನೊಂದ ಯುವತಿ ಆತ್ಮಹತ್ಯೆ

ರಾಜಾಜಿನಗರದ ಗಾಯತ್ರಿ ನಗರದಲ್ಲಿ ಪ್ರೀತಿಸುತ್ತಿದ್ದ ಯುವಕ ಮದುವೆಯನ್ನು ಮುಂದೂಡುತ್ತ ಬರುತ್ತಿದ್ದಾನೆಂದು ಜಗಳವಾಡಿದ ಯುವತಿ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಲತಾ(25) ನೇಣುಬಿಗಿದುಕೊಂಡ ಯುವತಿ. ಆಕೆ ಮಂಡ್ಯ ಜಿಲ್ಲೆಯ ರಂಜಿತ್ ಎಂಬ ಯುವಕನನ್ನು ಐದು

ಗೃಹಸಚಿವರಿಗೆ ಕೋಟಿ ಕೊಡಲು ಪೆಡ್ಲರ್‌ಗಳಿಂದ ಗಾಂಜಾ ಮಾರಾಟ ಮಾಡಿಸ್ತಿದ್ರಾ ಇನ್ಸ್‌ಪೆಕ್ಟರ್‌ ?

ವರ್ಗಾವಣೆ ಆಗ್ತಿದೆ, ಅದಕ್ಕಾಗಿ ಗೃಹಸಚಿವರಿಗೆ ಒಂದು ಕೋಟಿ ರೂ. ಲಂಚ ಕೊಡಬೇಕು ಎಂದು ಇನ್ಸ್‌ಪೆಕ್ಟರ್‌ವೊಬ್ಬರು ಗಾಂಜಾ ಪೆಡ್ಲರ್‌ಗಳಿಂದ ಸುಲಿಗೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.  ಅಮೃತಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಅಂಬರೀಷ್ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದೆ. ಹಣಕ್ಕಾಗಿ ಲಾಡ್ಜ್

ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಕೈದಿ ಪರಾರಿ

ಬಿಜಾಪುರದಿಂದ ಬೆಂಗಳೂರಿನ‌ ಪರಪ್ಪನ ಅಗ್ರಹಾರಕ್ಕೆ ಶಿಪ್ಟ್ ಆಗಿದ್ದ ಆರೋಪಿಯನ್ನು ಚಿಕಿತ್ಸೆಗಾಗಿ ಪೊಲೀಸರು ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಚೇತನ್ ಕಲ್ಯಾಣಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ, ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದ ವೇಳೆ ಜೈಲು

ಡಿಜಿಟಲ್ ಅರೆಸ್ಟ್: ಔರಾದ್‌ನ ಮಾಜಿ ಶಾಸಕಗೆ 30 ಲಕ್ಷ ರೂ. ವಂಚನೆ

ಔರದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್‌ ಅವರನ್ನು ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿರುವ ವಂಚಕರು 30 ಲಕ್ಷ ರೂ. ದೋಚಿದ್ದಾರೆ. ಈ ಸಂಬಂಧ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.