Friday, September 25, 2026
Menu

ಚಿನ್ನದ ಗಣಿ ಕುಸಿದು 30 ಕಾರ್ಮಿಕರು ಬಲಿ

ಮಧ್ಯ ಆಫ್ರಿಕಾ ಗಣರಾಜ್ಯದ ಪಶ್ಚಿಮ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದಾಗ ಚಿನ್ನದ ಗಣಿ ಕುಸಿದು ಮೂವತ್ತು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಅವಶೇಷಗಲಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ನಾನಾ-ಮಾಂಬೆರೆ ಪ್ರಾಂತ್ಯದ ಅಬ್ಬಾ ಪ್ರದೇಶದಲ್ಲಿ ಈ ಗಣಿ ದುರಂತ ನಡೆದಿದೆ, ಗಣಿಯ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದಿದೆ. ಸ್ಥಳೀಯ ಉಪ-ಆಡಳಿತ ಪ್ರದೇಶದ ಉಪ ಮೇಯರ್ ಸುಲೇಮನೆ ಬಿ ಮಾಹಿತಿ ನೀಡಿದ್ದು, ರಕ್ಷಣಾ ತಂಡಗಳು ಮತ್ತು

ಕೋಲ್ಕೊತಾದ ಹೋಟೆಲ್‌ನಲ್ಲಿ ಅಗ್ನಿ ದುರಂತಕ್ಕೆ ಒಂಬತ್ತು ಮಂದಿ ಬಲಿ

ಕೋಲ್ಕೊತಾದ ಹೋಟೆಲ್‌ವೊಂದರಲ್ಲಿ ಬುಧವಾರ ಮುಂಜಾನೆ ಅಗ್ನಿ ದುರಂತ ಸಂಭವಿಸಿದ್ದು, ಮಗು ಸೇರಿ ಕನಿಷ್ಠ ಒಂಬತ್ತು ಮಂದಿ ಅಸು ನೀಗಿದ್ದಾರೆ. ನಗರದ ಫ್ರೀ ಸ್ಕೂಲ್‌ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ಈ ದುರಂತ ನಡೆದಿದೆ, ಬೆಂಕಿ ಹೊತ್ತಿಕೊಂಡಿದ್ದರಿಂದ ಹೋಟೆಲ್‌ನೊಳಗಿದ್ದ ಅತಿಥಿಗಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಮೀನು ಹಿಡಿಯಲು ನದಿಗಿಳಿದ ಮೂವರು ಯುವಕರು ನಾಪತ್ತೆ

ಮೀನು ಹಿಡಿಯಲೆಂದು ತುಂಗಭದ್ರಾ ನದಿಗೆ ಇಳಿದಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ. ರಾಜ (22), ಯಮನಪ್ಪ (20) ಹಾಗೂ ಅಜ್ಜಪ್ಪ (26) ನಾಪತ್ತೆಯಾಗಿರುವ ಯುವಕರು ಎಂದು ಗುರುತಿಸಲಾಗಿದೆ. ಇವರು

ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ದಾವಣಗೆರೆಯಲ್ಲಿ ಗಂಡನ ಕೊಲೆಗೈದ ಪತ್ನಿ, ಪ್ರಿಯಕರ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಮಹಿಳೆಯೊಬ್ಬಳು ಪ್ರಿಯಕನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿರುವ ಘಟನೆ ದಾವಣಗೆರೆಯ ಪಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ವ್ಯಕ್ತಿ. ಆತನಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಉಬೇದುಲ್ಲಾ

ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಮರು ನೇಮಕ: ಹೈಕೋರ್ಟ್‌ ಆದೇಶ

ಪಶುವೈದ್ಯಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಆರೋಪದಡಿ ಅಮಾನತುಗೊಂಡಿದ್ದ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಆ ಸ್ಥಾನಕ್ಕೆ ಮರುನೇಮಕಗೊಳಿಸಲು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ನೀಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ

ವಿದೇಶಿ ಆರೋಪಿಗಳಿಗೆ ಜಾಮೀನು: ಕಟ್ಟುನಿಟ್ಟಾದ ನಿರ್ದೇಶನ ನೀಡಿದ ಸುಪ್ರೀಂ

ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯನ್ವಯ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ವಿದೇಶಿ ಪ್ರಜೆಗಳಿಗೆ ಜಾಮೀನು ನೀಡುವಾಗ ಇನ್ನಷ್ಟು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ೧೨ ನಿರ್ದೇಶನಗಳನ್ನು ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ

ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ ರಾಜ್ಯದ 21 ಕಡೆ ಇಡಿ ದಾಳಿ

ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿದಂತೆ ರಾಜ್ಯದ 21 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ರುದಾರೆ.  ರಾಯಚೂರು ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮದಲ್ಲೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅಧಿಕಾರದಲ್ಲಿ ಇರುವಾಗ ನೇಮಕವಾಗಿದ್ದ

ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ: ಪತ್ನಿಯ ಕೊಲೆಗೈದು ಇಂಜಿನಿಯರ್‌ ಸುಸೈಡ್‌

ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ದಾರುಣ ಅಂತ್ಯ ಕಂಡಿದೆ. ಯುವಕ ಪತ್ನಿಯನ್ನು ಕೊಲೆ ಮಾಡಿದ ಬಳಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಮಂತ್​ ಜೈನ್(32)​ ಹಾಗೂ ಪದ್ಮಾವತಿ (29) ಮೃತಪಟ್ಟ ಜೋಡಿ. ಸುಮಂತ್ ಸಿವಿಲ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರೆ,

ಪಾಕ್‌ ಜೊತೆ ಸಂಪರ್ಕ: ಬಂಧಿತ ಸಮೀರ್ ಫೋನ್ ನಲ್ಲಿ ಭಾರತದಿಂದ ಕಾಶ್ಮೀರ ಹೊರಗಿಟ್ಟ ವೀಡಿಯೊ

ಪಾಕ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಕಾರಣಕ್ಕೆ ಕಲಬುರಗಿಯಲ್ಲಿ  ಭಯೋತ್ಪಾದನಾ ನಿಗ್ರಹ ದಳದಿಂದ ಬಂಧಿತನಾಗಿರುವ  ಸಮೀರ್  ಮೊಬೈಲ್ ಪರಿಶೀಲನೆ ನಡೆಸಿದಾಗ ಸಿಕ್ಕ ವೀಡಿಯೊದಲ್ಲಿರುವ ಭಾರತದ ನಕ್ಷೆಯಿಂದ ಕಾಶ್ಮೀರವನ್ನು ಹೊರಗಿಟ್ಟಿರುವುದು ಪತ್ತೆಯಾಗಿದೆ. ಸಮೀರ್ ಮೊಬೈಲ್ ನಲ್ಲಿ ಸಿಕ್ಕವೀಡಿಯೊದಲ್ಲಿ  ಭಾರತದ ನಕ್ಷೆ  ಚಿತ್ರೀಕರಣಗೊಂಡಿದೆ.  ಜಮ್ಮು

ನಿರ್ಮಾಣ ಹಂತದ ಸುರಂಗಕ್ಕೆ ನೀರು ನುಗ್ಗಿ ಏಳು ಕಾರ್ಮಿಕರ ಸಾವು

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜಲವಿದ್ಯುತ್‌ ಯೋಜನಾ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗಕ್ಕೆ ನೀರು ನುಗ್ಗಿ ಏಳು ಕಾರ್ಮಿಕರು ಅಸು ನೀಗಿದ್ದಾರೆ, ದುರಂತದಲ್ಲಿ 13 ಕಾರ್ಮಿಕರು ಗಾಯಗೊಂಡಿದ್ದಾರೆ. ಅಲಕನಂದಾ ನದಿ ಮೇಲೆ ನಿರ್ಮಾಣ ಹಂತದಲ್ಲಿರುವ ವಿಷ್ಣುಗಾಡ್-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಟೇಲ್ ರೇಸ್ ಟನಲ್‌ನಲ್ಲಿ