ಅಪರಾಧ
ಬೆಂಗಳೂರಿನಲ್ಲಿ ಸ್ನೇಹಿತನ ಮನೆ ದರೋಡೆ ಮಾಡಿಸಿದ್ದ ಮೇಸ್ತ್ರಿ ಅರೆಸ್ಟ್
ಸ್ನೇಹಿತನ ಮನೆಯಲ್ಲೇ ಚಿನ್ನಾಬರಣ ಮತ್ತು ಹಣ ದರೋಡೆ ಮಾಡಿಸಿದ್ದ ಮೇಸ್ತ್ರಿಯೊಬ್ಬನನ್ನು ಚಿಕ್ಕಜಾಲದ ಹುಣಸಮಾರನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್ ಬಂಧಿತ ಆರೋಪಿ. ತನ್ನ ಬಳಿ ಕೆಲಸ ಮಾಡಿಕೊಂಡಿದ್ದ ಇಬ್ಬರಿಗೆ ಸ್ನೇಹಿತ ಸುದರ್ಶನ್ ಎಂಬಾತನ ಮನೆ ಕಳವು ಮಾಡಲು ತರಬೇತಿ ನೀಡಿದ್ದ. ಏಪ್ರಿಲ್ 18ರಂದು ಮನೆಗೆ ನುಗ್ಗಿದ್ದ ದರೋಡೆಕೋರರು ಚಾಕು ತೋರಿಸಿ ಹಣ ಮತ್ತು ಬಂಗಾರ ದೋಚಿ ಪರಾರಿಯಾಗಿದ್ದರು. ಆರೋಪಿ ಗುರುಪ್ರಸಾದ್ ಮತ್ತು ಸುದರ್ಶನ್ ಸ್ನೇಹಿತರು. ಸುದರ್ಶನ್ ಮತ್ತು ತಂದೆ ಕೃಷ್ಣಚಾರಿ ಮನೆ
ನಿಡಗುಂದಿಯಲ್ಲಿ ಮಳೆಗೆ ಮನೆ ಕುಸಿದು ಮಹಿಳೆ ಜೀವಂತ ಸಮಾಧಿ
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮಳೆಗೆ ಮಣ್ಣಿನ ಮನೆಯ ಮೇಲ್ಚಾವಣಿ ಕುಸಿದು 55 ವರ್ಷದ ಮಹಿಳೆ ಮಹಾದೇವಿ ಜೀವಂತ ಸಮಾಧಿಯಾಗಿದ್ದಾರೆ. ಮೃತರ ಪತಿ ಶಿವಾನಂದ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ. ಗೌರೀಶ್ವರ ದೇವಸ್ಥಾನ ಸಮೀಪವಿರುವ ಮಹಾದೇವಿ ಅವರ ಹಳೆಯ ಮಣ್ಣಿನ ಮನೆ ಮಳೆಗೆ
ಬೇರೆಯವರ ಹೆಸರಲ್ಲಿ ಬುಕ್ ಆಗಿದ್ದ ಲಾಡ್ಜ್ ರೂಂಗೆ ಬಂದಿದ್ದಾತ ಶವವಾಗಿ ಪತ್ತೆ
ಬೆಂಗಳೂರಿನ ಮಡಿವಾಳದ ಮಾರುತಿ ನಗರದಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ತಮಿಳುನಾಡಿನ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪುಳಿಯಂಪಟ್ಟಿ ನಿವಾಸಿ ಮುರಳಿ ಅಲಿಯಾಸ್ ಮಧು (38) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಲಾಡ್ಜ್ ರೂಂನ ಹಾಸಿಗೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದುಕೊಂಡು ಮೃತಪಟ್ಟಿದ್ದಾನೆ. ಪ್ರಕರಣದ ತನಿಖೆ
ಪೊದೆಯೊಳಗೆ ನವಜಾತ ಹೆಣ್ಣು ಶಿಶು ಪತ್ತೆ: ಜಿಲ್ಲಾಡಳಿತದಿಂದ ರಕ್ಷಣೆ
ಚಿಕ್ಕಮಗಳೂರು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಕುಮಾರ ದೇವಸ್ಥಾನದ ಬಳಿ ನವಜಾತ ಹೆಣ್ಣು ಮಗುವನ್ನು ಹೆತ್ತ ತಾಯಿ ರಸ್ತೆ ಬದಿಯ ಮುಳ್ಳಿನ ಪೊದೆಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಒಂದು ದಿನದ ಹಸುಗೂಸನ್ನು ಟವೆಲ್‌ನಲ್ಲಿ
ಲಿಫ್ಟ್ ಸ್ಥಗಿತ: ಏಳು ವರ್ಷದ ಬಾಲಕ ಸಾವು
ಪುಣೆಯ ಸಿಂಹಗಡ್ ರಸ್ತೆ ಪ್ರದೇಶದ ನಿಂಬಾಜಿನಗರದ ರಿದ್ಧಿ ಸಿದ್ಧಿ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಲಿಫ್ಟ್ ಒಳಗೆ ಸಿಲುಕಿ ಏಳು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತ ಬಾಲಕನನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದೆ. ಶಿವಾಂಶ್ ಎಂದಿನಂತೆ ರಾತ್ರಿ 10
ದುಬಾರೆಯಲ್ಲಿ ಮಹಿಳೆ, ಆನೆ ಸಾವು: ವರದಿ ಕಡೆಗಣಿಸಿ ಬೇಜವಾಬ್ದಾರಿ ತೋರಿದ ಅರಣ್ಯ ಇಲಾಖೆ ಕಾರಣ
ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರದಲ್ಲಿ ಎರಡು ದಿನಗಳ ಹಿಂದೆ ಆನೆಗಳ ನಡುವಿನ ಕಾದಾಟಕ್ಕೆ ಚೆನ್ನೈನ ಪ್ರವಾಸಿ ಮಹಿಳೆ ತುಳಸಿ (33) ಬಲಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಸಾಕಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ದುರಂತಕ್ಕೆ ಅರಣ್ಯ ಇಲಾಖೆಯ
ಆಭರಣ ಖರೀದಿಸುವುದಾಗಿ ಉದ್ಯಮಿಯಿಂದ ಮೂರು ಕೋಟಿ ರೂ. ಮೌಲ್ಯದ ಚಿನ್ನ ದೋಚಿದ ವಂಚಕರು
ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ ಮೂರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಗೆ ವಂಚಿಸಿರುವ ಘಟನೆ ನಡೆದಿದೆ. ವಂಚಕರು ಒಂದು ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರ್ತ ಪೇಟೆಯಲ್ಲಿರುವ ‘ಮೆಹ್ತಾ ಜ್ಯುವೆಲ್ಲರಿ’
ಅಮೆರಿಕದಿಂದ ಜೀವಂತ ಗುಂಡುಗಳನ್ನು ತಂದಿದ್ದಾತ ಬೆಂಗಳೂರಿನಲ್ಲಿ ಅರೆಸ್ಟ್
ವಿದೇಶದಿಂದ ಅಕ್ರಮವಾಗಿ ರಿವಾಲ್ವಾರ್‌ನ ಏಳು ಜೀವಂತ ಗುಂಡುಗಳನ್ನು ತಂದಿದ್ದ ಆರೋಪದಡಿ ಅನಿವಾಸಿ ಭಾರತೀಯನೊಬ್ಬನನ್ನು ಬೆಂಗಳೂರು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್.ಟಿ.ನಗರದ ಮುತ್ತಾವರ್ ಅರ್ಮಾನ್ ಬಂಧಿತ. ಆರೋಪಿಯಿಂದ ರೂಗರ್ ಕಂಪನಿಯ ಏಳು ಜೀವಂತ ಗುಂಡುಗಳ ಮ್ಯಾಗ್ಜಿನ್ ಜಪ್ತಿ ಮಾಡಲಾಗಿದೆ. ಸ್ನೇಹಿತನ ಜತೆ
ತಾಯಿ ಬೈದರೆಂದು ಪತ್ರ ಬರೆದಿಟ್ಟು ಮನೆ ತೊರೆದ ಮಂಡ್ಯದ ಬಾಲಕಿಯರು
ತಾಯಿ ಬೈದಿದ್ದಕ್ಕೆ ಸಿಟ್ಟಾಗಿ ಸೋದರಿ ಬಾಲಕಿಯರಿಬ್ಬರು ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಎಂಬವರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸೋದರಿಯರು. ಯಾವುದೋ ವಿಷಯಕ್ಕೆ ತಾಯಿ ಬೈದಿದ್ದಾರೆ. ಇದರಿಂದ ನೊಂದು ಭಾವುಕ
ಕೋಟಿ ರೂ. ವರದಕ್ಷಿಣೆ, ಫಾರ್ಚುನರ್ ಕಾರು, ಕೋಟಿ ರೂ. ವೆಚ್ಚದಲ್ಲಿ ಮದುವೆ: 14 ತಿಂಗಳಲ್ಲಿ ಮಗಳು ಸುಸೈಡ್
ಒಂದು ಕೋಟಿ ರೂಪಾಯಿ ವರದಕ್ಷಿಣೆ, ಫಾರ್ಚುನರ್ ಕಾರು ಜೊತೆಗೆ ಕೋಟಿ ರೂಪಾಯಿ ವೆಚ್ಚದಲ್ಲಿ ಮದುವೆ, 14 ತಿಂಗಳಲ್ಲಿ ಮಗಳ ಆತ್ಮಹತ್ಯೆ ಇದು ಗ್ರೇಟರ್ ನೋಯ್ಡಾದ ಜಲ್ಪುರ ವಲಯದಲ್ಲಿ ನಡೆದ ದುರಂತ ಕಥೆ. ಮದುವೆಯಾದ 14 ತಿಂಗಳಿಗೆ ಬದುಕು ಭಾರವಾಗಿ 24 ವರ್ಷದ




