Wednesday, September 30, 2026
Menu

ಹೋಟೆಲ್‌ನಲ್ಲಿ ಯುವತಿ ಶವ ಪತ್ತೆ: ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಂದೆ ಎಂದ ಯುವಕ

ಹೈದರಾಬಾದ್‌ನ ಹೋಟೆಲ್‌ವೊಂದರಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದು, ಆಕೆ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಂದಿರುವುದಾಗಿ ಯುವಕ ಪೊಲೀಸ್‌ ತನಿಖೆ ವೇಳೆ ತಿಳಿಸಿದ್ದಾನೆ.

ಕಳೆದ ಮಂಗಳವಾರ ಯುವತಿ ಹೋಟೆಲ್‌ನಲ್ಲಿ ಅನುಮಾನಾಸ್ಪದ ರೀತಿ ಶವವಾಗಿ ಪತ್ತೆಯಾಗಿದ್ದಳು. ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ ಬಳಿಕ ಪೊಲೀಸರು ಆಗಮಿಸಿ ಗಣೇಶ್ ಹೆಸರಿನಲ್ಲಿ ದಾಖಲಾಗಿದ್ದ ಕೊಠಡಿಯನ್ನು ಪರಿಶೀಲಿಸಿದ್ದಾರೆ.

ಶರೋನ್ ನಿಕಿತಾ ಟೋಪ್ನೊ(29) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಸ್ನೇಹಿತ ಶ್ರೀನಿವಾಸ್ ರವಿ ತೇಜ ಕೊಲೆ ಮಾಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮಾಧಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶಾಖಪಟ್ಟಣದ ಖಾಸಗಿ ಕಂಪನಿಯ ಉದ್ಯೋಗಿ ನಿಖಿತಾ ಮತ್ತು ರವಿತೇಜ ಸೆಪ್ಟೆಂಬರ್ 21 ರ ಸೋಮವಾರ ಮಾಧಾಪುರದ ಸಿದ್ದಿಕಿ ನಗರದ ರಸ್ತೆ ಸಂಖ್ಯೆ 5 ರಲ್ಲಿರುವ ಹೋಟೆಲ್‌ನ ಕೊಠಡಿ ಸಂಖ್ಯೆ 304 ರಲ್ಲಿ ತಂಗಿದ್ದರು. ಆ ರಾತ್ರಿಯೇ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ನಿಕಿತಾ ಪ್ರಜ್ಞಾಹೀನಳಾಗಿದ್ದಾಳೆಂದು ರವಿತೇಜ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದು, ಅವರ ಸಹಾಯದಿಂದ ಆಕೆಯನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸಿದ ಬಳಿಕ ರವಿತೇಜ ಆಸ್ಪತ್ರೆಯಿಂದ ಪರಾರಿಯಾಗಿ ಮೊಬೈಲ್‌ ಸ್ವಿಚ್ ಆಫ್ ಮಾಡಿದ್ದ.

45 ಲಕ್ಷ ರೂ. ವೆಚ್ಚದಲ್ಲಿ ಮದುವೆ: ನಾಲ್ಕು ತಿಂಗಳಲ್ಲಿ ಯುವತಿ ಆತ್ಮಹತ್ಯೆ

ನಾಲ್ಕು ತಿಂಗಳ ಹಿಂದೆ 45 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ೨೪ ವರ್ಷದ ಎಂಜಿನಿಯರ್‌ ಯುವತಿ ಪುಣೆಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವರದಕ್ಷಿನೆ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಯುವತಿಯ ಪೋಷಕರು ಆರೋಪಿಸಿದ್ದಾರೆ.

ವೈಷ್ಣವಿ ಓಂಕಾರ್ ಗಿಸ್ರೆ ಆತ್ಮಹತ್ಯೆ ಮಾಡಿಕೊಂಡ ಯುವತಿ, ಮೇ 9 ರಂದು ಓಂಕಾರ್ ಸಂಜಯ್ ಗಿಸ್ರೆ (28) ಎಂಬಾತನನ್ನು ಮದುವೆಯಾಗಿದ್ದರು. ಮೇ ತಿಂಗಳಲ್ಲಿ 45 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಜೊತೆ ಅಳಿಯನಿಗೆ 116.64 ಗ್ರಾಂ ಚಿನ್ನ ಉಡುಗೊರೆ ನೀಡಲಾಗಿತ್ತು. ಕಾರು ಖರೀದಿಸಲು 5 ಲಕ್ಷ ರೂ. ನೀಡುವಂತೆ ಪತಿ ಮತ್ತು ಅತ್ತೆ-ಮಾವ ಒತ್ತಾಯಿಸುತ್ತಿದ್ದರು ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಪುರಂದರ ತಾಲೂಕಿನ ನಿವಾಸಿ ಪ್ರವೀಣ್ ರಘುನಾಥ್ ಜರಂಡೆ ಮಗಳ ಆತ್ಮಹತ್ಯೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಯುವತಿಯ ಪತಿ, ಮಾವ ಸಂಜಯ್ ಮಹಾದೇವ್ ಗಿಸ್ರೆ (49) ಮತ್ತು ಅತ್ತೆ ರೂಪಾಲಿ ಸಂಜಯ್ ಗಿಸ್ರೆ (42) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *