ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ14 ಆರೋಪಿಯಾಗಿ ಜೈಲಿನಲ್ಲಿರುವ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾದ ಬಳಿಕ ಎರಡನೇ ಬಾರಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಮಾಫಿ ಸಾಕ್ಷಿ ಹೇಳಿಕೆಗಳಿಗೆ ಆಕ್ಷೇಪಣೆ ಸಲ್ಲಿಸುವ ಅವಕಾಶ ಇಲ್ಲ ಎಂದು ಹೇಳಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಆರೋಪಿಗಳಾದ ದರ್ಶನ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಹಾಗೂ ಜಗದೀಶ್ ಹಾಜರಾಗಿದ್ದಾರೆ. ಆರೋಪಿಗಳ ಹಿಂದೆ ಕುರ್ಚಿಯಲ್ಲಿ ದರ್ಶನ್ ಒಂಟಿಯಾಗಿ ಕುಳಿತಿದ್ದರೆ, ಪವಿತ್ರಗೌಡ ಜರಾಗಿದ್ದು ಟೆನ್ಷನ್‌ನಲ್ಲಿರುವಂತೆ ಕಂಡು ಬಂದರು.
ಮಾಫಿ ಸಾಕ್ಷಿಯ ಅರ್ಜಿ ವಿಚಾರಣೆ ನಡೆದಿದ್ದು ಇದರಲ್ಲಿ ಆಕ್ಷೇಪಣೆ ಸಲ್ಲಿಸಲು ಆರೋಪಿಗಳಿಗೆ ಅವಕಾಶ ಇಲ್ಲ ಎಂದು ಕೋರ್ಟ್ ಆದೇಶಿಸಿದೆ. ಪ್ರಮುಖ ಆರೋಪಿ ದರ್ಶನ್ ಸೇರಿದಂತೆ ಆರೋಪಿಗಳ ಆಕ್ಷೇಪಣೆ ಪರಿಗಣಿಸಲು ನ್ಯಾಯಾಲಯ ನಿರಾಕರಿಸಿದೆ.
ಆಕ್ಷೇಪಣೆಗೆ ಅವಕಾಶ ಇಲ್ಲ ಎಂದು ಕೋರ್ಟ್ ಹೇಳಿರುವುದರಿಂದ ದರ್ಶನ್ ಮತ್ತು ಇತರ ಆರೋಪಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಾಫಿ ಸಾಕ್ಷಿಯ ಅರ್ಜಿಗೆ ಆಕ್ಷೇಪಣೆ ಇದೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು. ಆದರೆ ಕೋರ್ಟ್ ಅದಕ್ಕೆ ಅವಕಾಶ ಇಲ್ಲ ಎಂದು ಸೆಷನ್ಸ್ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ.
ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಪರಿಗಣನೆ ಬಗ್ಗೆ ಪ್ರತ್ಯೇಕ ಆದೇಶ ಮಾಡಲಾಗುವುದು ಎಂದು ನ್ಯಾ ಸುಜಾತ ಸಂಬ್ರಾಣಿ ಮಹತ್ವದ ಆದೇಶ ನೀಡಿದ್ದಾರೆ.


