ಬೆಂಗಳೂರಿನ ಜಕ್ಕೂರು ಕೃಷ್ಣ ರೆಸ್ಟೋರೆಂಟ್ ಬಳಿಯ ಮರವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನೇಪಾಳದ ಯುವತಿಯರಿಬ್ಬರು ಪತ್ತೆಯಾಗಿದ್ದಾರೆ. ನೇಪಾಳ ಮೂಲದ ಸಿರ್ಜನಾ (22), ರಿತಾ (23) ಶವವಾಗಿ ಪತ್ತೆಯಾಗಿರುವ ಯುವತಿಯರು.
ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಬಂದಾಗ ಈ ದುರಂತ ಬೆಳಕಿಗೆ ಬಂದಿದೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಸಂಬಂಧಿಕರಿಗೂ ಪೊಲೀಸರು ಮಾಹಿತಿ ನೀಡಿದ್ದು, ಕುಟುಂಬಸ್ಥರು ಬಂದ ಬಳಿಕ ಹೆಚ್ಚಿನ ವಿವರ ಸಿಗಲಿದೆ. ಆತ್ಮಹತ್ಯೆಗೆ ಕಾರಣವೇನು, ಆತ್ಮಹತ್ಯೆಯೇ ಅಥವಾ ಕೊಲೆಯಾಗಿರಬಹುದೇ ಎಂಬ ಬಗ್ಗೆ ತನಿಖೆಯಿಂದ ಸ್ಪಷ್ಟತೆ ಸಿಗಬೇಕಿದೆ. ಕೊಲೆಯಾಗಿದ್ದರೆ ಯಾರು ಯಾವ ಕಾರಣಕ್ಕೆ ಮಾಡಿರಬಹುದು, ಯುವತಿಯರ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮಹಿಳೆಯ ಕೊಲೆಗೈದು ೨೦ ದಿಗಳ ಬಳಿಕ ವ್ಯಕ್ತಿ ಪೊಲೀಸ್‌ಗೆ ಸರೆಂಡರ್
ಮೈಸೂರಿನಲ್ಲಿ ತನ್ನ ಜೊತೆ ವಾಸವಿದ್ದ ಮಹಿಳೆಯ ಕೊಲೆಗೈದ ೨೦ ದಿನಗಳ ಬಳಿಕ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಮಂಡ್ಯ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಜ್ಯೋತಿ (40) ಕೊಲೆಯಾದ ಮಹಿಳೆ.
ಕನಕಪುರದ ಆರೋಪಿ ಸಿದ್ದರಾಜು (64) ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯಲ್ಲಿ ಜ್ಯೋತಿ ಜೊತೆ ವಾಸಿಸುತ್ತಿದ್ದ ಎನ್ನಲಾಗಿದೆ.
ಜ್ಯೋತಿ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕ ಸಿದ್ದರಾಜು ಜೊತೆಗೆ ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯ ಆಶ್ರಯ ಲೇಔಟ್‌ನಲ್ಲಿ ಜ್ಯೋತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆಕೆ
ಇವರು ಆಗಾಗ ಪೋಷಕರ ಮನೆಗೆ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜುಲೈ 13ರಂದು ನಡೆದ ಜಗಳ ವಿಕೋಪಕ್ಕೆ ಹೋಗಿ ಜ್ಯೋತಿ ಮಲಗಿದ್ದಾಗ ಆರೋಪಿ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


