Sunday, September 20, 2026
Menu

ರೇಣುಕಾಸ್ವಾಮಿ ಕೊಲೆ ಕೇಸ್‌: ಮಾಫಿ ಸಾಕ್ಷಿಯಾಗಲು ಪ್ರದೋಶ್‌ ಅರ್ಜಿ, ದರ್ಶನ್‌ಗೆ ಸಂಕಷ್ಟ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವ ಎ-14 ಪ್ರದೋಶ್‌, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.  ಈ ಬೆಳವಣಿಗೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ಗೆ ದೊಡ್ಡ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

ನಾನು ಸತ್ಯವನ್ನೇ ಹೇಳುತ್ತೇನೆ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಎಂದು ಕೋರಿ ಆರೋಪಿ ಪ್ರದೋಷ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಗುರುವಾರ ನ್ಯಾಯಾಧೀಶರ ಮುಂದೆ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಯನ್ನು ವಿಚಾರಣೆಗೆ ಹಾಜರುಪಡಿಸಲಾಗುವುದು. ನ್ಯಾಯಾಧೀಶರ ಮುಂದೆ ಹಾಜರಾಗಿ ಪ್ರಕರಣದಲ್ಲಿ ಘಟನಾವಳಿಗಳ ಬಗ್ಗೆ ಆರೋಪಿ ಹೇಳಲಿದ್ದಾನೆ.

ರೇಣುಕಾಸ್ವಾಮಿ ಕೊಲೆಯ ದಿನ ಪ್ರದೋಶ್‌ ಸ್ಟೋನಿ ಬ್ರೂಕ್‌ನಿಂದ ದರ್ಶನ್ ಜೊತೆ ಶೆಡ್‌ಗೆ ಹೋಗಿದ್ದ.‌ ಹಲ್ಲೆ ಮಾಡುವಾಗ ಸ್ಥಳದಲ್ಲಿಯೇ ಇದ್ದ ಆತ ರೇಣುಕಾಸ್ವಾಮಿಗೆ ʼಹೊಡೆಯೋದು ಸಾಕು ನಿಲ್ಲಿಸಿ, ಸತ್ತು ಹೋಗ್ತಾನೆʼ ಎಂದಿದ್ದ ಎಂಬುದು ಪೊಲೀಸರ ಹೇಳಿಕೆಯಲ್ಲಿದೆ. ಶವ ಸಾಗಿಸುವ ಸಲುವಾಗಿ ಸಬ್ ಇನ್ಸ್ಪೆಕ್ಟರ್‌ಗೆ ಪ್ರದೋಶ್‌ ಫೋನ್ ಮಾಡಿದ್ದ. ಶವ ಸಾಗಾಟದ ತನಕವೂ ದರ್ಶನ್ ಜೊತೆಯಲ್ಲಿಯೇ ಇದ್ದ. ವಿನಯ್ ಕುಲಕರ್ಣಿ ಆರೋಪಿಯಾಗಿರುವ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿಯಾಗಿದ್ದ. ಹೀಗಾಗಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಆಗಿತ್ತು.

Related Posts

Leave a Reply

Your email address will not be published. Required fields are marked *