ಬಳ್ಳಾರಿಯ ಬಟ್ಟಿ ಏರಿಯಾದಲ್ಲಿ ಪ್ರೀತಿಸಿ ಮದುವೆಯಾಗಿದ್ದ ನಭೀ ರಸೂಲ್ ಎಂಬ ಯುವಕನನ್ನು ಆರತಕ್ಷತೆ ದಿನವೇ ರಾತ್ರಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವುದಾಗಿ ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಭೀ ರಸೂಲ್ ಹತ್ಯೆಯಾದ ಯುವಕ. ನಭೀ ರಸೂಲ್ ಯುವತಿಯೊಬ್ಬರನ್ನು ಪ್ರೀತಿಸಿ ಇತ್ತೀಚೆಗೆ ವಿವಾಹವಾಗಿದ್ದರು. ಗುರುವಾರ ಸಂಜೆ ಯುವಕನ ಮನೆಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಯುವತಿಗೆ ಈ ಹಿಂದೆ ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿರುವುದಾಗಿ ಹೇಳಲಾಗಿದೆ. ಸಂಬಂಧಿಕರು, ಆರತಕ್ಷತೆ ಮುಗಿದ ನಂತರ ರಾತ್ರಿ 11 ಗಂಟೆಯ ಹೊತ್ತಿಗೆ ನಭೀ ರಸೂಲ್ ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿ ಕಳೆದರೂ ಮನೆಗೆ ವಾಪಸ್ ಬಂದಿರಲಿಲ್ಲ. ಬೆಳಿಗ್ಗೆ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಬಳ್ಳಾರಿ ಎಸ್ ಪಿ ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತೆ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕಳಪೆ ಸಂಪ್: ಮೇಸ್ತಿಯ ತಮ್ಮನ ಕೊಲೆಗೈದ ಮನೆ ಮಾಲೀಕ
ಬೆಂಗಳೂರು ಉತ್ತರ ತಾಲೂಕು ಕಿತ್ತನಹಳ್ಳಿಯಲ್ಲಿ ಮನೆಯ ನೀರಿನ ಸಂಪಿನ ಚೇಂಬರ್ ಸರಿಯಾಗಿ ನಿರ್ಮಿಸದೆ ಕಳಪೆಯಾಗಿದೆ ಎಂದು ಸಿಟ್ಟಿಗೆದ್ದ ಮನೆ ಮಾಲೀಕ ಇತರ ಮೂವರೊಂದಿಗೆ ಗಾರೆ ಮೇಸ್ತಿಯ ತಮ್ಮನಿಗೆ ಹೊಡೆದು ಕೊಲೆ ಮಾಡಿದ್ದಾರೆ.
ರವಿ (35) ಕೊಲೆಯಾದ ವ್ಯಕ್ತಿ. ಮನೆಯ ಮಾಲೀಕ ದೇವರಾಜ್ ಹಾಗೂ ಮಗ ಸೇರಿದಂತೆ ನಾಲ್ವರು ಕೊಲೆ ಆರೋಪಿಗಳು. ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.


